24.1 C
ಪುತ್ತೂರು, ಬೆಳ್ತಂಗಡಿ
September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಭಾರತೀಯ ಸೇನೆಯ ಅಗ್ನಿವೀರ್ ಹುದ್ದೆಗೆ ತೆಕ್ಕಾರಿನ ಗುರುಕಿರಣ್ ಆಯ್ಕೆ

ಬೆಳ್ತಂಗಡಿ: ತೆಕ್ಕಾರಿನ ಯುವಕ ಗುರುಕಿರಣ್ ಅವರು ಭಾರತೀಯ ಸಶಸ್ತ್ರ ಪಡೆಗಳ ಅಗ್ನಿಪಥ್ ಯೋಜನೆಯಡಿ ಅಗ್ನಿವೀರ್ ಹುದ್ದೆಗೆ ಆಯ್ಕೆಯಾಗಿದ್ದಾರೆ.

ಇವರು ತೆಕ್ಕಾರು ಗ್ರಾಮದ ಮರಮ ಗುತ್ತು ಹೊಸಮನೆ ನಿವಾಸಿ ಉಮೇಶ್ ಪೂಜಾರಿ ಮತ್ತು ಶ್ರೀಮತಿ ರವರ ಪುತ್ರ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಶಾಲೆ ಪೆರಿಯೊಟ್ಟುನಲ್ಲಿ ಪೂರ್ಣಗೊಳಿಸಿ ಹಾಗೂ ಪ್ರೌಢ ಶಿಕ್ಷಣವನ್ನು ಸರಕಾರಿ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಉಪ್ಪಿನಂಗಡಿಯಲ್ಲಿ ಪೂರ್ಣಗೊಳಿಸಿದರು.

ಚಿಕ್ಕ ವಯಸ್ಸಿನಿಂದಲೂ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಬೇಕೆಂಬ ಮಹದಾಸೆಯನ್ನು ಪೂರೈಸಲು ತರಬೇತಿಗಾಗಿ ಮಂಗಳೂರಿನ “ವೀರ ರಾಣಿ ಅಬ್ಬಕ್ಕ ಸೇನಾ ” ತರಬೇತಿ ಶಾಲೆಯಲ್ಲಿ 4 ತಿಂಗಳ ತರಬೇತಿಯಿಂದ ಪ್ರಾರಂಭಿಸಿದರು. ಇವರ ಸತತವಾಗಿ 3 ವರ್ಷದ ಕಠಿಣ ಪರಿಶ್ರಮ. ಶಿಸ್ತು ಹಾಗೂ ದೃಢ ಸಂಕಲ್ಪದ ಮೂಲಕ ಈ ಮಹತ್ತರ ಸಾಧನೆಯನ್ನು ಗಳಿಸಿದ್ದಾರೆ.

Related posts

ತೋಟತ್ತಾಡಿ: ಹತ್ತು ಅಡಿ ಉದ್ದದ ಕಾಳಿಂಗ ಸರ್ಪ ಪತ್ತೆ: ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟ ಸ್ನೇಕ್ ಅನಿಲ್ ಕಕ್ಕಿಂಜೆ

Suddi Udaya

ಅರಸಿನಮಕ್ಕಿಯ ತೇಜಸ್ವಿಗೆ ಐಸರ್ ಪರೀಕ್ಷೆಯಲ್ಲಿ 47ನೇ ರ್‍ಯಾಂಕ್

Suddi Udaya

ಉಜಿರೆ ಬ್ರಹ್ಮಕಲಶೋತ್ಸವದಲ್ಲಿ ಸಂಪತ್ ಬಿ ಸುವರ್ಣರಿಗೆ ಯಕ್ಷ ಭಾರತಿ ಯುವ ಸೇವಾ ಪ್ರಶಸ್ತಿ ಪ್ರದಾನ

Suddi Udaya

ಮಚ್ಚಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಯಕ್ಷಧ್ರುವ-ಯಕ್ಷಶಿಕ್ಷಣ ತರಗತಿಗೆ ಚಾಲನೆ

Suddi Udaya

ಉಜಿರೆ: ಎಸ್.ಡಿ.ಎಂ ವಸತಿ ಪ.ಪೂ. ಕಾಲೇಜಿನ ‘ಶೈಕ್ಷಣಿಕ ವರ್ಷಾರಂಭ’ ಹಾಗೂ ವಿದ್ಯಾರ್ಥಿ ಹಾಗೂ ಹೆತ್ತವರಿಗೆ ‘ಮಾಹಿತಿ ಕಾರ್ಯಕ್ರಮ’

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ರಘುರಾಮ ಶೆಟ್ಟಿ, ಸಾಧನಾ ಕಾರ್ಯದರ್ಶಿಯಾಗಿ ಅಮಿತಾನಂದ ಹೆಗ್ಡೆ ಆಯ್ಕೆ

Suddi Udaya
error: Content is protected !!