24.9 C
ಪುತ್ತೂರು, ಬೆಳ್ತಂಗಡಿ
October 17, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿಸರ್ಕಾರಿ ಇಲಾಖಾ ಸುದ್ದಿ

ಸೇವಾ ನಿವೃತ್ತಿಗೊಳ್ಳುತ್ತಿರುವ ಸಹಾಯಕ ಕೃಷಿ ನಿರ್ದೇಶಕ ವೀರಭದ್ರಪ್ಪರಿಗೆ ಬೀಳ್ಕೊಡುಗೆ ಸಮಾರಂಭ

ಬೆಳ್ತಂಗಡಿ: ಕೃಷಿ ಇಲಾಖೆಯಲ್ಲಿ 36 ವರ್ಷ 6 ತಿಂಗಳ ಕಾಲ ಸಾರ್ಥಕ ಸೇವೆ ಸಲ್ಲಿಸಿ, ಸಹಾಯಕ ಕೃಷಿ ನಿರ್ದೇಶಕರ ಕಛೇರಿ ಬೆಳ್ತಂಗಡಿಯಲ್ಲಿ ಸಹಾಯಕ ಕೃಷಿ ನಿರ್ದೇಶಕರಾಗಿ ಕಳೆದ 19 ತಿಂಗಳ ಕಾಲ ಕರ್ತವ್ಯ ನಿರ್ವಹಿಸಿ, ಮೇ 31ರಂದು ವಯೋನಿವೃತ್ತಿ ಹೊಂದಿರುವ ಎ.ಡಿ. ವೀರಭದ್ರಪ್ಪ ಇವರಿಗೆ ಮೇ 30ರಂದು ಕೃಷಿ ಇಲಾಖೆ, ತಾಲ್ಲೂಕು ಕೃಷಿಕ ಸಮಾಜ ಮತ್ತು ವಿವಿಧ ಗ್ರಾಮ ಪಂಚಾಯತ್ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ವತಿಯಿಂದ ಗೌರವ ಸಮರ್ಪಣೆ ಮೂಲಕ ಬೀಳ್ಕೊಡುಗೆ ನೀಡುವ ಸಮಾರಂಭವನ್ನು SCDCC Bank ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ವೀರಭದ್ರಪ್ಪ ಇವರು 1989ರಲ್ಲಿ ಕೃಷಿ ಸಹಾಯಕರಾಗಿ ಪಾವಗಡ ತಾಲ್ಲೂಕಿನಲ್ಲಿ ಕೃಷಿ ಇಲಾಖೆ ಸೇವೆಗೆ ಸೇರಿ, ನಂತರ ದಾವಣಗೆರೆ, ಚಿತ್ರದುರ್ಗ, ಹಾಸನ, ಹಾವೇರಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸಹಾಯಕ ಕೃಷಿ ಅಧಿಕಾರಿ, ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ನಿರ್ದೇಶಕರಾಗಿ ಸುದೀರ್ಘ ಅವಧಿಯಲ್ಲಿ ರೈತ ಸ್ನೇಹಿ ಅಧಿಕಾರಿಯಾಗಿ, ವಿವಿಧ ಕೃಷಿ ವಲಯಗಳಲ್ಲಿ ಸೇವೆ ಸಲ್ಲಿಸುವ ಮೂಲಕ ಅಪಾರ ಅನುಭವ ಉಳ್ಳವರಾಗಿ ಕಿರಿಯ ಅಧಿಕಾರಿ ಮಿತ್ರರಿಗೆ ಮಾರ್ಗದರ್ಶನ ಮಾಡುತ್ತಾ ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದರು.

ಈ ಬೀಳ್ಕೊಡುಗೆ ಸಮಾರಂಭದಲ್ಲಿ ವೀರಭದ್ರಪ್ಪನವರ ಮಾತೃಶ್ರೀ ಲಕ್ಷ್ಮಮ್ಮ, ಬೆಳ್ತಂಗಡಿ ತಹಶೀಲ್ದಾರ್ ಪ್ರಥ್ವಿ ಸಾನಿಕಂ ಇವರ ತಂದೆ ರಾಮಕೃಷ್ಣ ರೆಡ್ಡಿಯವರು ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಮಂಗಳೂರಿನ ಜಂಟಿ ಕೃಷಿ ನಿರ್ದೇಶಕ ಹೊನ್ನಪ್ಪ ಜಿ. ಗೌಡ, ಪುತ್ತೂರು ಉಪ ಕೃಷಿ ನಿರ್ದೇಶಕ ಶಿವಶಂಕರ್ ದಾನೆಗೊಂಡರ್, ಮಂಗಳೂರು ಉಪಕೃಷಿ ನಿರ್ದೇಶಕ ಅಶೋಕ, ಬೆಳ್ತಂಗಡಿ ತಹಶೀಲ್ದಾರ್ ಪ್ರಥ್ವಿ ಸಾನಿಕಂ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಚಂದ್ರಶೇಖರ್, ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ರಮೇಶ್ ಸಿ.ಕೆ., ತಾಲ್ಲೂಕು ಕೃಷಿಕ ಸಾಮಾಜದ ಅಧ್ಯಕ್ಷ ರಾಜು ಪೂಜಾರಿ, ನಿವೃತ್ತ ಕೃಷಿ ಅಧಿಕಾರಿ ಚಿದಾನಂದ ಹೂಗಾರ್, ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿ ಮಹಾವೀರ ಜೈನ್, ತಾಲ್ಲೂಕು ಕೃಷಿಕ ಸಮಾಜದ ಕಾರ್ಯದರ್ಶಿ ಮುನಿರಾಜ ಅಜ್ರಿ, ಪ್ರಗತಿಪರ ಕೃಷಿಕ ಸುಧೀರ್ ಕುಮಾರ್ ಶೆಟ್ಟಿ ಮಚ್ಚಿನ, ಪ್ರಭಾಕರ ಮಯ್ಯ ಸುರ್ಯ, ಭಾರತೀಯ ಸ್ಟೇಟ್ ಬ್ಯಾಂಕ್ ಬೆಳ್ತಂಗಡಿ ಶಾಖೆಯ ವ್ಯವಸ್ಥಾಪಕರು ಸೇರಿದಂತೆ ವಿವಿಧ ಇಲಾಖೆಗಳ ಮುಖ್ಯಸ್ಥರು, ಕೃಷಿ ಇಲಾಖೆ ದಕ್ಷಿಣ ಕನ್ನಡದ ವಿವಿಧ ತಾಲ್ಲೂಕುಗಳ ಅಧಿಕಾರಿಗಳು, ಸಿಬ್ಬಂದಿಗಳು, ಕಂದಾಯ ಇಲಾಖೆ ಬೆಳ್ತಂಗಡಿಯ ಗ್ರಾಮ ಆಡಳಿತ ಅಧಿಕಾರಿ ವರ್ಗದವರು, ವಿವಿಧ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯತ್ ಅಧ್ಯಕ್ಷರುಗಳು, ಕೃಷಿಕ ಸಮಾಜದ ಸದಸ್ಯರುಗಳು, ಕೃಷಿ ಸಖಿಯವರು, ವೀರಭದ್ರಪ್ಪನವರ ಸಹೋದರ ಸಹೋದರಿಯರು, ಪುತ್ರಿಯರು, ಅಳಿಯಂದಿರು, ಬೀಗರು ಸೇರಿದಂತೆ ಕುಟುಂಬ ವರ್ಗದವರು, ವಿವಿಧ ಕೃಷಿ ಪರಿಕರ ಮಾರಾಟಗಾರರು ಸೇರಿದಂತೆ ಅನೇಕ ಹಿತೈಷಿಗಳು ಭಾಗವಹಿಸಿ ವೀರಭದ್ರಪ್ಪನವರ ಪ್ರಾಮಾಣಿಕತೆಗೆ ಮತ್ತು ರೈತರ ಪರವಾಗಿ ಅವಿರತ ಸೇವೆಗೆ ಕೃತಜ್ಞತೆ ಸಲ್ಲಿಸಿ ನಿವೃತ್ತ ಜೀವನಕ್ಕೆ ಶುಭ ಹಾರೈಸಿದರು.

ಕೃಷಿ ಅಧಿಕಾರಿ ಗಣೇಶ್ ಸ್ವಾಗತಿಸಿ, ನಿವೃತ್ತ ಕೃಷಿ ಅಧಿಕಾರಿ ನಾರಾಯಣ ಪೂಜಾರಿಯವರು ಕಾರ್ಯಕ್ರಮವನ್ನು ನಿರೂಪಿಸಿದರು. ಕೃಷಿ ಇಲಾಖೆ ಬೆಳ್ತಂಗಡಿಯ ಎಲ್ಲಾ ಸಿಬ್ಬಂದಿಗಳು ಸಹಕರಿಸಿದರು.

Related posts

ಜಲಪಾತ ವೀಕ್ಷಣೆ ಹಾಗೂ ಗಡಾಯಿಕಲ್ಲು ಚಾರಣಕ್ಕೆ ನಿರ್ಬಂಧ

Suddi Udaya

ನಿಡ್ಲೆ: ಪಾರ್ಪಿಕಲ್ ಸಮೀಪ ಕಾರು ಮತ್ತು ಬೈಕ್ ಅಪಘಾತ

Suddi Udaya

ಕಲ್ಮಂಜ: ಸಂಗಮ ಕ್ಷೇತ್ರ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಅಧ್ಯಕ್ಷರು ಸದಸ್ಯರ ನೇಮಕ

Suddi Udaya

ಡಿ. 29 ರಂದು ನಡೆಯಲಿರುವ ಬಳ್ಳಮಂಜ ಶೇಷ ನಾಗ ಜೋಡು ಕರೆ ಕಂಬಳದ ಪೂರ್ವ ಸಿದ್ಧತಾ ಸಭೆ

Suddi Udaya

ಶಾಸಕರ ಮುತುವರ್ಜಿಯಿಂದ ಪದವು–ಬೊಳ್ಮನಾರ್ ಮುಖ್ಯರಸ್ತೆಗೆ ತುರ್ತು ದುರಸ್ತಿ; ಮಳೆಗಾಲದ ಬಳಿಕ ರೂ.30 ಲಕ್ಷ ವೆಚ್ಚದಲ್ಲಿ ಮರುಡಾಮರೀಕರಣ

Suddi Udaya

ವಲಯ ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ: ಸೇಕ್ರೆಡ್ ಹಾರ್ಟ್ ಆಂ.ಮಾ. ಶಾಲೆಯ ಬಾಲಕ ಮತ್ತು ಬಾಲಕಿಯರಿಗೆ ಪ್ರಥಮ ಸ್ಥಾನ

Suddi Udaya
error: Content is protected !!