26.2 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಅಳದಂಗಡಿ:ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದಿಂದ ಉಚಿತ ವೈದ್ಯಕೀಯ ತಪಾಸಣೆ& ರಕ್ತದಾನ ಶಿಬಿರ

ಅಳದಂಗಡಿ: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಅಳದಂಗಡಿ ಶಾಖೆಯ ವತಿಯಿಂದ ಉಚಿತ ವೈದ್ಯಕೀಯ, ನೇತ್ರ ತಪಾಸಣಾ ದಂತ ಚಿಕಿತ್ಸಾ ಮತ್ತು ರಕ್ತದಾನ ಶಿಬಿರವು ಶ್ರೀ ಗುರು ಸಭಾ ಭವನ, ಅಳದಂಗಡಿಯಲ್ಲಿ ಜೂ 7ರಂದು ಜರುಗಿತು.

ಶಿಬಿರವನ್ನು ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಇದರ ಅಧ್ಯಕ್ಷ ಸಂತೋಷ್‌ ಪಿ ಕೋಟ್ಯಾನ್ ಬಳಂಜ ಉದ್ಘಾಟಿಸಿ ಮಾತನಾಡಿ ಸಮಾಜದಲ್ಲಿ ಯಾರು ಶ್ರೀಮಂತ ವ್ಯಕ್ತಿ ಎಂದರೆ ಹಣ, ಆಸ್ತಿ, ಅಂತಸ್ತು ಇರುವವನಲ್ಲ.ಬದಲಾಗಿ ಒಳ್ಳೆಯ ಆರೋಗ್ಯ ಇರುವ ವ್ಯಕ್ತಿ ಇಂದಿನ ನಿಜವಾದ ಶ್ರೀಮಂತ. ನಿರಂತರವಾಗಿ ಶಿಬಿರಗಳನ್ನು ಆಯೋಜಿಸಿ ಉತ್ತಮ ಆರೋಗ್ಯಪೂರ್ಣ ಸಮಾಜ ನಿರ್ಮಿಸುವಲ್ಲಿ ಆತ್ಮಶಕ್ತಿ ಸಹಕಾರ ಸಂಘದ ಪಾತ್ರ ಹೆಚ್ಚಿದೆ. ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ರವರ ಬದಲಾವಣೆಯ ದೃಷ್ಟಿಕೋನ ಹಾಗೂ ಮಹಿಳಾ ಸಬಲಿಕರಣದಿಂದ ಸಂಘವು ಅಭಿವೃದ್ಧಿ ಪಥದತ್ತ ಮುನ್ನುಗುತ್ತಿದೆ” ಎಂದು ಶ್ಲಾಘಿಸಿದರು.

ಸಂಘದ ಸದಸ್ಯರಾದ ವಿಶ್ವನಾಥ ಕುದ್ಯಾಡಿರವರು ಮಾತನಾಡಿ “ಊರಿನ ಸಂಘ ಸಂಸ್ಥೆಗಳ ಜೊತೆಗೆ ಎಲ್ಲಾ ಹಿರಿಯನ್ನು ಒಟ್ಟುಗೂಡಿಸಿ ಮಾಡುತ್ತಿರುವ ವೈದ್ಯಕೀಯ ಶಿಬಿರವು ಸಮಾಜಮುಖಿ ಚಟುವಟಿಕೆಯಾಗಿದ್ದು ಇಂತಹ ಕಾರ್ಯಕ್ರಮವನ್ನು ನಡೆಸುತ್ತಿರುವ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘಕ್ಕೆ ಅಭಿನಂದನೆ ಸಲ್ಲಿಸಿದರು.

ಜೆಸಿಐ ಬೆಳ್ತಂಗಡಿ ಇದರ ಕಾರ್ಯದರ್ಶಿಯಾದ ರಕ್ಷಿತ್ ಅಂಡಿಜೆ ಇವರು ಮಾತನಾಡಿ “ಆತ್ಮಶಕ್ತಿ ಸಹಕಾರಿ ಸಂಘವು ಬೇರೆ ಎಲ್ಲಾ ಸಹಕಾರಿ ಸಂಘಗಳಿಗಿಂತ ವಿಭಿನ್ನವಾಗಿ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ನಿರಂತರವಾಗಿ ಆರೋಗ್ಯ ಶಿಬಿರಗಳನ್ನು ಆಯೋಜಿಸಿ, ಕಾರ್ಯಚರಿಸುತ್ತಿದೆ” ಎಂದರು.

ಸಮುದಾಯ ದಂತ ಆರೋಗ್ಯ ವಿಭಾಗ ಯೆನೆಪೊಯ ದಂತ ಕಾಲೇಜು ಮತ್ತು ಆಸ್ಪತ್ರೆ ,ದೇರಳಕಟ್ಟೆ ಇದರ ಸಾರ್ವ ಜನಿಕ ಸಂಪರ್ಕ ಅಧಿಕಾರಿ ಭರತ್ ಕುಮಾರ್ ರವರು ಮಾತನಾಡಿ “ರಕ್ತದಾನ ಶ್ರೇಷ್ಠದಾನ . ಸಾರ್ವಜನಿಕರ ಆರೋಗ್ಯದ ದೂರ ದೃಷ್ಟಿಯನ್ನು ಗಮನದಲ್ಲಿಸಿ ಶಿಬಿರಗಳನ್ನು ಆಯೋಜಿಸುತ್ತಿರುವುದಕ್ಕೆ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು. ಶಿಬಿರದ ಲಭ್ಯವಿರುವ ಸೇವೆಗಳ ಬಗ್ಗೆ ತಿಳಿಸಿ, ಶಿಬಿರದ ಸದುಪಯೋಗ ಪಡೆದುಕೊಳ್ಳಿ” ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ರವರು ಮಾತನಾಡಿ “ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು 14 ವರ್ಷಗಳಿಂದ ಆರೋಗ್ಯ ಶಿಬಿರವನ್ನು ನಿರಂತರವಾಗಿ ನಡೆಸಿಕೊಂಡು ಬಂದಿರುತ್ತದೆ. ಇದು ಸಂಘದ 110 ನೇ ಉಚಿತ ವೈದ್ಯಕೀಯ ಶಿಬಿರವಾಗಿದೆ. ಹಣಕಾಸಿನಲ್ಲಿ ನಾವು ಎಷ್ಟೇ ಸದೃಡರಿದ್ದರು ಆರೋಗ್ಯವು ನಮಗೆ ಮುಖ್ಯ. ಇಂತಹ ಉಚಿತ ಆರೋಗ್ಯ ಶಿಬಿರಗಳಲ್ಲಿ ತಪಾಸಣೆ ಮಾಡಿಸುವುದರ ಮೂಲಕ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬಹುದು. ಗ್ರಾಮೀಣ ಪ್ರದೇಶದ ಜನರ ಆರೋಗ್ಯದ ದೃಷ್ಟಿಯನ್ನು ಗಮನದಲ್ಲಿರಿಸಿ ಗ್ರಾಮೀಣ ಭಾಗದಲ್ಲಿ ಇಂತಹ ಶಿಬಿರವನ್ನು ನಮ್ಮ ಸಂಘವು ಆಯೋಜಿಸಿರುತ್ತದೆ. ಈ ಶಿಬಿರವು ಅಳದಂಗಡಿ ಪರಿಸರದ ಜನರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಹಾಗೇಯೇ ಬಡವ ಶ್ರೀಮಂತ ಎಂಬ ಭೇದ ಭಾವಯಿಲ್ಲದೆ ಎಲ್ಲರೂ ಶಿಬಿರದ ಸದುಪಯೋಗ ಪಡೆದುಕೊಳ್ಳಿ. ಎಂದರು. ಇದರಿಂದ ಸಾರ್ವಜನಿಕರು ಆರೋಗ್ಯದ ಬಗ್ಗೆ ಕಾಳಜಿ ವಹಿಸುವಲ್ಲಿ ನಮ್ಮ ಸಹಕಾರಿ ಸಂಘವು ಮುಖ್ಯ ಪಾತ್ರ ವಹಿಸಿದೆ. ಸಂಘವು ಏರ್ಪಡಿಸುವ ಕಾರ್ಯಕ್ರಮಗಳಲ್ಲಿ ಸ್ಥಳಿಯ ಸಂಘ ಸಂಸ್ಥೆಗಳು ಸಹಕಾರವನ್ನು ನೀಡಿದೆ. ಅದೇ ರೀತಿ ಇಂತಹ ಆರೋಗ್ಯ ಶಿಬಿರವನ್ನು ಏರ್ಪಡಿಸಲು ಸಹಕರಿಸುತ್ತಿರುವ ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ಧಿ ಕೇಂದ್ರ ಪರಿಗಣಿಸಲ್ಪಟ್ಟ ವಿಶ್ವ ವಿದ್ಯಾಲಯ ದೇರಳಕಟ್ಟೆ ಹಾಗೂ ಸಮುದಾಯ ದಂತ ಆರೋಗ್ಯ ವಿಭಾಗ ಯೆನೆಪೊಯ ದಂತ ಕಾಲೇಜು ಮತ್ತು ಆಸ್ಪತ್ರೆ , ದೇರಳಕಟ್ಟೆ ಹಾಗೂ ರಕ್ತದಾನ ವಿಭಾಗ, ಯೆನೆಪೋಯ ಆಸ್ಪತ್ರೆಯ ಸಿಬ್ಬಂದಿ ವರ್ಗದವರಿಗೂ, ಸಹಕರಿಸಿದ ಎಲ್ಲಾ ಸಂಘ -ಸಂಸ್ಥೆಗಳಿಗೂ ಅಭಿನಂದನೆಯನ್ನು ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕರಾದ ರಮಾನಾಥ್ ಸನಿಲ್, ಗೋಪಾಲ್ ಎಮ್. ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಶಿರ್ಲಾಲು ಇದರ ಉಪಾಧ್ಯಕ್ಷರಾದ ಹರೀಶ್ಚಂದ್ರ ಕಲ್ಲಾಜೆ, ಗ್ರಾಮೀಣ ಅರೋಗ್ಯ ರಕ್ಷಣೆ ಮತ್ತು ಅಭಿವೃದ್ಧಿ ಕೇಂದ್ರದ ಮೆಡಿಕಲ್ ಆಫಿಸರ್ ಡಾ. ಶಿರಿಶ್, ಸಮುದಾಯ ದಂತ ವಿಭಾಗದ ಉಪಾನ್ಯಾಸಕರಾದ ಡಾ.ಮಿಫ್ರಾ, ಹಿರಿಯ ವೈದಕೀಯ ಸಮಾಜ ಸೇವಾ ಅಧಿಕಾರಿಯಾದ ಡಾ. ಸ್ವಿಕೃತ, ಮತ್ತಿತರರು ಉಪಸ್ಥಿತರಿದ್ದರು.

ಈ ಶಿಬಿರವನ್ನು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಬಳಂಜ, ಜೆಸಿಐ ಬೆಳ್ತಂಗಡಿ, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಶಿರ್ಲಾಲು ಹಾಗೂ ಯುವಶಕ್ತಿ ನಾವಾರ ಇವರುಗಳ ಜಂಟಿ ಸಹಯೋಗದೊಂದಿಗೆ ಆಯೋಜನೆ ಮಾಡಲಾಗಿತ್ತು.

ಈ ಶಿಬಿರದಲ್ಲಿ ವಿಶೇಷವಾಗಿ ಬಸವರಾಜ್ ಆಕ್ಯೂ ಅಕಾಡೆಮಿ ಡಾ ಬಸವರಾಜ್ ರವರ ವಿದ್ಯಾರ್ಥಿಯಾದ ಸುಕೇಶ್ ಜೈನ್ ರವರ ತಂಡದಿಂದ ಕಲರ್ ಥೆರಪಿಯನ್ನು ಆಯೋಜಿಸಲಾಗಿತ್ತು.ಈ ಶಿಬಿರದ ಪ್ರಯೋಜನವನ್ನು ಸುಮಾರು 130ಕ್ಕೂ ಮಿಕ್ಕಿ ಶಿಬಿರಾರ್ಥಿಗಳು ಪಡೆದುಕೊಂಡರು.

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಳದಂಗಡಿ ಶಾಖೆಯ ಗುಮಾಸ್ತೆಯಾದ ಶ್ರೀಮತಿ ಸ್ವಾತಿ ಎಸ್ ಸ್ವಾಗತಿಸಿ, ಮೂಡಬಿದಿರೆ ಶಾಖೆಯ ಹಿರಿಯ ಶಾಖಾಧಿಕಾರಿಯಾದ ರವಿಕಲಾ ವಂದಿಸಿದರು. ಸಂಘದ ಅಳದಂಗಡಿ ಶಾಖೆಯ ಶಾಖಾಧಿಕಾರಿ ಕಾವ್ಯಶ್ರಿ ರವರು ಕಾರ್ಯಕ್ರಮವನ್ನು ನಿರೂಪಿಸಿದರು.

Related posts

ಧರ್ಮಸ್ಥಳಕ್ಕೆ ಬಂದ ವ್ಯಕ್ತಿ ನಾಪತ್ತೆ: ಪ್ರಕರಣ ದಾಖಲು

Suddi Udaya

ಮಾ.30-ಎ.5: ಮಿತ್ತಬಾಗಿಲು ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ (ದುರ್ಗಾದೇವಿ) ದೇವಸ್ಥಾನದ ವರ್ಷಾವಧಿ ಜಾತ್ರೆ

Suddi Udaya

ನಿಡ್ಲೆ: ಶ್ರೀ ದುರ್ಗಾ ಆಟೋ ವರ್ಕ್ಸ್ ನಲ್ಲಿ ಆಯುಧ ಪೂಜೆ

Suddi Udaya

27 ನೇ ವರ್ಷದ ಭಜನಾ ಕಮ್ಮಟ: ಆಧ್ಯಾತ್ಮಿಕ ಕಮ್ಮಟಗಳು ಭಜನೆಗೆ ಮಾತ್ರವಲ್ಲ, ವ್ಯಕ್ತಿತ್ವ ನಿರ್ಮಾಣಕ್ಕೆ ಉತ್ತಮ ವೇದಿಕೆ:ಅನಿಲ್ ಕುಮಾರ್

Suddi Udaya

ಮುಂಡಾಜೆ ಒಕ್ಕೂಟದ ವತಿಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ವಲಯ ಭಜನಾ ಸಮಾವೇಶ

Suddi Udaya

ನಾಳ ದೇಗುಲದ ಗದ್ದೆಯಲ್ಲಿ ನೇಜಿ ನಾಟಿ

Suddi Udaya
error: Content is protected !!