27.6 C
ಪುತ್ತೂರು, ಬೆಳ್ತಂಗಡಿ
October 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಆಮಂತ್ರಣ ವೇದಿಕೆಯ ಅಧ್ಯಕ್ಷೆ ವಿದ್ಯಾಶ್ರೀ ಅಡೂರ್ ರವರ “ಕವಿತೆಯೆoಬ ಕೇದಗೆ” ಭಾವಗೀತೆಯ ಧ್ವನಿ ಮುದ್ರಣ ಬಿಡುಗಡೆ

ಬೆಳ್ತಂಗಡಿ:ಮಂಗಳೂರಿನ ನಂತೂರು ಸಂದೇಶ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಆಮಂತ್ರಣ ವೇದಿಕೆಯ ಅಧ್ಯಕ್ಷೆ, ಸಾಹಿತಿ, ಕವಯತ್ರಿ ಶ್ರೀಮತಿ ವಿದ್ಯಾಶ್ರೀ ಅಡೂರ್ ಅವರು ರಚಿಸಿ ಹಾಡಿರುವ ಕವಿತೆಯೆoಬ ಕೇದಗೆ ಎಂಬ ಭಾವಗೀತೆಯ ಧ್ವನಿ ಮುದ್ರಣ ಬಿಡುಗಡೆಗೊಂಡಿತು.

ಖ್ಯಾತ ಹಾಸ್ಯ ಬರಹಗಾರ್ತಿಯಾದ ಭುವನೇಶ್ವರಿ ಹೆಗಡೆ,ಕಲಾಪೋಷಕರಾದ ಭುಜಬಲಿ ಧರ್ಮಸ್ಥಳ, ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರು ಭಾವಗೀತೆ ಲೋಕಾರ್ಪಣೆಯನ್ನು ನೆರವೇರಿಸಿದರು.

ಈ ಭಾವಗೀತೆಯನ್ನು ವಿದ್ಯಾಶ್ರೀ ಅವರ ಎರಡನೇ ಕವನಸಂಕಲನ ಭಾವಬೇತಾಳದಿಂದ ಆರಿಸಿಕೊಳ್ಳಲಾಗಿದೆ.ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆಯ ಮಂಗಳೂರು ಘಟಕದ ಪದಪ್ರಧಾನ ಸಮಾರಂಭದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಂಗಳೂರು ಆಮಂತ್ರಣದ ನಿಯೋಜಿತ ಅಧ್ಯಕ್ಷರಾದ ಲತೇಶ್ ಪುತ್ರನ್, ದ. ಕ ಜಿಲ್ಲಾಧ್ಯಕ್ಷರಾದ ವಿಂಧ್ಯಾ ರೈ ಕಡೆಶಿವಾಲಯ, ಆಮಂತ್ರಣದ ರೂವಾರಿಯಾದ ವಿಜಯ್ ಕುಮಾರ್ ಜೈನ್ ಮತ್ತಿತರರು ಉಪಸ್ಥಿತರಿದ್ದರು.

Related posts

ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾಟ: ಶೊರೀನ್ ರಿಯೂ ಉಜಿರೆ ಹಾಗೂ ಬೆಳ್ತಂಗಡಿ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿ

Suddi Udaya

ಬಳಂಜ ಅಭಿಮಾನಿ ಬಳಗದಿಂದ ಮಾಜಿ ಶಾಸಕ ವಸಂತ ಬಂಗೇರರಿಗೆ ಸಾರ್ವಜನಿಕ ನುಡಿನಮನ

Suddi Udaya

ಬಡಗಕಾರಂದೂರು ಸ.ಹಿ.ಪ್ರಾ, ಶಾಲೆಯಲ್ಲಿ ಗಿಡ ನಾಟಿ ಕಾರ್ಯಕ್ರಮ

Suddi Udaya

ಪಡಂಗಡಿ: ಕುದ್ರೆಂಜ ಬಳಿ ಸೇತುವೆ ಕುಸಿತ: ಸಂಪರ್ಕ ಕಡಿತ

Suddi Udaya

ಬೆಳ್ತಂಗಡಿ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ ಶಾಸಕ ಹರೀಶ್ ಪೂಂಜ, ಅಧ್ಯಕ್ಷರಾಗಿ ಗಣೇಶ್ ಕನ್ನಾಜೆ ಆಯ್ಕೆ

Suddi Udaya

ಫೆ.15: ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಹೊರಾಂಗಣಕ್ಕೆ ನಾರಾವಿ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯಿಂದ ರೂ.9 ಲಕ್ಷ ವೆಚ್ಚದಲ್ಲಿ ಹಾಸುಕಲ್ಲು ಸಮರ್ಪಣೆ

Suddi Udaya
error: Content is protected !!