26.9 C
ಪುತ್ತೂರು, ಬೆಳ್ತಂಗಡಿ
October 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪೊಲೀಸ್

ಗಸ್ತಿನಲ್ಲಿದ್ದ ಉರ್ವಾ ಠಾಣಾ ಪೊಲೀಸ್ ಕಾನ್‌ಸ್ಟೇಬಲ್ ಮೇಲೆ ಬೈಕ್ ಸಹಸವಾರನಿಂದ ಹಲ್ಲೆ

ಬೆಳ್ತಂಗಡಿ : ರಾತ್ರಿ ವೇಳೆ ವಾಹನಗಳ ತಪಾಸಣೆ ನಡೆಸುತ್ತಿದ್ದ ಉರ್ವಾ ಠಾಣಾ ಪೊಲೀಸ್‌ ಕಾನ್‌ಸ್ಟೇಬಲ್ ಒಬ್ಬರ ಮೇಲೆ ದ್ವಿಚಕ್ರ ವಾಹನದಲ್ಲಿ ಬಂದ ಯುವಕರು ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ನಗರದ ಉರ್ವ ಠಾಣೆ ವ್ಯಾಪ್ತಿಯ ಕೋಡಿಕಲ್ ನಾರಾಯಣಗುರು ಕೋ ಆಪರೇಟಿವ್ ಸೊಸೈಟಿ ಬಳಿ ಮೇ 23ರಂದು ತಡರಾತ್ರಿ ಎರಡು ಗಂಟೆ ಸುಮಾರಿಗೆ ನಡೆದಿದೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಸ್ಥಳದಲ್ಲಿ ಇಬ್ಬರು ಪೊಲೀಸ್‌ ಕಾನ್‌ಸ್ಟೇಬಲ್ ಕರ್ತವ್ಯ ನಿರತರಾಗಿದ್ದ ವೇಳೆ ಇಬ್ಬರು ಯುವಕರು ದ್ವಿಚಕ್ರ ವಾಹನವೊಂದರಲ್ಲಿ ಅತಿ ವೇಗವಾಗಿ ತೆರಳಿದ್ದರು. ವಾಹನ ನಿಲ್ಲಿಸುವಂತೆ ಪೊಲೀಸರು ಸೂಚನೆ ನೀಡಿದರೂ ಲೆಕ್ಕಿಸದೆ ಸಾಗಿದ್ದರು. ಆನಂತರ ಅದೇ ಮಾರ್ಗದಲ್ಲಿ ಬಂದ ಯುವಕರು ಸಿಮೆಂಟ್ ಶೀಟ್‌ನ ತುಂಡನ್ನು ಹಿಡಿದು ಪೊಲೀಸ್ ಕಾನ್‌ಸ್ಟೇಬಲ್ ಒಬ್ಬರ ಮೇಲೆ ನೇರವಾಗಿ ಹೊಡೆದು ಪರಾರಿಯಾಗಿದ್ದಾರೆ.

ಪೊಲೀಸ್‌ ಕಾನ್‌ಸ್ಟೇಬಲ್ ಹನುಮಂತ ಕಂಠಿ ಎಂಬವರು ಏಟಿನಿಂದ ತಪ್ಪಿಸಿಕೊಳ್ಳಲು ಕೆಳಕ್ಕೆ ಬಗ್ಗಿದ್ದರಿಂದ ಹಲ್ಲೆಯಿಂದ ಪಾರಾಗಿದ್ದಾರೆ. ಆದರೂ ತಲೆಯ ಭಾಗಕ್ಕೆ ಪೆಟ್ಟು ಬಿದ್ದು ಗಾಯವಾಗಿದೆ ಎಂದು ಉರ್ವಾ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.

Related posts

ನರೇಂದ್ರ ಮೋದಿ ಹುಟ್ಟುಹಬ್ಬ: ಇಂದಬೆಟ್ಟು ಶಕ್ತಿಕೇಂದ್ರ ವತಿಯಿಂದ ವಿವಿಧ ಧಾರ್ಮಿಕ ಕ್ಷೇತ್ರಗಳಲ್ಲಿ ವಿಶೇಷ ಪೂಜೆ

Suddi Udaya

ನೆಲ್ಯಾಡಿ ಸೆಂಟ್ ಅಲ್ಫೋನ್ಸ ಎಸ್‌ಎಂವೈಎಂ ವತಿಯಿಂದ ಪಂಚಾಯತ್‌ಗೆ ಡಸ್ಟ್‌ಬಿನ್ ವಿತರಣೆ

Suddi Udaya

ಕಕ್ಕಿಂಜೆ: ಗಾಂಧಿನಗರ ನಿವಾಸಿ ವೀರಪ್ಪ ಗೌಡ ನಿಧನ

Suddi Udaya

ಮುಂಬೈ ಭಜನಾ ಮಂಡಳಿಗಳ ಒಕ್ಕೂಟದ ಸಂಸ್ಥೆ, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಮಹಾರಾಷ್ಟ್ರ ಘಟಕ ದಿಂದ ಭಜಕ ವಿ ಹರೀಶ್ ನೆರಿಯ ರವರಿಗೆ ಗುರುವಂದನೆ

Suddi Udaya

ಬೆಳ್ತಂಗಡಿ: ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆ

Suddi Udaya

ಮಲವಂತಿಗೆ ಗ್ರಾಮ ಪಂಚಾಯತ್ ನ ಗ್ರಾಮಸಭೆ

Suddi Udaya
error: Content is protected !!