ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮಾಚಾರ್‌ ಖಿದ್ಮತ್ ಗ್ರೂಪ್ ನೂತನ ಪದಾಧಿಕಾರಿಗಳ ಆಯ್ಕೆ

ಬೆಳಾಲು: ಸಹಕಾರ ಸೇವೆಯೊಂದಿಗೆ ಕಳೆದ 8ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಸಮಾಜ ಸೇವೆ, ಮಾನವೀಯತೆ ಹಾಗೂ ಪರಸ್ಪರ ಸಹಕಾರದ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಖಿದ್ಮತ್ ಗ್ರೂಪ್ ಮಾಚಾರ್‌ನ ಮಹಾಸಭೆಯು ಇತ್ತೀಚೆಗೆ ನಡೆಯಿತು.

ಕಾರ್ಯಕ್ರಮವನ್ನು ಇಸ್ಮಾಯಿಲ್ ಸಅದಿ ಉದ್ಘಾಟಿಸಿ ಮಾತನಾಡಿ, ಸಮಾಜದ ಅಭಿವೃದ್ಧಿಗೆ ಯುವಕರು ಸೇವಾ ಮನೋಭಾವದೊಂದಿಗೆ ಮುನ್ನಡೆಯಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮಾಚಾರು ಖತೀಬರಾದ ಸಲೀಂ ಸಖಾಫಿ ಪ್ರಾಸ್ತಾವಿಕವಾಗಿ ಮಾತನಾಡಿ, ಖಿದ್ಮತ್ ಗ್ರೂಪ್ ಇದುವರೆಗೆ ನಡೆಸಿಕೊಂಡು ಬಂದಿರುವ ಸಮಾಜಮುಖಿ ಹಾಗೂ ಮಾನವೀಯ ಸೇವಾ ಕಾರ್ಯಗಳ ಕುರಿತು ವಿವರಿಸಿದರು. ಸಂಘಟನೆಯು ಮುಂದೆಯೂ ಇದೇ ರೀತಿಯ ಸೇವಾ ಚಟುವಟಿಕೆಗಳನ್ನು ಇನ್ನಷ್ಟು ವಿಸ್ತರಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಬಳಿಕ 2026–27ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಲಹೆಗಾರರಾಗಿ ರಝಕ್ ಹಂದಾನಿ ಹಾಗೂ ಅಶ್ರಫ್ ಬೆಂಗಳೂರು, ಗೌರವ ಅಧ್ಯಕ್ಷರಾಗಿ ಹಾಜಿ ಅಕ್ಬರ್ ಬದ್ರಿಯಾ, ಅಧ್ಯಕ್ಷರಾಗಿ ಆಸೀಫ್ ಕತ್ತಾರ್, ಉಪಾಧ್ಯಕ್ಷರಾಗಿ ಶರೀಫ್ ಮಸ್ಕತ್, ಪ್ರಧಾನ ಕಾರ್ಯದರ್ಶಿಯಾಗಿ ಆರೀಫ್ ಮಾಚಾರ್, ಜೊತೆ ಕಾರ್ಯದರ್ಶಿಯಾಗಿ ಅನ್ಸಾರ್ ಸಅದಿ ಹಾಗೂ ಕೋಶಾಧಿಕಾರಿಯಾಗಿ ಅಝರ್ ಅಂಗಡಿ ಆಯ್ಕೆಯಾಗಿದ್ದಾರೆ.

ಫೀಲ್ಡ್ ಕೋಆರ್ಡಿನೇಟರ್‌ಗಳಾಗಿ ಇಲ್ಯಾಸ್ ಬದನಾಜೆ, ನೌಷದ್ ಬಿ.ಎಂ., ರಿಯಾಜ್ ಬೆದ್ರಳಿಕೆ ಹಾಗೂ ಕಬೀರ್ ಮಿಸ್ಬಾಹಿ ಆಯ್ಕೆಯಾಗಿದ್ದು, ಸದಸ್ಯರಾಗಿ ಶರೀಫ್ ಕೆಳಗಿನ ಮನೆ, ಹನೀಫ್, ಉಸ್ಮಾನ್ ಬೆದ್ರಳಿಕೆ, ಆದಿಲ್ ಅಂಗಡಿ, ಆಸೀಫ್ ಬೊಟ್ಟು, ಅನ್ಸಾರ್ ಹಾಗೂ ಹಾರಿಸ್ ಪಾದೆ ಆಯ್ಕೆಯಾಗಿದ್ದಾರೆ.

ಸಭೆಯಲ್ಲಿ ಸಂಘಟನೆಯ ಮುಂದಿನ ಕಾರ್ಯಯೋಜನೆಗಳ ಕುರಿತು ಚರ್ಚೆ ನಡೆಸಲಾಯಿತು. ಸಮಾಜ ಸೇವೆ, ಶಿಕ್ಷಣ, ಆರೋಗ್ಯ ಹಾಗೂ ತುರ್ತು ನೆರವು ಕಾರ್ಯಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಡೆಸುವ ಸಂಕಲ್ಪವನ್ನು ನೂತನ ಪದಾಧಿಕಾರಿಗಳು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಹಿರಿಯರು, ಸದಸ್ಯರು ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದರು.
ವರದಿ: ಶಝಾ ಶಮ್ಲಾ

Related posts

ಟೀಂ ಅಭಯಹಸ್ತ ವತಿಯಿಂದ ಸರ್ಕಾರಿ ಶಾಲೆಗಳಲ್ಲಿ ಸ್ಪರ್ಧಾ ಕಾರ್ಯಕ್ರಮಗಳ ಆಯೋಜನೆ

Suddi Udaya

ನಕಲಿ ಚಿನ್ನದ ಹಾವಳಿ ತಡೆಗೆ ಶಾಸಕರಿಗೆ ಮನವಿ

Suddi Udaya

ಸುಲ್ಕೇರಿ ಶ್ರೀ ರಾಮ ಶಾಲೆಯಲ್ಲಿ ಯಕ್ಷಧ್ರುವ ಯಕ್ಷ ಶಿಕ್ಷಣ ನಾಟ್ಯಾಭ್ಯಾಸ ಉದ್ಘಾಟನೆ

Suddi Udaya

ತಲೆಮರೆಸಿಕೊಂಡು ಮೃತಪಟ್ಟ ಆರೋಪಿಯ ಮರಣ ಪತ್ರ ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು

Suddi Udaya

ಅರಸಿನಮಕ್ಕಿ: ಅಂಗಡಿ ಗುಡ್ಡೆ ನಿವಾಸಿ ಶ್ರೀಮತಿ ಬಾಲಕಿ ನಿಧನ

Suddi Udaya

ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

Suddi Udaya
error: Content is protected !!