32.5 C
ಪುತ್ತೂರು, ಬೆಳ್ತಂಗಡಿ
October 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಯಂತ್ರೋಪಕರಣ ಅವಲಂಬಿತ ಕೃಷಿಕನಿಗೆ ತೊಂದರೆ ನೀಡಬೇಡಿ: ಮೋಹನ್ ಗೌಡ ಕಲ್ಮoಜ

ಬೆಳ್ತಂಗಡಿ: ಸರಕಾರ ನೂತನವಾಗಿ ಆದೇಶ ಮಾಡಿರುವ ಕೃಷಿಕನಿಗೆ ಅವಶ್ಯಕತೆಯಿರುವ ಮಿಷನ್ಗಳಿಗೆ ಪೆಟ್ರೋಲ್, ಡಿಸೇಲ್ ಸ್ಟಾಕ್ ಇಟ್ಟುಕೊಳ್ಳಲು ನಿರ್ಬಂಧ ನಿಷೇದ ಕಾನೂನು ಇದು ಖಂಡಿತ ಖಂಡನೀಯ ಎಂದು ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಗೌಡ ಕಲ್ಮoಜ ಸರಕಾರ ನಿರ್ಧಾರವನ್ನು ಖಂಡಿಸಿ ಈ ಕಾನೂನು ತೆರವುಗೊಳಿಸಿ ರೈತರ ಹಿತ ಅಗತ್ಯವಾಗಿ ಕಾಪಾಡಬೇಕು ಎಂದು ಒತ್ತಾಯಿಸಿದ್ದಾರೆ.

ಒಂದು ಕಡೆಯಿಂದ ಬೆಲೆ ಏರಿಕೆಯಿಂದ ಜನ ಜೀವನ ತತ್ತರಿಸಿ ಹೋಗಿದೆ. ರೈತರ ಅಡಿಕೆ ಕೃಷಿ ಅವಶ್ಯಕತೆಯಿರುವ ಮೈಲುತುತ್ತು ರಾಸಾಯನಿಕ ಗೊಬ್ಬರ ಬೆಲೆ ಗಗನ ಮುಟ್ಟಿದೆ. ಅಡಿಕೆ ಬೆಲೆ ಏರಿಕೆ ಆಗದೆ ಸ್ಥಿರ ನಿಂತಿದೆ. ಈ ಮದ್ಯೆ ರೈತರು ಇರುವ ತೋಟಗಳ ಉಳಿಸಲು ಹಿಂಗಾರಕ್ಕೆ ಔಷಧಿ ಸಿಂಪಡನೇ, ಕಳೆ ಕೀಳಲು, ಮಿಷನ್ ಬಳಕೆಗೆ ಪೆಟ್ರೋಲ್ ಕನಿಷ್ಠ 10 ಲೀಟರ್ ವರೆಗೆ ಅಗತ್ಯ ಇರುತ್ತದೆ. ಒಂದು ಲೀಟರ್ಗೋಸ್ಕರ ಪಂಪ್ ಗೆ ಹೋಗಲು ಪದೇ ಪದೇ ಸಾಧ್ಯ ಇಲ್ಲ.ನಮ್ಮಂತವರ ಸಣ್ಣ ಉತ್ಸಾಹಿ ಕೃಷಿಕರ ಬಗ್ಗೆ ಸರಕಾರಗಳು ಪ್ರೋತ್ಸಾಹ ಮಾಡಿದಾಗ ಮಾತ್ರ ನಿಜವಾದ ಆತ್ಮ ನಿರ್ಭರ ಭಾರತ ಮೂಡಿಬರಲು ಸಾಧ್ಯ.ಇಲ್ಲದಿದ್ದರೆ ರೈತರ ತೋಟಗಳು ಸರಕಾರದ ಈ ಕಾನೂನುಗಳಿಂದ ಹಾನಿಯಾದರೆ ಯಾರೂ ಕೂಡ ನಷ್ಟ ನೀಡುದಿಲ್ಲ. ಹಾಗಾಗಿ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ಈ ಬಗ್ಗೆ ಗಮನ ಹರಿಸಬೇಕು ಎಂದವರು ಒತ್ತಾಯಿಸಿದ್ದಾರೆ.

Related posts

ಬೆಳ್ತಂಗಡಿ: ಯೋಜನೆಯ ಕಚೇರಿ ಸಹಾಯಕರ ಮೂರು ದಿನದ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಾಗಾರ

Suddi Udaya

ಶ್ರೀ ಧ. ಮಂ. ಅನುದಾನಿತ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳ ಕೈಚಳಕದಲ್ಲಿ ಪರಿಸರ ಸ್ನೇಹಿ ಕಲಾಕೃತಿಗಳ ರಚನೆ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕಿವಿ, ಮೂಗು, ಗಂಟಲು ತಪಾಸಣಾ ಶಿಬಿರ

Suddi Udaya

ಕೊಕ್ಕಡ: ಹಳ್ಳಿಂಗೇರಿ ಜನವಸತಿ ಪ್ರದೇಶದ ನಿತೇಶ್ ರವರ ಮನೆಗೆ ಸಿಡಿಲು ಬಡಿದು ಹಾನಿ

Suddi Udaya

ಸುಪ್ರೀಂ ಸೋಫಾ ಮಾರ್ಟ್, ಇಲೆಕ್ಟ್ರಾನಿಕ್ಸ್- ಫರ್ನಿಚರ್ಸ್ 3 ಲಕ್ಕಿ ಸ್ಕಿಂ ನ ಗ್ರ್ಯಾಂಡ್ ಫಿನಾಲೆ

Suddi Udaya

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಸಂಸತ್ತು ಉದ್ಘಾಟನೆ

Suddi Udaya
error: Content is protected !!