24.7 C
ಪುತ್ತೂರು, ಬೆಳ್ತಂಗಡಿ
August 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಮಾಳವ ಯಾನೆ ಮಲ್ಲವ ಸಮಾಜಾಭ್ಯುದಯ ಸಂಘದ 30ನೇ ವಷ೯ದ ವಾಷಿ೯ಕೋತ್ಸವ

ಬೆಳ್ತಂಗಡಿ: ಕೆಳದಿ ಮಹಾಸಂಸ್ಥಾನದ ಶಿವಪ್ಪ ನಾಯಕ ಹಾಗೂ ಕೆಳದಿ ರಾಣಿ ಚೆನ್ನಮ್ಮಾಜಿ ಕಾಲದಲ್ಲಿ ಮಲೆನಾಡು, ಕರಾವಳಿ ಹಾಗೂ ಕೇರಳದ ಭಾಗದಲ್ಲಿ ಹಲವಾರು ಧಾರ್ಮಿಕ, ಸಾಮಾಜಿಕ, ಕೃಷಿ ವಿಚಾರಗಳಿಗೆ ಒತ್ತು ನೀಡಲಾಗಿತ್ತು. ಈಗ ಅದೇ ಸಮಾಜ ಭಾಂದವರು ಕೂಡಾ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದು ತೀರ್ಥಹಳ್ಳಿ ಕವಲೇದುರ್ಗ ಮಠದ ಕೆಳದಿ ಸಂಸ್ಥಾನದ ರಾಜಗುರು ಶ್ರೀ ಷ.ಬ್ರ ಮರಳಸಿದ್ಧ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ಅವರು ಭಾನುವಾರ ಬೆಳ್ತಂಗಡಿ ಶ್ರೀ ಧ.ಮಂ.ಸ್ವಾಮಿ ಕಲಾಭವನ ಅವರಣದ ಬಯಲು ಮಂದಿರದಲ್ಲಿ ಮಾಳವ ಯಾನೆ ಮಲ್ಲವ ಸಮಾಜಾಭ್ಯುದಯ ಸಂಘ ಬೆಳ್ತಂಗಡಿ ಮಾಳವ ಯಾನೆ ಮಲ್ಲವರ ಯುವಕರ ಸಂಘ ಮತ್ತು ಮಹಿಳಾ ಸಂಘ, ಬೆಳ್ತಂಗಡಿ ಇದರ ಜಂಟಿ ಆಶ್ರಯದಲ್ಲಿ ನಡೆದ 30ನೇ ವರ್ಷದ ವಾರ್ಷಿಕೋತ್ಸವ ಮತ್ತು ಶಿವ ಪೂಜೆ, ರುದ್ರಾಭಿಷೇಕ, ಲಲಿತಾಸಹಸ್ತ್ರನಾಮ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು.

ಇಡೀ ಸಮಾಜಕ್ಕೆ ಮಲ್ಲವ ಸಮಾಜದ ಕೊಡುಗೆ ಇದೆ. ದ.ಕ. ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯ ಮಲ್ಲವ ಸಮಾಜದವರು ಹಲವಾರು ವರ್ಷಗಳಿಂದ ಸಮಾಜದ ಅಭ್ಯುದಯಕ್ಕೆ ಶ್ರಮಿಸುತ್ತಿದ್ದಾರೆ. ಹಿರಿಯರ ಮಾರ್ಗದರ್ಶನದಲ್ಲಿ ಯುವ ಜನತೆ ಇದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದು, ಮುಂದೆಯೂ ಸಮಾಜದ ಅಭ್ಯುದಯಕ್ಕೆ ಎಲ್ಲರೂ ಅಹಂ ತೊರೆದು ನಾವು, ನಮ್ಮವರು ಎಂಬ ನಿಟ್ಟಿನಲ್ಲಿ ದುಡಿಯಬೇಕು ಎಂದರು.

ಅಧ್ಯಕ್ಷತೆ ವಹಿಸಿ ಸ್ವಾಗತ ಭಾಷಣ ಮಾಡಿದ ಮಾಳವ ಯಾನೆ ಮಲ್ಲವ ಸಮಾಜದ ಅಧ್ಯಕ್ಷ ಶಿವಶಂಕರ ಮಾತಾನಾಡಿ, ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಮುನ್ನಡೆಸಿಕೊಂಡು ಬರುತ್ತಿದ್ದೇವೆ. ಮುಂದಿನ ದಿನದಲ್ಲಿ ಯುವಜನಾಂಗ ನಮ್ಮ ಸಮಾಜವನ್ನು ಮುನ್ನಡೆಸಿಕೊಂಡು ಹೋಗಬೇಕು ಎಂದರು.

ಕಾಞಂಗಾಡ್ ಶ್ರೀ ಮಹಾಸತಿ ದೇವಸ್ಥಾನದ ಅಧ್ಯಕ್ಷ ಹೆಚ್‌.ಎನ್. ಜಗದೀಶ್‌‌ ಮಲ್ ಮತ್ತು ದುರ್ಗ ಮಲ್ಲಿಕಾರ್ಜುನ ಜಟ್ಟಿ ಮನೆತನದ ಅಧ್ಯಕ್ಷ ಬಿ.ನವನೀತ ಮಾಳವ ಮಾತನಾಡಿ, ಮಲ್ಲವ ಸಮುದಾಯ ಮುಂದಿನ ದಿನದಲ್ಲಿ ಸಮಾಜ ಭಾಂದವರ ಸಹಕಾರ ಕೋರಿದರು.

ವೇದಿಕೆಯಲ್ಲಿ ಕಾಞಂಗಾಡ್ ಇಕ್ಕೇರಿ ಮಲ್ಲವ ಸಮಾಜ ಸಂಘದ ಅಧ್ಯಕ್ಷ ದಯಾನಂದ ಕುದ್ರು, ಚಿತ್ತಾರಿ ಕುದ್ರು ಶ್ರೀ ಮೂಕಾಂಬಿಕಾ ದೇವಸ್ಥಾನದ ಅಧ್ಯಕ್ಷ ನಾಗರಾಜ್‌ ಕೆ.ಪಿ., ಚಿತ್ತಾರಿ ಎಲ್ಲಾಂಬಿಕಾ ದೇವಸ್ಥಾನದ ಅಧ್ಯಕ್ಷ ಒ.ರಮೇಶ್‌, ರಾವಣೇಶ್ವರ ಓರವಂಗೆರೆ ಶ್ರೀ ಜಟಕೇಶ್ವರ ದೇವಸ್ಥಾನದ ಅಧ್ಯಕ್ಷ ಎನ್. ಪ್ರಭಾಕರ, ಮಿತ್ತಬೆಟ್ಟು ಶ್ರೀ ಮಹಮ್ಮಾಯಿ ವನದುರ್ಗ ದೇವಿ ದೇವಸ್ಥಾನದ ಅಧ್ಯಕ್ಷ ಎನ್.‌ ಮೋಹನ ಹೆಗ್ಡೆ, ಯುವಕ ಸಂಘದ ಅಧ್ಯಕ್ಷ ಮೋಹನ ಬೆಳ್ತಂಗಡಿ, ಮಹಿಳಾ ಸಂಘದ ಅಧ್ಯಕ್ಷೆ ಮಂಜುಳ ಬೆಳ್ತಂಗಡಿ ಮೊದಲಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸಮಾಜದ ಸಾಧಕರಾದ ದೇಹದಾನ ನೀಡಿದ ಸುಶೀಲ ಹೆಗ್ಡೆ ಅಳದಂಗಡಿ, ಮಾಧ್ಯಮ ಕೇತ್ರದ ಭುವನೇಶ್‌ ಗೇರುಕಟ್ಟೆ, ಆಂಬ್ಯುಲೆನ್ಸ್‌ ಸೇವೆಗೆ ಭುವನೇಶ್‌ ಕೆಂಬರ್ಜೆ ಹಾಗೂ ಶ್ರೀನಿವಾಸ ವಿವಿ ಪಿಜಿಯೋತೆರಪಿಸ್ಟ್‌ನಲ್ಲಿ ನಾಲ್ಕನೆ ರ್ಯಾಂಕ್‌ ಪಡೆದ ಡಾ. ಪ್ರಣಿತ್‌ ಹೆಗ್ಡೆ ಇವರನ್ನು ಗೌರವಿಸಲಾಯಿತು. ಎಸ್.ಎಸ್.ಎಲ್‌.ಸಿ ಹಾಗೂ ಪಿಯುಸಿಯಲ್ಲಿ ವಿಶಿಷ್ಟ ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಆಟೋಟ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಮೋಹನ ಬೆಳ್ತಂಗಡಿ ಸಾರಥ್ಯದ ಸಪ್ತಸ್ವರಗಳ ಗಾನಯಾನ ಮೆಲೋಡಿಸ್ ತಂಡದಿಂದ ಕರೋಕೆ ಸಂಗೀತ ರಸಮಂಜರಿ ಹಾಗೂ ಸಮಾಜ ಭಾಂದವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.

ಮಾಳವ ಯಾನೆ ಮಲ್ಲವ ಸಂಘದ ಕೋಶಾಧಿಕಾರಿ ಸತೀಶ್‌ ರಾಜ್‌ ವರದಿ ವಾಚಿಸಿದರು. ಯುವಕ ಸಂಘದ ಪ್ರ.ಕಾರ್ಯದರ್ಶಿ ಈಶ್ವರ ಅಲ್ಲಟಬೈಲು ಪ್ರಸ್ತಾವಿಸಿದರು. ಗೌತಮ್‌ ಹೆಗ್ಡೆ ಬೆಳ್ತಂಗಡಿ ಕಾರ್ಯಕ್ರಮ ನಿರ್ವಹಿಸಿ ಮಹಿಳಾ ಸಂಘದ ಕಾರ್ಯದರ್ಶಿ ಅಶ್ವಿನಿ ಉಜಿರೆ ಧನ್ಯವಾದವಿತ್ತರು.

Related posts

ಶ್ರೀ ಧರ್ಮರಸು ದೈವ ಕೊಡಮಣಿತ್ತಾಯ ಮತ್ತು ಸಪರಿವಾರ ದೈವಗಳ ಕ್ಷೇತ್ರದಲ್ಲಿ ದಾರಂದ ಪ್ರತಿಷ್ಠೆ: ಡಿಸೆಂಬರ್ ತಿಂಗಳಲ್ಲಿ ಬ್ರಹ್ಮಕಲಶೋತ್ಸವಕ್ಕೆ ಸಿದ್ದತೆ, ಭರದಿಂದ ಸಾಗುತ್ತಿದೆ ಜೀರ್ಣೋದ್ಧಾರ ಕೆಲಸ

Suddi Udaya

ನಿಡ್ಲೆ ಪ್ರಾ.ಕೃ.ಪ. ಸ.ಸಂಘದಲ್ಲಿ 72ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಸಹಕಾರ ಸಪ್ತಾಹ ಆಚರಣೆ ಮತ್ತು ಕೊಬ್ಬರಿ ಎಣ್ಣೆಗಿರಣಿ ಉದ್ಘಾಟನೆ

Suddi Udaya

ಜೆಸಿಐ ಭಾರತದ ವಲಯ 15ರ ವಲಯ ಸಮ್ಮೇಳನ : ಜೆಸಿಐ ಬೆಳ್ತಂಗಡಿಗೆ ಅತ್ಯುತ್ತಮ ಘಟಕ ಸೇರಿದಂತೆ ಹಲವು ಪ್ರಶಸ್ತಿ

Suddi Udaya

ಚಾರ್ಮಾಡಿ ಘಾಟ್ ನಲ್ಲಿ ಎರಡು ವಾಹನಗಳು ರಸ್ತೆಗೆ ಪಲ್ಟಿ

Suddi Udaya

ಚಾರ್ಮಾಡಿ ಸ. ಉ. ಪ್ರಾ. ಶಾಲೆಯಲ್ಲಿ ವಲಯ ಮಟ್ಟದ ಕಬಡ್ಡಿ ಪಂದ್ಯಾಟ

Suddi Udaya

ಎಲ್ ಸಿ ಆರ್ ಇಂಡಿಯನ್ ವಿದ್ಯಾ ಸಂಸ್ಥೆಯಲ್ಲಿ ಗಣರಾಜ್ಯೋತ್ಸವ ಆಚರಣೆ

Suddi Udaya
error: Content is protected !!