27.6 C
ಪುತ್ತೂರು, ಬೆಳ್ತಂಗಡಿ
October 16, 2026
ಅಭಿನಂದನೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಬೆಳ್ತಂಗಡಿವರದಿ

ಮಡಂತ್ಯಾರು ಶ್ರೀ ಕೃಷ್ಣಜನ್ಮಾಷ್ಟಮಿ ಸಮಿತಿಗೆ 37ನೇ ವರ್ಷದ ಮೊಸರು ಕುಡಿಕೆ ಉತ್ಸವದ ಅಧ್ಯಕ್ಷರಾಗಿ ಬಿಜೆಪಿ ಬೆಳ್ತಂಗಡಿ ಮಂಡಲದ ಪ್ರಧಾನ ಕಾರ್ಯದರ್ಶಿ, ಸಾಮಾಜಿಕ ಕ್ಷೇತ್ರದ ಮುಂದಾಳು ಪ್ರಶಾಂತ್ ಎಂ. ಪಾರೆಂಕಿ ಗೌರವಾಧ್ಯಕ್ಷರಾಗಿ ಸಮಾಜಸೇವಕ, ಉದ್ಯಮಿ ಹಾಗೂ ಕೊಡುಗೈ ದಾನಿ ಪದ್ಮನಾಭ ಸುವರ್ಣ ಬಳ್ಳಮಂಜ

ಮಡಂತ್ಯಾರು: ಶ್ರೀ ಕೃಷ್ಣಜನ್ಮಾಷ್ಟಮಿ ಸಮಿತಿ, ಮಡಂತ್ಯಾರು ಇದರ 37ನೇ ವರ್ಷದ ಮೊಸರು ಕುಡಿಕೆ ಉತ್ಸವದ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯು ಜು.12ರಂದು ಮಡಂತ್ಯಾರು ಗಣಪತಿ ಮಂಟಪದಲ್ಲಿ ನಡೆಯಿತು.

ಸಭೆಯಲ್ಲಿ ಸಮಿತಿಯ ಅಧ್ಯಕ್ಷರಾಗಿ ಶ್ರೀ ವಿದ್ಯಾಸರಸ್ವತಿ ಭಜನಾ ಮಂಡಳಿಯ ಗೌರವ ಸಲಹೆಗಾರರು, ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರದ ಮುಂದಾಳು,ಬಿಜೆಪಿ ಬೆಳ್ತಂಗಡಿ ಮಂಡಲದ ಪ್ರಧಾನ ಕಾರ್ಯದರ್ಶಿ ಮತ್ತು ಕೊಡುಗೈ ದಾನಿಯಾಗಿರುವ ಪ್ರಶಾಂತ್ ಎಂ. ಪಾರೆಂಕಿ ಅವರನ್ನು ಆಯ್ಕೆ ಮಾಡಲಾಯಿತು.

ಪ್ರಶಾಂತ್ ಎಂ. ಪಾರೆಂಕಿ ಅವರು ಈ ಹಿಂದೆ ಸಮಿತಿಯ 25ನೇ ವರ್ಷದ ಬೆಳ್ಳಿಹಬ್ಬದ ಅಧ್ಯಕ್ಷರಾಗಿ ಯಶಸ್ವಿಯಾಗಿ ಉತ್ಸವವನ್ನು ನಡೆಸಿಕೊಟ್ಟಿದ್ದರು. ಅಲ್ಲದೆ 2024ರಿಂದ ಸತತ ಎರಡು ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಉತ್ಸವವನ್ನು ಯಶಸ್ವಿಯಾಗಿ ಸಂಘಟಿಸಿದ್ದಾರೆ. ಇದೀಗ ಮೂರನೇ ಬಾರಿಗೆ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಗೌರವಾಧ್ಯಕ್ಷರಾಗಿ ಸಮಾಜಸೇವಕ, ಉದ್ಯಮಿ ಹಾಗೂ ಕೊಡುಗೈ ದಾನಿ ಪದ್ಮನಾಭ ಸುವರ್ಣ ಬಳ್ಳಮಂಜ ಅವರನ್ನು ಆಯ್ಕೆ ಮಾಡಲಾಯಿತು.ಉಪಾಧ್ಯಕ್ಷರಾಗಿ ಅಜಯ್ ಶೆಟ್ಟಿ ಭಂಡಾರಿಗುಡ್ಡೆ, ಉಮೇಶ್ ಕೋಟೆ ಹಾಗೂ ರಕ್ಷಿತ್ ಪೂಜಾರಿ ಕೋಡ್ಲಕ್ಕೆ, ಪ್ರಧಾನ ಕಾರ್ಯದರ್ಶಿಯಾಗಿ ಶರತ್ ಗೌಡ ಹಟ್ಟತ್ತೊಡಿ, ಜಂಟಿ ಕಾರ್ಯದರ್ಶಿಗಳಾಗಿ ಗೋಪಾಲಕೃಷ್ಣ ಶೆಟ್ಟಿ ನೆತ್ತರ ಹಾಗೂ ರಕ್ಷಿತ್ ಕುಲಾಲ್ ಮಡಂತ್ಯಾರು, ಕೋಶಾಧಿಕಾರಿಯಾಗಿ ನಿಖಿಲ್ ಕುಮಾರ್, ಕ್ರೀಡಾ ಕಾರ್ಯದರ್ಶಿಗಳಾಗಿ ಸಂಜೀತ್ ಶೆಟ್ಟಿ ಮುಗೇರೊಡಿ ಹಾಗೂ ಸುಭಾಷ್ ಹಾರಬೆ ಆಯ್ಕೆಯಾದರು.

ಗೌರವ ಸಲಹೆಗಾರರಾಗಿ ಕೆ. ಪ್ರಭಾಕರ ಬಂಗೇರ, ಸಂಜೀವ ಶೆಟ್ಟಿ ಮುಗೇರೊಡಿ, ರತ್ನಾಕರ ಶೆಟ್ಟಿ ಮೂಡಯೂರು, ತುಳಸಿ ಜಿ. ಹಾರಬೆ ಹಾಗೂ ನಾರಾಯಣ ಪೂಜಾರಿ ಬಳ್ಳಮಂಜ ಅವರನ್ನು ನೇಮಕಗೊಳಿಸಲಾಯಿತು.ನೂತನ ಪದಾಧಿಕಾರಿಗಳು 37ನೇ ವರ್ಷದ ಶ್ರೀ ಕೃಷ್ಣಜನ್ಮಾಷ್ಟಮಿ ಹಾಗೂ ಮೊಸರು ಕುಡಿಕೆ ಉತ್ಸವವನ್ನು ಭಕ್ತಿಪೂರ್ವಕ ಹಾಗೂ ವಿಜೃಂಭಣೆಯಿಂದ ಆಚರಿಸುವ ಸಂಕಲ್ಪ ವ್ಯಕ್ತಪಡಿಸಿದರು.

Related posts

ಬೆಳ್ಳಂಬೆಳಿಗ್ಗೆ ಮನೆಗೆ ನುಗ್ಗಿದ್ದ ನಾಲ್ವರು ಮುಸುಕುಧಾರಿಗಳು: ತಾಯಿ ಮಗಳಿಗೆ ಚಾಕು ತೋರಿಸಿ ಲಕ್ಷಾಂತರ ರೂ. ನಗ ನಗದು ದರೋಡೆ

Suddi Udaya

ಮಲವಂತಿಗೆ: ಪ್ರಗತಿಪರ ಕೃಷಿಕ ರಮಾನಾಥ ಮರಾಠೆ ನಿಧನ

Suddi Udaya

ಬಂದಾರು: ಮುರ್ತಾಜೆ ಎಂಬಲ್ಲಿ ರಸ್ತೆಗೆ ಉರುಳಿ ಬಿದ್ದ ಮರ

Suddi Udaya

ಏ.26: ಅಳದಂಗಡಿಯಲ್ಲಿ ಕಟ್ಟೂರು ಕಾಂಕ್ರೀಟ್ ಪ್ರಾಡಕ್ಟ್ಸ್ ಶುಭಾರಂಭ

Suddi Udaya

ಭಾರತೀಯ ಸೇನೆಗೆ ನೇಮಕಗೊಂಡಿರುವ ಬಳಂಜದ ಯುವಕ ಮನೋಹರ್ ಪೂಜಾರಿಯವರಿಗೆ ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ವತಿಯಿಂದ ಗೌರವಾರ್ಪಣೆ

Suddi Udaya

ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ರಂಜನ್ ಜಿ ಗೌಡ, ಹಾಗೂ ಕಾರ್ಯದರ್ಶಿಯಾಗಿ ಅಭಿನಂದನ್ ಹರೀಶ್ ಕುಮಾರ್ ನೇಮಕ

Suddi Udaya
error: Content is protected !!