September 5, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಸಂಘ-ಸಂಸ್ಥೆಗಳು

ಕಲ್ಮಂಜ ಬ್ರಹ್ಮಶ್ರೀ ಯುವ ಬಿಲ್ಲವ ವೇದಿಕೆಯ ಮಾಸಿಕ ಸಭೆ

ಕಲ್ಮಂಜ: ಬ್ರಹ್ಮಶ್ರೀ ಯುವ ಬಿಲ್ಲವ ವೇದಿಕೆ ಅಕ್ಷಯ ನಗರ, ನಿಡಿಗಲ್-ಕಲ್ಮಂಜ ಇದರ ಮಾಸಿಕ ಸಭೆಯು ವಿಶ್ವನಾಥ ಬಂಗೇರ ದರ್ಖಾಸು ಇವರ ಮನೆಯಲ್ಲಿ ಜೂ.1ರಂದು ನಡೆಯಿತು.

ಕಳೆದ 30 ವರ್ಷಗಳಿಂದ ಪ್ರತೀ ತಿಂಗಳು ೨೬ ಮನೆಯ ಸದಸ್ಯರು ಸೇರಿ ಸಭೆಯನ್ನು ನಡೆಸಿಕೊಂಡು ಬರುತ್ತಿದ್ದು ಸಮಾಜಮುಖಿ ಕೆಲಸದ ಜೊತೆಗೆ ಪ್ರತೀ ವರ್ಷದಂತೆ ಈ ವರ್ಷವೂ ಪ್ರತಿಭಾನ್ವಿತ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.

2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 577 ಅಂಕ ಪಡೆದ ಪ್ರಣಮ್ಯ ಅಕ್ಷಯನಗರ ಮತ್ತು ಎಸ್‌ಎಸ್‌ಎಲ್ ಸಿ ಪರೀಕ್ಷೆಯಲ್ಲಿ 530 ಅಂಕ ಪಡೆದ ಕೀರ್ತಿ ಅಕ್ಷಯನಗರ ಇವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವನಾಥ ಬಂಗೇರ ದರ್ಖಾಸು ವಹಿಸಿದ್ದರು. ಅತಿಥಿಗಳಾಗಿ ಪೂರ್ಣೇಶ್ ಪೂಜಾರಿ ಹಿಮರಡ್ಡ, ಅಶೋಕ್ ಪೂಜಾರಿ ಬಳ್ಳಿದಡ್ಡ ಹಾಗೂ ಸಂಘದ ಅಧ್ಯಕ್ಷರಾದ ಕೃಷ್ಣಪ್ಪ ಬಂಗೇರ ಭಾಗವಹಿಸಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು.

ನಾರಾಯಣ ಬಂಗೇರ ಕಾರ್ಯಕ್ರಮ ನಿರೂಪಿಸಿದರು. ಜಯಂತಿ ವಿಶ್ವನಾಥ ಸ್ವಾಗತಿಸಿ ಆಶಿತಾ ವಂದಿಸಿದರು. ಸಂಘದ ಸದಸ್ಯರು ಸಹಕರಿಸಿದರು.

Related posts

ತಡ ರಾತ್ರಿ ಹಂಚು ತೆಗೆದು ದೇಗುಲದೊಳಗೆ ನುಗ್ಗಿ ದಾಂಧಲೆ

Suddi Udaya

ನ 27: ಎಕ್ಸೆಲ್ ಶಿಕ್ಷಣ ಸಂಸ್ಥೆಯಲ್ಲಿ ಅಕ್ಷರೋತ್ಸವ-ರಾಷ್ಟ್ರ ಮಟ್ಟದ ಕವಿಗೋಷ್ಠಿಗೆ ಕವನಗಳ ಆಹ್ವಾನ

Suddi Udaya

ಉಜಿರೆಯ ಬೆನಕ ಆಸ್ಪತ್ರೆಯಲ್ಲಿ ರೇಡಿಯೋಲಜಿ ವಿಭಾಗ ಮತ್ತು ನೂತನ ಸಿ.ಟಿ. ಸ್ಕ್ಯಾನಿಂಗ್ ಪ್ರಾರಂಭೋತ್ಸವ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಗೆ ಅಯೋದ್ಯೆ ಶ್ರೀರಾಮ ಮಂದಿರದ ಆಮಂತ್ರಣ ಪತ್ರಿಕೆ ಹಸ್ತಾಂತರ

Suddi Udaya

ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ: ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರಿಂದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ದ್ವೇಷ ಭಾಷಣ ಆರೋಪ: ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ ವಿರುದ್ಧದ ಎಫ್‌ಐ ಆರ್‌ಗೆ ಹೈಕೋರ್ಟ್ ತಡೆ

Suddi Udaya
error: Content is protected !!