24.1 C
ಪುತ್ತೂರು, ಬೆಳ್ತಂಗಡಿ
September 6, 2026
ಗ್ರಾಮಾಂತರ ಸುದ್ದಿಬೆಳ್ತಂಗಡಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಬೆಳಾಲು ಪ್ರೌಢಶಾಲೆಯಲ್ಲಿ ಮಾಸ್ತಿ ಸಂಸ್ಮರಣ ಕಾರ್ಯಕ್ರಮ

ಬೆಳಾಲು ಶ್ರೀ ಧ‌.ಮಂ.ಅ. ಪ್ರೌಢಶಾಲೆಯಲ್ಲಿ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಜನ್ಮದಿನದ ಪ್ರಯುಕ್ತ ಜೂನ್ ೬ ರಂದು ಮಾಸ್ತಿ ಸಂಸ್ಮರಣ ಕಾರ್ಯಕ್ರಮ ಜರಗಿತು. ಮಾಸ್ತಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಲಾಯಿತು‌.

ವಿದ್ಯಾರ್ಥಿನಿ ಆಯಿಷತ್ ಹೈಪ ಮಾಸ್ತಿಯವರ ಪರಿಚಯವನ್ನು ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮುಖ್ಯೋಪಾಧ್ಯಾಯರಾದ ಜಯರಾಮ ಮಯ್ಯ ಮಾತನಾಡಿ, ಪುಸ್ತಕಗಳನ್ನು ಓದುವ ಹವ್ಯಾಸ ಬೆಳಸಿಕೊಳ್ಳುವದರೊಂದಿಗೆ ಅದರಲ್ಲಿರುವ ಮೌಲ್ಯವನ್ನು ಅಳವಡಿಸಿಕೊಳ್ಳಿ ಎಂದು ತಿಳಿಸಿದರು‌.

ಶಿಕ್ಷಕ ಸುಮನ್ ಯು.ಎಸ್ ಮಾಸ್ತಿಯವರ ಕೃತಿಗಳನ್ನು ಪರಿಚಯಿಸಿದರು. ಮಾಸ್ತಿಯವರ ಜ್ಞಾನಪೀಠ ಪುರಸ್ಕೃತ ಚಿಕವೀರ ರಾಜೇಂದ್ರ ಕೃತಿಯನ್ನು ಪ್ರದರ್ಶಿಸಲಾಯಿತು. ಮಾಸ್ತಿ ವೆಂಕಟೇಶ್ ಅಯ್ಯಂಗಾರರ ವಿಡಿಯೋ ತುಣುಕನ್ನು ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ವಿದ್ಯಾ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

Related posts

ಗ್ರಾ.ಪಂ. ನೌಕರರ ನ್ಯಾಯಯುತ ಬೇಡಿಕೆ ಈಡೇರಿಕೆಗೆ ಬಗ್ಗೆ ಮಾರ್ಚ್ 1ರಿಂದ ರಾಜ್ಯಾದ್ಯಂತ ಪ್ರತಿಭಟನೆ: ಸಾರ್ವಜನಿಕ ಮಹತ್ವದ ವಿಚಾರದ ಬಗ್ಗೆ ವಿಧಾನಸಭೆ ಸಭಾಪತಿಯವರಿಗೆ ಪತ್ರ

Suddi Udaya

ಹಿಂದೂ ಧರ್ಮದ ವಿರುದ್ಧ ನೀಡಿರುವ ಹೇಳಿಕೆಗೆ ದ.ಕ. ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಂಘ ಮತ್ತು ಸಮಗ್ರ ಹಿಂದೂ ಸಮಾಜ ಖಂಡನೆ: ಡಾ| ಎಂ.ಎಂ. ದಯಾಕರ್

Suddi Udaya

ಧರ್ಮಸ್ಥಳ: 26ನೇ ವರ್ಷದ ಭಜನಾ ಕಮ್ಮಟದ 4ನೇ ದಿನದ ಕಾರ್ಯಕ್ರಮ

Suddi Udaya

ತುಮಕೂರಿನಲ್ಲಿ ಕಾರಿಗೆ ಬೆಂಕಿ ಮೂವರ ಕೊಲೆ ಪ್ರಕರಣ: ತುಮಕೂರು ಪೊಲೀಸರಿಂದ ತಲೆ ಮರೆಸಿಕೊಂಡಿದ್ದ ಆರು ಮಂದಿ ಆರೋಪಿಗಳ ಬಂಧನ: ಮುರುಡೇಶ್ವರದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳು

Suddi Udaya

ಉಜಿರೆ ಅನುಗ್ರಹ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ

Suddi Udaya

ಕಾಂಗ್ರೆಸ್ ಸಕ್ರಿಯ ಕಾರ್ಯಕರ್ತ ದಿನೇಶ್ ನಾಯ್ಕ ನಿಂತಿಕಲ್ಲು ಭಾರತೀಯ ಜನತಾ ಪಾರ್ಟಿ ಸಿದ್ಧಾಂತ ಒಪ್ಪಿ ಪಕ್ಷಕ್ಕೆ ಸೇರ್ಪಡೆ

Suddi Udaya
error: Content is protected !!