26.2 C
ಪುತ್ತೂರು, ಬೆಳ್ತಂಗಡಿ
August 29, 2026
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿ

ಪ್ರತಿಷ್ಠಿತ ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಮಂಗಳೂರು ಘಟಕದ ಪದಪ್ರದಾನ ಸಮಾರಂಭ: ಎಕ್ಸೆಲ್ ಶಿಕ್ಷಣ ಸಂಸ್ಥೆಗಳ‌ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರಿಗೆ ಸನ್ಮಾನ

ಮಂಗಳೂರು: ರಾಜ್ಯದಾದ್ಯಂತ ಅಪಾರ ಸಂಖ್ಯೆಯ ಸದಸ್ಯರನ್ನು ಹೊಂದಿ, ಸಾಂಸ್ಕೃತಿಕ ಹಾಗೂ ಸಾಮಾಜಿಕ ವಲಯದಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿರುವ ಪ್ರತಿಷ್ಠಿತ ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕ ಸಂಸ್ಥೆಯು ಇದೀಗ ಮಂಗಳೂರು ತಾಲೂಕಿಗೆ ಹೆಜ್ಜೆ ಇಟ್ಟಿದೆ. ಮೇ 24 ರಂದು ಮಂಗಳೂರಿನ ನಂತೂರಿನ ಸಂದೇಶ ಸಭಾಭವನದಲ್ಲಿ ನಡೆದ ಮಂಗಳೂರು ತಾಲೂಕು ಮಟ್ಟದ ಪದಪ್ರದಾನ ಹಾಗೂ ಕಲಾ ಸಂಭ್ರಮ ಸಮಾರಂಭ ಅದ್ದೂರಿಯಾಗಿ ನಡೆದಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರೊ. ಭುವನೇಶ್ವರಿ ಹೆಗಡೆ, ಹಿರಿಯ ಸಾಹಿತಿಗಳು, ಮಂಗಳೂರು ನೆರವೇರಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ದ.ಕ ಜಿಲ್ಲಾ ಆಮಂತ್ರಣ ವೇದಿಕೆಯ ಅಧ್ಯಕ್ಷೆ ಶ್ರೀಮತಿ ವಿಂದ್ಯಾ ಎಸ್. ರೈ ಕಡೇಶಿವಾಲಯ, ಅಧ್ಯಕ್ಷೀಯ ಭಾಷಣ ಮಾಡಿದರು. ವಿಜಯ ಕುಮಾರ್ ಜೈನ್, ಸಂಚಾಲಕರು, ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ಪದಪ್ರಧಾನ ನೆರವೇರಿಸಿ ಕೊಟ್ಟರು ಮತ್ತು ಸಂಸ್ಥೆಯ ಧ್ಯೇಯ ಉದ್ದೇಶ ವಿವರಿಸಿದರು.

ಎಕ್ಸೆಲ್ ಸಮೂಹ ಸಂಸ್ಥೆ ಗುರುವಾಯನಕೆರೆ ಇದರ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿ ಕಲೆ ಸಾಹಿತ್ಯ ಸಂಸ್ಕೃತಿಯ ಮಹತ್ವ ಮತ್ತು ಅಗತ್ಯವನ್ನು ಒತ್ತಿ ಹೇಳಿದರು. ಹಿರಿಯ ಬಿ. ಭುಜಬಲಿ, ಹಿರಿಯ ಮುತ್ಸದ್ದಿ, ಸಾಹಿತ್ಯ ಪ್ರೇಮಿ, ಮೆಸ್ಕಾಂ ಸಹಾಯಕ ಇಂಜಿನೀಯರ್ ರಾಜೇಶ್ ಹಾಗೂ ಮಲ್ಲಿನಾಥ್ ಜೈನ್ ಧರ್ಮಸ್ಥಳ, ದ.ಕ ಜಾನಪದ ಪರುಷತ್ ಅಧ್ಯಕ್ಷರಾದ ಪ್ರವೀಣ್ ಕೊಡಿಯಾಲ್ ಬೈಲ್ , ಆಮಂತ್ರಣ ಸೇವಾ ಪ್ರತಿಷ್ಠಾನದ ಟ್ರಸ್ಟಿ ಅರುಣ್ ಅರುವ ಅತಿಥಿಯಾಗಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಬೆಟ್ಟದ ಭಾಗೀರಥಿ ಖ್ಯಾತಿಯ ಸಾಹಿತಿ ಭುವನೇಶ್ವರಿ ಹೆಗಡೆಯವರಿಗೆ, ಎಕ್ಸೆಲ್ ಸುಮಂತ್ ಕುಮಾರ್ ಜೈನ್ ಅವರನ್ನು ಮತ್ತು ಶಿಕ್ಷಣ ಪ್ರೇಮಿ, ಕಿತ್ತಳೆ ಹರೇಕಳ ಹಾಜಬ್ಬರನ್ನು ಹಾಗೂ ಆಮಂತ್ರಣ ಉಯ್ಯಾಲೆ ತಂಡದ ಅಧ್ಯಕ್ಷೆ ಸೌಮ್ಯ ತಿಲಕ್ ಶೆಟ್ಟಿ ಮಿಜಾರು, ಯುಗಾದಿ ಬಳಗದ ಸಂಸ್ಥಾಪಕ ಶ್ರೀನಾಗ್ ಹೊನ್ನಾವರ, ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಡಾ.ಅರುಣಾ ನಾಗರಾಜ್, ಮಾ| ಅಭಿಷೇಕ್ ಪ್ರಭು,ಕುಮಾರಿ ಶ್ರೇಯಾ ಮುರ್ಕಜೆ,ಮಾ.ಪ್ರಧಯ್ ಕಿರಣ್ ಶೆಣೈ,ಮಾ.ಪ್ರೀತಮ್ ಜಿ.ಪೂಜಾರಿ, ಇವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಆಮಂತ್ರಣ ದೇವರ ಮಕ್ಕಳು ಪುಸ್ತಕವನ್ನು ಎಕ್ಸೆಲ್ ಶಿಕ್ಷಣ ಸಂಸ್ಥೆಯ ಸುಮಂತ್ ಕುಮಾರ್ ಜೈನ್ ಬಿಡುಗಡೆಗೊಳಿಸಿ, ವಿದ್ಯಾಶ್ರೀ ಅಡೂರು ಇವರ ಕವಿತೆಯೆಂಬ ಕೇದಗೆ ಧ್ವನಿ ಮುದ್ರಣ ಲೋಕಾರ್ಪಣೆ ಮಾಡಿದರು.

ಸಮಾರಂಭದಲ್ಲಿ ಆಮಂತ್ರಣ ರಾಜ್ಯ ನಿರ್ದೇಶಕರಾದ ಆಶಾ ಅಡೂರು, ಉಮಾ ಸುನಿಲ್ ಹಾಸನ ಹಾಗೂ ಜಿಲ್ಲಾ ನಿರ್ದೇಶಕರಾದ ಚೇತನ್ ಅಮೈ, ರಾಕೇಶ್ ಪೊಳಲಿ, ವಿಶಾಲಾಕ್ಷಿ ಹೆಗ್ಡೆ ಮಿಜಾರು, ರಂಜನ್ ಕುಮಾರ್ ನೆರಿಯ, ಅನ್ನಪೂರ್ಣ ಕಿರಣ್ ಅಂಬಲಪಾಡಿ ಉಡುಪಿ, ಶೋಭ ದಿನೇಶ್ ಉದ್ಯಾವರ ಜಿಲ್ಲಾ ಅಧ್ಯಕ್ಷರಾದ ಪುಷ್ಪಪ್ರಸಾದ್, ಚಿಕ್ಕಮಗಳೂರು ಜಿಲ್ಲಾಧ್ಯಕ್ಷೆ ಅಮಿತಾ ಶಮಂತ್, ಮುಂಬಯಿ ವೇದಿಕೆಯ ಅಧ್ಯಕ್ಷೆ ಸರ್ವಮಂಗಳ ಶೆಟ್ಟಿ, ಬಂಟ್ವಾಳ ತಾಲೂಕುವಾಧ್ಯಕ್ಷೆ ರಶ್ಮಿತಾ ಸುರೇಶ್ ಜೋಗಿಬೆಟ್ಟು, ಬೆಳ್ತಂಗಡಿ ತಾಲೂಕು ಅಧ್ಯಕ್ಷೆ ವಿದ್ಯಾಶ್ರೀ ಅಡೂರು,ಮೂಡುಬಿದಿರೆ ಅಧ್ಯಕ್ಷೆ ಕವಿತಾ ದಿನೇಶ್,ಬ್ರಹ್ಮಾವರ ಅಧ್ಯಕ್ಷೆ ಸುಮಾ ಕಿರಣ್ ಬಸ್ರೂರು, ಪುತ್ತೂರು ಅಧ್ಯಕ್ಷೆ ಆಶಾ ಮಯ್ಯ, ಪ್ರಕಾಶ್ ಆಚಾರ್ಯ, ಪ್ರಸಾದ್ ನಾಯಕ್ ಕಾರ್ಕಳ,ಧನರಾಜ್ ಆಚಾರ್ಯ, ಕಲಾ ಪ್ರತಿಭೆಯ ವಿಜಯ ಮುಂಡ್ಲಿ ಮತ್ತಿತರ ಪದಾಧಿಕಾರಿಗಳು ಭಾಗವಹಿಸಿದ್ದರು.

ಲತೇಶ್ ಪುತ್ರನ್, ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಮಂಗಳೂರು ಘಟಕದ ಅಧ್ಯಕ್ಷರಾಗಿ ಪದ ಪ್ರದಾನ ಪಡೆದುಕೊಂಡರು. ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್, ಮಂಗಳೂರು ಆಮಂತ್ರಣ ವೇದಿಕೆಯ ಅಧ್ಯಕ್ಷರಾದ ಲತೇಶ್ ಪುತ್ರನ್, ಕಾರ್ಯದರ್ಶಿ ಕಸ್ತೂರಿ ಜಯರಾಮ್, ಉಪಾಧ್ಯಕ್ಷರಾದ ಡೊಂಬಯ್ಯ ಇಡ್ಕಿದು, ಜೊತೆ ಕಾರ್ಯದರ್ಶಿ ರೂಪಕಲಾ ಭಟ್, ಸಾಂಸ್ಕೃತಿಕ ಕಾರ್ಯದರ್ಶಿ ಚೇತನಾ, ಕೋಶಾಧಿಕಾರಿ ಎನ್ ನಾಗೇಂದ್ರ, ನಿರ್ದೇಶಕರಾದ ಅನಿತಾ ಶೆಣೈ ಮತ್ತು ರಶ್ಮಿ ಸನಿಲ್, ರೋನಿ ಕ್ರಾಸ್ತ ,ಕು.ನಿರೀಕ್ಷಿತಾ ಪದಸ್ವೀಕಾರ ಮಾಡಿ ನೂತನ ಜವಾಬ್ದಾರಿಯಿಂದ ಆಮಂತ್ರಣ ಸಾಹಿತ್ಯ ವೇದಿಕೆಯನ್ನು ಮಂಗಳೂರಿನಲ್ಲಿ ಮುನ್ನಡೆಸಲು ವಿವಿಧ ಜವಾಬ್ದಾರಿ ಹಂಚಿಕೊಂಡರು.

ಡಾ.ಪ್ರಿಯ ಹರೀಶ್ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಕಸ್ತೂರಿ ಜಯರಾಮ್ ಕಾವೂರು ಸಹಕರಿಸಿದರು.
ಅಧ್ಯಕ್ಷರಾದ ಲತೇಶ್ ಪುತ್ರನ್ ಸ್ವಾಗತಿಸಿದರು. ಉಪಾಧ್ಯಕ್ಷ ಡೊಂಬಯ್ಯ ಇಡ್ಕಿದು ಧನ್ಯವಾದ ಸಲ್ಲಿಸಿದರು.

Related posts

ಮೇ 17: ಬೆಳ್ತಂಗಡಿ ರೋಟರಿ ಸಂಸ್ಥೆಯಿಂದ “ಕನ್ನಡ ಸಾಹಿತ್ಯ ಸಂಭ್ರಮ ಮತ್ತು ಬಹುಭಾಷಾ ಕವಿ ಗೋಷ್ಠಿ” ಸಮ್ಮೇಳನ

Suddi Udaya

ನವೀಕೃತ ಯೂನಿಯನ್ ಬ್ಯಾಂಕ್ ಉಜಿರೆ ಶಾಖೆಯ ಉದ್ಘಾಟನೆ

Suddi Udaya

ಮ್ಯಾಂಗೋ ಜ್ಯೂಸ್‌ನಲ್ಲಿ ಇಲಿ ಪಾಷಾಣ ಸೇವಿಸಿದ್ದ ಯುವಕ ಮೊಹಮ್ಮದ್ ಫೈಝಲ್‌ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು

Suddi Udaya

ನೂತನ ಉಪರಾಷ್ಟ್ರಪತಿಯಾಗಿ ಎ ನ್‌ಡಿಎ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್

Suddi Udaya

ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ: ಸೇಕ್ರೆಡ್ ಹಾರ್ಟ್ ಆಂ.ಮಾ. ಶಾಲೆಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ಉಜಿರೆ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ಸಂಸ್ಥೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

Suddi Udaya
error: Content is protected !!