ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಗುರುವಾಯನಕೆರೆ ಮೆಡೆಕ್ಸ್ ಪಾಲಿಕ್ಲಿನಿಕ್ಸ್ ನಲ್ಲಿ ಖಾಸಗಿ ಬಸ್ ನೌಕರರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

ಬೆಳ್ತಂಗಡಿ: ಗುರುವಾಯನಕೆರೆ ಮೆಡೆಕ್ಸ್ ಪಾಲಿಕ್ಲಿನಿಕ್ಸ್ ನಲ್ಲಿ ಖಾಸಗಿ ಬಸ್ ನೌಕರರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಜೂ 4ರಂದು ಆಯೋಜಿಸಲಾಯಿತು.

ವಿಕಾಸ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಅಲೋಶಿಯಸ್ ಡಿಸೋಜ ಮಾತನಾಡಿ ಆರೋಗ್ಯವೇ ಭಾಗ್ಯ.ಈ ರೀತಿಯ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜನೆಯಿಂದ ಹೆಚ್ಚಿನ ಜನರಿಗೆ ಒಳ್ಳೆಯ ಮಾಹಿತಿ ಸಿಗುತ್ತದೆ ಎಂದರು.

ಸುದ್ದಿ ಉದಯ ವಾರಪತ್ರಿಕೆಯ ಮುಖ್ಯಸ್ಥರಾದ ಸಂತೋಷ್ ಪಿ ಕೋಟ್ಯಾನ್ ಮಾತನಾಡಿ ಇಂದಿನ ಒತ್ತಡದ ಜೀವನ ಪದ್ದತಿಯಲ್ಲಿ ಆರೋಗ್ಯವನ್ನು ಕಾಪಾಡುವುದೇ ಒಂದು ಸವಾಲಾಗಿದೆ. ಖಾಸಾಗಿ ಬಸ್ಸ್ ನೌಕರರಿಗೆ ಉಚಿತ ಆರೋಗ್ಯ ಶಿಬಿರ ಏರ್ಪಡಿಸುವುದರಿಂದ ತುಂಬಾ ಜನರಿಗೆ ಪ್ರಯೋಜನವಾಗಿದೆ ಎಂದರು.

ಖಾಸಗಿ ಬಸ್ ನೌಕರರ ಸಂಘದ ಗೌರವ ಸಲಹೆಗಾರರಾದ ಚಿದಾನಂದ ಸಾಲಿಯಾನ್ ಮಾತನಾಡಿ ನಮ್ಮಂತಹ ಬಸ್ ನೌಕರರನ್ನು ಗುರುತಿಸಿ ಬಸ್ ನೌಕರರ ಆರೋಗ್ಯದ ಕ್ಷೇಮಕ್ಕಾಗಿ ಐದು ದಿನಗಳ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿದ್ದು ಒಳ್ಳೆಯ ಬೆಳವಣಿಗೆ ಎಂದರು.

ವೇದಿಕೆಯಲ್ಲಿ ಡಾ | ವನೋರ ಲೋಬೊ,ಡಾ | ನಿಶಾ ಸಿಕ್ವೇರಾ, ಕಟ್ಟೆಮಾರ್ ಕ್ಷೇತ್ರದ ಧರ್ಮದರ್ಶಿ ಮನೋಜ್ ಕಟ್ಟೆಮಾರ್,ಖಾಸಗಿ ಬಸ್ ನೌಕರ ಸಂಘದ ಜಿಲ್ಲಾಧ್ಯಕ್ಷರಾದ ಸಿದ್ದಿ ಕೆಂಪಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ರಾಜ ಕೇಸರಿ ಸೇವಾ ಟ್ರಸ್ಟ್ ಕರ್ನಾಟಕದ ಸಂಸ್ಥಾಪಕರಾದ ದೀಪಕ್.ಜಿ ಬೆಳ್ತಂಗಡಿ, ಸರ್ವ ಪದಾಧಿಕಾರಿಗಳಾದ
ಪದ್ಮಪ್ರಸಾದ್, ನಾರಾಯಣ್, ಇಲಿಯಾಸ್, ಪ್ರವೀಣ್ ಪಿಂಟೋ ,ದಿವಾಕರ್, ಚಿದಾನಂದ್ ಸಾಲಿಯಾನ್, ಜಯ ಉಪ್ಪಿನಂಗಡಿ, ಚಾಬಕ್ಕ ಸೇರಿದಂತೆ ಖಾಸಗಿ ಬಸ್ ನೌಕರರ ಸಂಘದ ಹಲವು ಪದಾಧಿಕಾರಿಗಳು, ಮೆಡೆಕ್ಸ್ ಪಾಲಿಕ್ಲಿನಿಕ್ ನ ಮುಖ್ಯಸ್ಥರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಹಿರಿಯ ಚಾಲಕರಾದ ಚಾಬಕ್ಕ ಇವರನ್ನು ಗೌರವಿಸಲಾಯಿತು.

Related posts

ಉರುವಾಲು ಹಾಗೂ ಪದ್ಮುಂಜ ಶ್ರೀ ವರಾಮಹಾಲಕ್ಷ್ಮಿ ಪೂಜೆ ಹಾಗೂ ಒಕ್ಕೂಟ ಪದಗ್ರಹಣ ಸಮಾರಂಭ

Suddi Udaya

ಎಕ್ಸೆಲ್ ನಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ನಾಳೆಯಿಂದ ಉಚಿತ ಎಕ್ಸೆಲ್ ಕನೆಕ್ಟ್ ಕ್ಲಾಸ್

Suddi Udaya

ಶಾಸಕ ಹರೀಶ್ ಪೂಂಜರವರಿಂದ ನಾರಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕೊಕ್ರಾಡಿ ಶಾಖೆಯ ಕೃಷಿ ಗೊಬ್ಬರ ಮಾರಾಟ ಕೇಂದ್ರ ಹಾಗೂ ಎಟಿಎಂ ಉದ್ಘಾಟನೆ

Suddi Udaya

ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಪ್ರೌಢಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

Suddi Udaya

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಸಪ್ರಶ್ನೆ ಸ್ಪರ್ಧೆ

Suddi Udaya

ಬೆಳ್ತಂಗಡಿ ಪಟ್ಲ ಫೌಂಡೇಷನ್ ಘಟಕದ ವತಿಯಿಂದ ಗುರುವಾಯನಕೆರೆ ನವಶಕ್ತಿ ಮೈದಾನದಲ್ಲಿ “ಯಕ್ಷ ಸಂಭ್ರಮ” : ಪೂರ್ವಭಾವಿ ಸಭೆ

Suddi Udaya
error: Content is protected !!