30.3 C
ಪುತ್ತೂರು, ಬೆಳ್ತಂಗಡಿ
September 9, 2026
ಗ್ರಾಮಾಂತರ ಸುದ್ದಿ

ಕನ್ಯಾಡಿ 2 ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ ಹಾಗೂ “ಪೋಷಕರ – ಶಿಕ್ಷಕರ ಸಭೆ

ಕನ್ಯಾಡಿ 2 : ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕನ್ಯಾಡಿ 2, 2026- 27ನೇ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವದ ಕಾರ್ಯಕ್ರಮ ಮತ್ತು”ಪೋಷಕರ – ಶಿಕ್ಷಕರ ಮಹಾ ಸಭೆ” ಇತ್ತೀಚೆಗೆ ನಡೆಯಿತು.

ಅತಿಥಿಗಳಾದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಾಯತ್ರಿ ಧರ್ಮಸ್ಥಳ, ಪವಿತ್ರ ಸುಕುಮಾರ ಶೆಟ್ಟಿ , ಎಸ್ ಡಿ ಎಮ್ ಸಿ ಅಧ್ಯಕ್ಷ ಕೆ.ನಂದ , ಗೌರವ ಸಲಹೆಗಾರರಾದ ರಾಜೇಂದ್ರ ಅಜ್ರಿ , . ನೀಲಕಂಠ ಶೆಟ್ಟಿ, ಹಿರಿಯ ವಿದ್ಯಾರ್ಥಿ ಸುದರ್ಶನ್ ಕನ್ಯಾಡಿ, ಕಿರಣ್ , ಎಸ್‌ಡಿ ಎಂ ಸಿ ಯ ಸದಸ್ಯರು, ಮುಖ್ಯ ಶಿಕ್ಷಕಿ ಶ್ರೀಮತಿ ಪುಷ್ಪಾ . ಎನ್ ಮತ್ತು ಶಿಕ್ಷಕ ವೃಂದ , ಪೋಷಕ ವೃಂದದವರು ಉಪಸ್ಥಿತರಿದ್ದರು.

ನಂತರ ಪೋಷಕ ಶಿಕ್ಷಕರ ಮಹಾ ಸಭೆಯನ್ನು ದೀಪ ಬೆಳಗಿಸುವುದರ ಮೂಲಕ ಶುಭ ಆರಂಭಗೊಂಡಿತು. ಪೋಷಕರ ಸಮ್ಮುಖದಲ್ಲಿ ಅತಿಥಿಗಳ ಕೈಯಿಂದ ಉಚಿತ ಪುಸ್ತಕವನ್ನು ಸಾಂಕೇತಿಕವಾಗಿ ವಿತರಿಸಲಾಯಿತು . ಪೋಷಕರಿಗೆ ಶೈಕ್ಷಣಿಕ ಮಾಹಿತಿಗಳನ್ನು ಮುಖ್ಯೋಪಾಧ್ಯಾಯಿನಿ ಪುಷ್ಪಾ ಎನ್ ನೀಡಿದರು. ಶ್ರೀಮತಿ ಗಾಯತ್ರಿ ಅಭಿವೃದ್ಧಿ ಅಧಿಕಾರಿ ಗ್ರಾಮ ಪಂಚಾಯತ್ ಧರ್ಮಸ್ಥಳ ಇವರು ಶೈಕ್ಷಣಿಕವಾಗಿ ಮಕ್ಕಳಿಗೆ ಪೋಷಕರ ಪಾತ್ರದ ಬಗ್ಗೆ ಮಾಹಿತಿ ನೀಡಿದರು. ಶಾಲೆಯ ಸರ್ವತೋಮುಖ ಅಭಿವೃದ್ಧಿಯ ಕಡೆಗೆ ಪೋಷಕರ ಮತ್ತು ಸಮಿತಿಯವರ ಪಾತ್ರದ ಬಗ್ಗೆ ತಿಳಿಸಿ ಎಲ್ಲರಿಗೂ ಶುಭವನ್ನು ಹಾರೈಸಿದರು. ಹಿರಿಯ ವಿದ್ಯಾರ್ಥಿ ಹಾಗೂ ಗೌರವ ಸಲಹೆಗಾರರಾಗಿ ರಾಜೇಂದ್ರ ಆಜ್ರಿಯವರು ಶುಭವನ್ನು ಹಾರೈಸಿದರು . ಸಹಶಿಕ್ಷಕಿ ದೀಪಿಕಾ ಸ್ವಾಗತಿಸಿ , ಶ್ರೀಮತಿ ಜೆಸಿಂತಾ ನೊರೊನ್ಹಾ ವಂದಿಸಿದರು. ಸಹ ಶಿಕ್ಷಕರಾದ ಶ್ರೀಮತಿ ಅರ್ಚನಾ. ಎಸ್ ಕಾರ್ಯಕ್ರಮವನ್ನು ನಿರೂಪಿಸಿದರು.

Related posts

ಡಿ.19: ನವಚೇತನಾ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿ (ನಿ.) ವಾರ್ಷಿಕ ಸಾಮಾನ್ಯ ಸಭೆ ಹಾಗೂ ನೂತನ ಕಟ್ಟಡದ ಉದ್ಘಾಟನೆ

Suddi Udaya

ಲಾಯಿಲ ಸೈಂಟ್ ಮೇರಿಸ್ ಆಂಗ್ಲಮಾಧ್ಯಮ ಶಾಲೆಯ ಬೆಳ್ಳಿ ಹಬ್ಬದ ಪ್ರಯುಕ್ತ ಮೇಲ್ಬಾವಣಿಯ ಶಂಖು ಸ್ಥಾಪನೆ

Suddi Udaya

ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿಗಳ ಮೇಲೆ ದೌರ್ಜನ್ಯ ಮಾಡುತ್ತಿರುವ ಚಿಕ್ಕಮಗಳೂರು ಜಿಲ್ಲೆಯ ಮೀನಾ ನಾಗರಾಜ್ ಮತ್ತು ಅಪರ ಜಿಲ್ಲಾಧಿಕಾರಿ ಕನಕರೆಡ್ಡಿ ಇವರನ್ನು ಕೂಡಲೇ ವರ್ಗಾವಣೆ ಮಾಡಿ ನ್ಯಾಯ ಒದಗಿಸಿಕೊಡುವಂತೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಕಂದಾಯ ಸಚಿವ ಕೃಷ್ಣಬೈರೇಗೌಡ ರವರಿಗೆ ಬೆಳ್ತಂಗಡಿ ತಾಲೂಕಿನ ಗ್ರಾಮ ಆಡಳಿತ ಅಧಿಕಾರಿ ಸಂಘದಿಂದ ಮನವಿ

Suddi Udaya

ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಒಂದೂವರೆ ತಿಂಗಳ ಮಗು ಸಾವು: ಆಸ್ಪತ್ರೆಗೆ ಭೇಟಿ ನೀಡಿದ ಮಾಜಿ ಶಾಸಕ ವಸಂತ ಬಂಗೇರ ಸೂಕ್ತ ತನಿಖೆಗೆ ಒತ್ತಾಯ

Suddi Udaya

ಜ.3 -4: ನಲಿಕೆ ಸಮಾಜ ಬಾಂಧವರ 5 ಓವರ್‌ಗಳ 7 ಜನರ ಹೊನಲು ಬೆಳಕಿನ ಸೂಪರ್ ಸಿಕ್ಸ್ ಅಂಡರ್ ಆರ್ಮ್ ಕ್ರಿಕೆಟ್‌ ಪಂದ್ಯಾಟ : ಮಾರಿಗುಡಿ ಫ್ರೆಂಡ್ಸ್ ಟ್ರೋಫಿ – 2026

Suddi Udaya

ಕುಕ್ಕೇಡಿ ಗ್ರಾಮದ ಪಾಳ್ಯ ದರ್ಖಾಸು ನಿವಾಸಿ ವಿಶ್ವನಾಥ ವಿಷ ಸೇವಿಸಿ ಅತ್ಮಹತ್ಯೆ

Suddi Udaya
error: Content is protected !!