26.9 C
ಪುತ್ತೂರು, ಬೆಳ್ತಂಗಡಿ
October 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ತಣ್ಣೀರುಪಂತ ಶ್ರೀ ಶಾರದಾಂಬ ಭಜನಾ ಮಂದಿರದಲ್ಲಿ ಮಕ್ಕಳ ವ್ಯಕ್ತಿತ್ವ‌ ವಿಕಸನ ಸಮಾರೋಪ ಸಮಾರಂಭ ಹಾಗೂ ಭಜನೋಚ್ಚಯ ಕಾರ್ಯಕ್ರಮ

ತಣ್ಣೀರುಪಂತ: ಶ್ರೀ ಶಾರದಾಂಬ ಭಜನಾ ಮಂಡಳಿ ತಣ್ಣೀರುಪಂಥ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಗುರುವಾಯನಕೆರೆ ಇವರ ಸಹಯೋಗದೊಂದಿಗೆ ನಾಲ್ಕು ದಿನಗಳ ಕಾಲ ನಡೆದ ಭಜನಾ ತರಬೇತಿ ಹಾಗೂ ಮಕ್ಕಳ ವ್ಯಕ್ತಿತ್ವ ವಿಕಸನ ತರಬೇತಿ ಶಿಬಿರದ ಸಮಾರೋಪ ಮತ್ತು ಭಜನೋತ್ಸವ ಕಾರ್ಯಕ್ರಮ ಶಾರದಾಂಬ ಭಜನಾ ಮಂದಿರದಲ್ಲಿ ನಡೆಯಿತು.

ಗುರುವಾಯನಕೆರೆ ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಜಗದೀಶ್ ಶೆಟ್ಟಿ ಮೈರ ಸಭಾಕ್ಷತೆ ಅಧ್ಯಕ್ಷತೆಯನ್ನು ವಹಿಸಿದ್ದರು. ಭಜನಾ ಗುರುಗಳು ಹಾಗೂ ಗುರುವಾಯನಕೆರೆ ತಾಲೂಕು ಪರಿಷತ್ ಕಾರ್ಯದರ್ಶಿ ಸಂದೇಶ್ ಮದ್ದಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಬಿರಾರ್ಥಿ ಮಕ್ಕಳಿಗೆ ಹಾಗೂ ಪೊಷಕರಿಗೆ ನಡೆಸಲಾಗಿದ್ದ ಸಾಂಸ್ಕೃತಿಕ, ಆಟೋಟ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ವೇದಿಕೆಯಲ್ಲಿ ಭಜನಾ ಪರಿಷತ್ ರಾಜ್ಯಾಧ್ಯಕ್ಷ ಚಂದ್ರಶೇಖರ್ ಸಾಲಿಯಾನ್ , ಸುನಿಲ್ ಕುಮಾರ್ ಅಗರಿ ಸದಾನಂದ ಶೆಟ್ಟಿ ಮಡಪ್ಪಾಡಿ, ಸುರೇಶ್ ಕಳಾಯಿ, ಚಂದ್ರಹಾಸ್ ಪಕಳ, ಪ್ರಭಾಕರ ಪೊಸಂದೋಡಿ, ಗಂಗಯ್ಯ ನಾಯ್ಕ್, ವಸಂತ ಮಡಕ್ಕಿಲ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಪ್ರಸನ್ನ, ಗಗನ್ , ಚರಣ್, ತನಿಷ್ ಪ್ರಾರ್ಥನೆ ಹಾಡಿದರು. ಶಿಬಿರದಲ್ಲಿ ಪಾಲ್ಗೊಂಡ ಎಲ್ಲಾ ಮಕ್ಕಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನೀಡಲಾದ ಪ್ರಮಾಣ ಪತ್ರವನ್ನು ನೀಡಲಾಯಿತು. ಭಜೋರೆ ಮಾರುತಿ ಕುಣಿತ ಭಜನಾ ತರಬೇತುದಾರರ ತಂಡ ಬೆಳ್ತಂಗಡಿ ಇವರ ನೇತೃತ್ವದಲ್ಲಿ ಅಳಕ್ಕೆ ಭಜನೋತ್ಸವ ನಡೆಯಿತು. ಊರ ಪರಊರ ಅಪಾರ ಭಗವದ್ಭಕ್ತರು ಭಾಗವಹಿಸಿದ್ದರು. ಸಂಘಟಕರು ಹಾಗೂ ಭಜನಾ ಮಂದಿರದ ಅಧ್ಯಕ್ಷ ಮಿಥುನ್ ಕುಲಾಲ್ ಅಳಕ್ಕೆಯವರು ಸ್ವಾಗತಿಸಿದರು. ಸಿಂಚನ್ ರೈ ಎಕ್ಕಳ ಧನ್ಯವಾದವಿತ್ತರು. ಭಜನಾ ಪರಿಷತ್ ಜಿಲ್ಲಾ ಸಮನ್ವಯ ಅಧಿಕಾರಿ ಸಂತೋಷ್ ಪಿ ಅಳಿಯೂರು ಕಾರ್ಯಕ್ರಮ ನಿರೂಪಿಸಿದರು.

Related posts

ಮೇ 9: ಚಿತ್ರದುರ್ಗದಲ್ಲಿ ಬಿಎಸ್‌ವೈ ಅಭಿಮಾನೋತ್ಸವ-ಶಾಸಕ ಹರೀಶ್ ಪೂಂಜರಿಂದ ಅಭಿಮಾನೋತ್ಸವದ ಭಿತ್ತಿ ಚಿತ್ರ ಬಿಡುಗಡೆ

Suddi Udaya

ಇಳ0ತಿಲ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರಾಗಿ ಸುರೇಶ್ ಗೌಡ ಆಯ್ಕೆ

Suddi Udaya

ಅರಸಿನಮಕ್ಕಿ: ಉಡ್ಯೆರೆ ನಿವಾಸಿ ಪೂವಪ್ಪ ಗೌಡ ಹೃದಯಾಘಾತದಿಂದ ನಿಧನ

Suddi Udaya

ವೇಣೂರು ಐಟಿಐಯಲ್ಲಿ ಬೆಂಗಳೂರಿನ ಯೂನಿಮೇಕ್ ಕಂಪನಿಯವರಿಂದ ಕ್ಯಾಂಪಸ್ ಸಂದರ್ಶನ

Suddi Udaya

ಮುಂಡಾಜೆ ಪ್ರೌಢ ಶಾಲೆಯಲ್ಲಿ1994-95 ನೇ ಸಾಲಿನ ವಿದ್ಯಾರ್ಥಿಗಳ ಸ್ನೇಹ ಕೂಟ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ವತಿಯಿಂದ ನೂತನ ಸದಸ್ಯರಿಗೆ ಓರಿಯೆಂಟೇಶನ್ ಕಾರ್ಯಕ್ರಮ

Suddi Udaya
error: Content is protected !!