24.5 C
ಪುತ್ತೂರು, ಬೆಳ್ತಂಗಡಿ
July 14, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಎಸ್.ಡಿ.ಎಂ. ಸಂಸ್ಥೆಗಳ ಸಾಧನೆಗಳ ಅನಾವರಣ: ‘Institutions of Legacy’ಕಾಫಿ ಟೇಬಲ್ ಪುಸ್ತಕ ಹೆಗ್ಗಡೆಯವರಿಂದ ಲೋಕಾರ್ಪಣೆ

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಎಸ್‌ಡಿಎಂ ಸಂಸ್ಥೆಗಳ ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಪಯಣವನ್ನು ದಾಖಲಿಸುವ‘Institutions of Legacy’ ಕಾಫಿ ಟೇಬಲ್ ಪುಸ್ತಕವು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಬಿಡುಗಡೆಗೊಂಡಿತು.Academic Insights ಸಂಸ್ಥೆಯ ವತಿಯಿಂದ ಪ್ರಕಟಿತ ಈ ಕೃತಿಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಲೋಕಾರ್ಪಣೆಗೊಳಿಸಿದರು.

ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಡಾ. ಹೆಗ್ಗಡೆಯವರು, ಶ್ರೀ ರತ್ನವರ್ಮ ಹೆಗ್ಗಡೆಯವರ ದೂರದೃಷ್ಟಿಯ ನಾಯಕತ್ವದಲ್ಲಿ ಆರಂಭವಾದ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳು ಕಳೆದ ಐದು ದಶಕಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅಪೂರ್ವ ಸಾಧನೆಗಳನ್ನು ದಾಖಲಿಸಿದ್ದು, ರಾಜ್ಯದ ಮಾದರಿ ಶಿಕ್ಷಣ ಸಂಸ್ಥೆಗಳಾಗಿ ಗುರುತಿಸಿಕೊಂಡಿವೆ ಎಂದು ಹೇಳಿದರು. ಸಂಸ್ಥೆಗಳ ಬೆಳವಣಿಗೆಯಲ್ಲಿ ಶ್ರಮಿಸಿದ ಸಿಬ್ಬಂದಿ, ಶಿಕ್ಷಕರು ಹಾಗೂ ತಂಡದ ಸದಸ್ಯರ ಸೇವೆಯನ್ನು ಅವರು ಈ ಸಂದರ್ಭದಲ್ಲಿ ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಮತಿ ಹೇಮಾವತಿ ವಿ. ಹೆಗ್ಗಡೆಯವರು ಪುಸ್ತಕವು ಅತ್ಯಂತ ಆಕರ್ಷಕವಾಗಿ ಮೂಡಿಬಂದಿದ್ದು, ಅದರ ಸಂಪಾದಕೀಯ ಹಾಗೂ ನಿರ್ಮಾಣ ತಂಡದ ಪರಿಶ್ರಮ ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಮಾತನಾಡಿ, ಕಾಫಿ ಟೇಬಲ್ ಪುಸ್ತಕವು ಶ್ರೀ ಕ್ಷೇತ್ರ ಧರ್ಮಸ್ಥಳದ ವಿವಿಧ ಕಾರ್ಯಕ್ಷೇತ್ರಗಳನ್ನು ಸಂಕ್ಷಿಪ್ತವಾಗಿ ಹಾಗೂ ಮನೋಜ್ಞ ಛಾಯಾಚಿತ್ರಗಳ ಮೂಲಕ ಪರಿಚಯಿಸುತ್ತದೆ. ‘ಚತುರ್ದಾನ’ ಪರಂಪರೆಯಿಂದ ಆರಂಭಗೊಂಡು ‘ವಿದ್ಯಾದಾನ’ದ ಮಹತ್ವವನ್ನು ಸಾರುವ ಶಿಕ್ಷಣ ಸಂಸ್ಥೆಗಳ ಸಮಗ್ರ ಮಾಹಿತಿಯನ್ನು ಈ ಕೃತಿ ಒಳಗೊಂಡಿದೆ ಎಂದು ಹೇಳಿದರು.

‘Institutions of Legacy’’ ಪುಸ್ತಕದಲ್ಲಿ ಧರ್ಮಸ್ಥಳದ ಅಭಿವೃದ್ಧಿ, ಸಾಮಾಜಿಕ ಸೇವೆ, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಶಿಕ್ಷಣ ಕ್ಷೇತ್ರದ ಸಾಧನೆಗಳ ಸಮಗ್ರ ಚಿತ್ರಣವನ್ನು ದಾಖಲಿಸಲಾಗಿದೆ. ಇದರೊಂದಿಗೆ ಎಸ್.ಕೆ.ಡಿ.ಆರ್.ಡಿ.ಪಿ., ಸಿರಿ, ರುಡ್‌ಸೆಟ್, ಎಸ್.ಡಿ.ಎಮ್. ಧರ್ಮೋತ್ಥಾನ ಟ್ರಸ್ಟ್ ಸೇರಿದಂತೆ ವಿವಿಧ ಸಂಸ್ಥೆಗಳ ಕಾರ್ಯಚಟುವಟಿಕೆಗಳು, ಸಾಧನೆಗಳು ಮತ್ತು ಇತಿಹಾಸವನ್ನು ಒಳಗೊಂಡಿದೆ.

ಕಾರ್ಯಕ್ರಮದಲ್ಲಿ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್, ಶ್ರೀಮತಿ ಸುಪ್ರಿಯಾ ಹರ್ಷೇಂದ್ರ ಕುಮಾರ್, ಪ್ರಾಂಶುಪಾಲರಾದ ಡಾ. ವಿಶ್ವನಾಥ್, ಡಾ. ಅಶೋಕ್ ಕುಮಾರ್, ಧನ್ಯಕುಮಾರ್, ಪ್ರಶಾಂತ್ ಬಿ.ಆರ್., ಅರವಿಂದ್ ಹಾಗೂ Academic Insights ತಂಡದ ಪ್ರತಿನಿಧಿಗಳಾದ ಮೊನಿಶಾ ರಾಕೇಶ್, ಮೊಯಿನ್, ಅಗಸ್ಟಿನ್ ಎಸ್. ನಿಯೋಲ್ ಮತ್ತು ಮಧು ಉಪಸ್ಥಿತರಿದ್ದರು.

ಈ ಕೃತಿ ಎಸ್‌ಡಿಎಂ ಸಂಸ್ಥೆಗಳ ಪರಂಪರೆ, ಸಾಧನೆ ಮತ್ತು ಸಮಾಜಮುಖಿ ಸೇವೆಯ ದಾಖಲೆಯಾಗಿ ಮುಂದಿನ ಪೀಳಿಗೆಗಳಿಗೆ ಮಾರ್ಗದರ್ಶಕವಾಗಲಿದೆ ಎಂದು ಕಾರ್ಯಕ್ರಮದಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

Related posts

ದೂರುದಾರ ಮಾಸ್ಕ್ ಮ್ಯಾನ್ ಚಿನ್ನಯ್ಯ 10 ದಿನಗಳವರೆಗೆ ಎಸ್.ಐ.ಟಿ ಕಸ್ಟಡಿಗೆ

Suddi Udaya

ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೊಸ ವರ್ಷಾಚರಣೆ

Suddi Udaya

ಬೆಳ್ತಂಗಡಿ ಮುಳಿಯದಲ್ಲಿ ‘ಮುಳಿಯ ಚಿನ್ನೋತ್ಸವ’ ವಿಶ್ವ ವಿನೂತನ ಚಿನ್ನಾಭರಣಗಳ ಹಬ್ಬಕ್ಕೆ ಚಾಲನೆ

Suddi Udaya

ಬೆಳ್ತಂಗಡಿ ನಗರ ಮಹಾಶಕ್ತಿ ಕೇಂದ್ರದಸಂಚಾಲಕರಾಗಿ ಸುನೀಲ್ ಬೆಳ್ತಂಗಡಿ, ಸಹಸಂಚಾಲಕರಾಗಿ ನಿತಿನ್

Suddi Udaya

ಬೆಳ್ತಂಗಡಿ : ಬುರುಡೆ ಪ್ರಕರಣದಲ್ಲಿ ಕೇರಳ ಸಂಸದನಿಗೆ ಸಂಕಷ್ಟ

Suddi Udaya

ಮೆಲ್ಕಾರು ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಇದರ ಕೇಂದ್ರೀಯ ಸಮಿತಿಯ ಸಭೆ

Suddi Udaya
error: Content is protected !!