25.2 C
ಪುತ್ತೂರು, ಬೆಳ್ತಂಗಡಿ
October 17, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ಕುಡಾಳ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘದ ವಾರ್ಷಿಕ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ

ಬೆಳ್ತಂಗಡಿ : ಕುಡಾಳ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘ ಬೆಳ್ತಂಗಡಿ ವಲಯ ಇದರ ವಾರ್ಷಿಕ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವು ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಮುದಲಡ್ಕ ಇವರ ಅಧ್ಯಕ್ಷತೆಯಲ್ಲಿ ರತ್ನಾಕರ್ ಭಟ್ ಇವರ ವೇದಾಶ್ರಯ ಮದ್ದಡ್ಕ ನಿವಾಸದಲ್ಲಿ ನಡೆಯಿತು.

ಸಂಘದ ಕಾರ್ಯದರ್ಶಿ ಹರೀಶ್ ಪ್ರಭು ಸ್ವಾಗತಿಸಿದರು, ಕುಮಾರಿ ಸೌಜನ್ಯ ಪ್ರಾರ್ಥನೆ ಮಾಡಿ, ಸಂಘದ ಕೋಶಾಧಿಕಾರಿ ಪ್ರದೀಪ್ ನಾಯಕ್ ಬಾಲ್ಕತ್ಯಾರ್ 2025-26ನೇ ಸಾಲಿನ ಲೆಕ್ಕಪತ್ರ ಮಂಡಿಸಿದರು. ರತ್ನಾಕರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು.


ನಮ್ಮ ವಲಯದ 90% ಗಿಂತಲೂ ಅಧಿಕ ಅಂಕ ಪಡೆದ ಸುಮಾರು 14 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅವರ ಮುಂದಿನ ಭವಿಷ್ಯಕ್ಕೆ ಶುಭ ಕೋರಲಾಯಿತು.
ಮಾಜಿ ಯೋಧರಾದ ರಾಮಚಂದ್ರ ನಾಯಕ್ ಮುಂಕಾಡಿ ಹಾಗೂ ಯೋಧ ಅಶೋಕ್ ನಾಯಕ್ ಪುಂಜಾಲಕಟ್ಟೆ ಇವರನ್ನು ಸನ್ಮಾನಿಸಲಾಯಿತು.


ಸಂಘದ ಹಿರಿಯ ಕಾರ್ಯಕರ್ತರು ಕೃಷಿಕ ಕೇಶವ ಪ್ರಭು ಗುಂಡಿದಡ್ಡ ಇವರನ್ನು ಗೌರವಿಸಲಾಯಿತು.
ಪೂರ್ಣಾನಂದ ಪ್ರತಿಷ್ಠಾನದ ಅಧ್ಯಕ್ಷ ಮುರಳಿದರ ಪ್ರಭು, ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಮಾಲತಿ ಪ್ರಭು , ಪ್ರಭಾಕರ ಭಟ್ ಇಡ್ಯಾ ಶುಭಕೋರಿದರು.
ತಾರಾ ಶಿವರಾಯ ಪ್ರಭು ಧನ್ಯವಾದ ಸಮರ್ಪಿಸಿದರು. ದಿವ್ಯ ಪ್ರದೀಪ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು, ಸಂಘದ ಪದಾಧಿಕಾರಿಗಳು ,ಮಾಜಿ ಅಧ್ಯಕ್ಷರುಗಳು ಭಾಗವಹಿಸಿದ್ದರು.

Related posts

ಚಾರ್ಮಾಡಿ, ತೋಟತ್ತಾಡಿ, ಚಿಬಿದ್ರೆ ಗ್ರಾಮಗಳಲ್ಲಿ ಗೆಜ್ಜೆಗಿರಿ ಜಾತ್ರೋತ್ಸವ ಸಮಾಲೋಚನಾ ಸಭೆ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಗೇರುಕಟ್ಟೆ: ಮನ್ ಶರ್ ವಿದ್ಯಾಸಂಸ್ಥೆಯಲ್ಲಿ 75ನೇ ವರ್ಷದ ಗಣರಾಜ್ಯೋತ್ಸವ ಆಚರಣೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸಿ.ಎಂ ಸಿದ್ದರಾಮಯ್ಯ ಹಾಗೂ ಡಿ.ಸಿ.ಎಂ ಡಿ.ಕೆ ಶಿವಕುಮಾರ್ ಭೇಟಿ: ದೇವರಿಗೆ ವಿಶೇಷ ಪೂಜೆ

Suddi Udaya

ನ.29: ಹಿರಿಯ ಆರೋಗ್ಯ ಸುರಕ್ಷಣಾಧಿಕಾರಿ ಹೆಚ್.ಬಿ ಲೀಲಾವತಿ ಸೇವಾ ನಿವೃತ್ತಿ

Suddi Udaya

ನಿಡ್ಲೆ: ಸರ್ಕಾರಿ ಪ್ರೌಢಶಾಲೆಯಲ್ಲಿ ಯಕ್ಷಗಾನ ನಾಟ್ಯ ತರಬೇತಿ ಉದ್ಘಾಟನೆ

Suddi Udaya

ಪಡ್ಡ೦ದಡ್ಕ ನುರುಲ್ ಹುದಾ ಮಸೀದಿ ಆದೀನದಲ್ಲಿರುವ ಮುನವಿರುಲ್ ಇಸ್ಲಾಂ ಮದರಸದ ರಕ್ಷಕರ ಸಭೆ

Suddi Udaya
error: Content is protected !!