July 24, 2026
ಅಭಿನಂದನೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಶಿಕ್ಷಣ ಸಂಸ್ಥೆ

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಪ್ರಾಪ್ತಿ ಎಂ ಗೌಡರಿಗೆ ಸನ್ಮಾನ

ಬೆಳ್ತಂಗಡಿ: ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ನಡೆಸಿದ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ 625/625 ಅಂಕ ಗಳಿಸಿ ಶಾಲೆ, ತಾಲೂಕು, ಜಿಲ್ಲೆ ಹಾಗೂ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ಕುಮಾರಿ ಪ್ರಾಪ್ತಿ ಎಂ ಗೌಡರಿಗೆ ವಾಣಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರೌಢಾಶಾಲಾ ಮುಖ್ಯಶಿಕ್ಷಕ ಲಕ್ಷಿö್ಮÃನಾರಾಯಣ ಕೆ ವಿದ್ಯಾರ್ಥಿನಿಯ ಸಾಧನೆಯನ್ನು ಶ್ಲಾಘಿಸಿ ಅವಳ ಪರಿಶ್ರಮ, ಶಿಸ್ತು ಹಾಗೂ ನಿರಂತರ ಪ್ರಯತ್ನವೇ ಈ ಯಶಸ್ಸಿನ ಮೂಲ ಎಂದು ಅಭಿಪ್ರಾಯಪಟ್ಟರು ಮತ್ತು ವಿದ್ಯಾರ್ಥಿನಿಯನ್ನು ಪ್ರಶಂಸಿದರು.

ಮುಖ್ಯ ಅತಿಥಿ ವಾಣಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವಿಷ್ಣು ಪ್ರಕಾಶ್ ಎಂ ವಿದ್ಯಾರ್ಥಿನಿಯ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದರು.
ವಾಣಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರು ಹಾಗೂ ಪೋಷಕರಾದ ಮೀನಾಕ್ಷಿಯವರು ವಿದ್ಯಾರ್ಥಿನಿಯ ಕಲಿಕೆಗೆ ಮತ್ತು ಇಂತಹ ಫಲಿತಾಂಶಕ್ಕೆ ಪ್ರೇರೆಪಿಸಿದ ಶಾಲೆಯ ಶಿಕ್ಷಕರನ್ನು ಪ್ರಶಂಸಿದರು.

ತರಗತಿ ಶಿಕ್ಷ್ಷಕಿ ರೇಷ್ಮಾ ಮಾತನಾಡಿ, ವಿದ್ಯಾರ್ಥಿಯ ಸಾಧನೆಯು ಶಿಕ್ಷಕರಿಗೆ, ಶಾಲೆಗೆ ಕೀರ್ತಿ ತಂದಿರುತ್ತದೆ ಎಂದು ಶುಭ ಹಾರೈಸಿದರು. ಪ್ರಾಪ್ತಿ ಎಂ ಗೌಡರ ಸಾಧನೆಯು ಮುಂದಿನ ವಿದ್ಯಾರ್ಥಿಗಳಿಗೆ ಪ್ರೇರಣೆ ಎಂಬುದಾಗಿ ವಿದ್ಯಾರ್ಥಿಗಳಾದ ಪ್ರಸನ್ನ ಕುಮಾರ್, ಮಯೂರಿ, ಸೃಜನ್ ಪೈ, ಅಂಕಿತ್ ಶೆಟ್ಟಿ ಹಾಗೂ ನಿಶಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಸಾಧಕಿ ಕು. ಪ್ರಾಪ್ತಿ ಎಂ ಗೌಡ ಮಾತನಾಡಿ, ಕನಸು ಕಾಣುವುದರೊಂದಿಗೆ ತಮ್ಮ ಗುರಿಯೆಡೆಗೆ ಪ್ರತಿನಿತ್ಯ ಹೆಜ್ಜೆ ಇಟ್ಟಾಗ ಮಾತ್ರ ಏನನ್ನಾದರೂ ಸಾಧಿಸಲು ಸಾಧ್ಯ ಮತ್ತು ಪೋಷಕರು ಹಾಗೂ ಶಿಕ್ಷಕರ ಮಾರ್ಗದರ್ಶನ ಈ ಯಶಸ್ಸಿಗೆ ಬಹಳ ಮುಖ್ಯ ಎಂಬುದಾಗಿ ತಿಳಿಸಿ ಪೋಷಕರಿಗೂ ಮತ್ತು ಶಿಕ್ಷಕರಿಗೂ ಧನ್ಯವಾದ ತಿಳಿಸಿದರು.

ವೇದಿಕೆಯಲ್ಲಿ ವಾಣಿ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಪ್ರಸಾದ್ ಕುಮಾರ್, ವಾಣಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು ಹಾಗೂ ಪೋಷಕರಾದ ಮಹಾಬಲ ಗೌಡ ಉಪಸ್ಥಿತರಿದ್ದರು.

ಪ್ರೌಢಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು, ಶಿಕ್ಷಕಿ ಶಾಂತಿ ಪಾಯಾಸ್ ಸ್ವಾಗತಿಸಿದರು. ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಸುಹಾಸಿನಿ ಎ ವಂದಿಸಿದರು ಹಾಗೂ ಸಹ ಶಿಕ್ಷಕಿ ಶ್ರೀಮತಿ ಮೋಹನಾಂಗಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಾಣಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾಗವಹಿಸಿದ್ದರು.

Related posts

ಬಹರೈನ್, ದುಬೈಯಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ 169 ನೇ ಜಯಂತಿಯಲ್ಲಿ ಬ್ರಹ್ಮಾನಂದ ಶ್ರೀಗಳಿಂದ ಆಶೀರ್ವಚನ

Suddi Udaya

ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಯು ಅಮಾನವೀಯ: ಶ್ರೀನಿವಾಸ ರಾವ್ ಖಂಡನೆ

Suddi Udaya

ಮುಂಡಾಜೆ ಬಂಟರ ಗ್ರಾಮ ಸಮಿತಿ ಮಾಸಿಕ ಸಭೆ

Suddi Udaya

ಬೆಳ್ತಂಗಡಿ: ವಾಣಿ ಕಾಲೇಜಿಗೆ ಎಕ್ಸ್‌ಪೆರಿಯಾ-2023 ಪ್ರಶಸ್ತಿ

Suddi Udaya

ಉಜಿರೆ: ರಸ್ತೆಯ ಬದಿ ನಿಲ್ಲಿಸಿದ್ದ ಸ್ಕೂಟರ್ ಕಳವು

Suddi Udaya

ಜೇಸಿಐ ಕೊಕ್ಕಡ ಕಪಿಲಾ: ನೂತನ ಪದಾಧಿಕಾರಿಗಳ ಆಯ್ಕೆ

Suddi Udaya
error: Content is protected !!