ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮೊಗ್ರು : ಬುಳೇರಿ ಮೊಗ್ರು ಪ್ರೌಢಶಾಲೆಯಲ್ಲಿ ನೀರಿನ ಸಮಸ್ಯೆ – ಶಾಸಕ ಹರೀಶ್ ಪೂಂಜಾ ರಿಂದ ತಕ್ಷಣ ಸ್ಪಂದನೆ, ಬೋರ್‌ವೆಲ್ ಸೌಲಭ್ಯ

ಮೊಗ್ರು: ಮೊಗ್ರು ಗ್ರಾಮ ಬುಳೇರಿಮೊಗ್ರು ಸರಕಾರಿ ಪ್ರೌಢ ಶಾಲೆ ಯಲ್ಲಿ ಉಂಟಾಗಿದ್ದ ನೀರಿನ ಸಮಸ್ಯೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಶಾಲಾ ಮಕ್ಕಳ ಹಿತದೃಷ್ಟಿಯಿಂದ ತಮ್ಮಶಾಸಕರ ವಿವೇಚನಾ ನಿಧಿಯಿಂದ ಬೋರ್‌ವೆಲ್ ಸೌಲಭ್ಯವನ್ನು ಶಾಸಕ ಹರೀಶ್ ಪೂಂಜ ರವರು ಒದಗಿಸುವ ಮೂಲಕ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಹೊಸ ಚೈತನ್ಯ ತುಂಬಿದ್ದಾರೆ .

ಶುದ್ಧ ನೀರಿನ ಸೌಲಭ್ಯವು ಮಕ್ಕಳ ಆರೋಗ್ಯ ಮತ್ತು ಶಿಕ್ಷಣಕ್ಕೆ ಅತ್ಯಗತ್ಯ ಎಂಬುದನ್ನು ಅರಿತು, ಶಾಲೆಯ ಮೂಲಭೂತ ಅಗತ್ಯಕ್ಕೆ ತಕ್ಷಣ ಸ್ಪಂದಿಸಿರುವ ಶಾಸಕರ ಈ ಜನಪರ ಕಾಳಜಿ ನಿಜಕ್ಕೂ ಶ್ಲಾಘನೀಯ. “ಮಕ್ಕಳ ಭವಿಷ್ಯವೇ ನಾಳೆಯ ಬಲಿಷ್ಠ ಸಮಾಜ” ಎಂಬ ಧೈಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಶಾಸಕರಿಗೆ ಬಂದಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ದಿನೇಶ್ ಗೌಡ ಖಂಡಿಗ, ಮಾಜಿ ಸದಸ್ಯರಾದ ಬಾಲಕೃಷ್ಣ ಗೌಡ ಮುಗೇರಡ್ಕ, ಗಂಗಾಧರ ಪೂಜಾರಿ ದoಬೆತ್ತಿಮಾರು, ಹಾಗೂ ಪಿಜಿನ ಮೊಗೇರ, ಶಾಲಾ ಮೇಲುಸ್ತುವಾರಿ ಸಮಿತಿಯ ಪದಾಧಿಕಾರಿಗಳು, ಮುಖ್ಯೋಪಾದ್ಯಾಯರು,ಶಿಕ್ಷಕ ವೃಂದ, ಪೋಷಕ ವೃಂದ,ವಿದ್ಯಾರ್ಥಿಗಳು, ಗ್ರಾಮಸ್ಥರು ಕೃತಜ್ಞತೆ ಸಲ್ಲಿಸಿದರು.

Related posts

ಬೆಳ್ತಂಗಡಿ: ವಿನು ಬಳಂಜ ನಿದೇ೯ಶನದ “ಬೇರ” ಚಲನಚಿತ್ರ ಬಿಡುಗಡೆ

Suddi Udaya

ಇಳಂತಿಲ: ದರೋಡೆ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆ ಪ್ರಕಟ

Suddi Udaya

ನಾವರ ರಾಜಪಾದೆ ನಿವಾಸಿ ಹಿಲಾರಿ ಡಿ.ಸೋಜ ನಿಧನ

Suddi Udaya

ಸಮಾಜ ಸೇವಕ ಅಜೇಯ್ ಜೇಕಬ್ ಮಟ್ಲರವರ ನೇತೃತ್ವದಲ್ಲಿ ಹಲವು ಮಂದಿ ಬಿಜೆಪಿಗೆ ಸೇರ್ಪಡೆ

Suddi Udaya

ಶಿಶಿಲ ಹಾ.ಉ.ಸ. ಸಂಘದ ಅಧ್ಯಕ್ಷರಾಗಿ ಸಂತೋಷ್ ಎ.ಎಸ್ ಹಾಗೂ ಉಪಾಧ್ಯಕ್ಷರಾಗಿ ಡಿ ಲಕ್ಷ್ಮೀಶ ಗೌಡ ಆಯ್ಕೆ

Suddi Udaya

ಧರ್ಮಸ್ಥಳ: ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆ ಹಾಗೂ ಸೆಲ್ಕೋ ಫೌಂಡೇಶನ್ ಬೆಂಗಳೂರು ಆಶ್ರಯದಲ್ಲಿ ಸಮೃದ್ಧಿ ಸಂತೃಪ್ತಿ ಸಬಲೀಕರಣ ಮಹಿಳಾ ಉದ್ಯಮಿಗಳ ಕಾರ್ಯಾಗಾರ

Suddi Udaya
error: Content is protected !!