30.3 C
ಪುತ್ತೂರು, ಬೆಳ್ತಂಗಡಿ
September 9, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘಕ್ಕೆ ಒರಿಸ್ಸಾ ರಾಜ್ಯದ ಸಹಕಾರಿ ಪ್ರತಿನಿಧಿಗಳ ಭೇಟಿ

ಇಂದಬೆಟ್ಟು: ಸಹಕಾರ ರಂಗದಲ್ಲಿ ಸದಸ್ಯರು ಹಾಗೂ ಗ್ರಾಹಕರಿಗೆ ವಿಶಿಷ್ಟ ರೀತಿಯ ಸೇವೆ ನೀಡುತ್ತಿರುವ ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘವು ರಾಜ್ಯಕ್ಕೆ ಮಾದರಿ ಸಹಕಾರಿ ಸಂಘವಾಗಿದ್ದು,ಇದರ ಕಾರ್ಯಚಟುವಟಿಕೆಗಳ ಅಧ್ಯಯನ ನಡೆಸಲು ಒರಿಸ್ಸಾ ರಾಜ್ಯದ ಸುಂದರ್‌ಗಾಡ್ ಜಿಲ್ಲೆಯ ಪ್ಯಾಕ್ಸ್ ಹಾಗೂ ಲ್ಯಾಂಪ್ ಸೊಸೈಟಿಗಳ ಪ್ರತಿನಿಧಿಗಳ ತಂಡದ 25 ಮಂದಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಹಾಗೂ ಅಧ್ಯಕ್ಷರುಗಳು ಜೂ.10 ರಂದು ಸಂಘದ ಕಿಲ್ಲೂರು ಹಾಗೂ ಕಡಿರುದ್ಯಾವರ ಶಾಖೆಗೆ ಬೇಟಿ ನೀಡಿತು.

ನಬಾರ್ಡ್ ಸಂಸ್ಥೆಯಿಂದ ಸಾಲ ಪಡೆದು ನಿರ್ಮಾಣವಾದ ಎರಡು ಶಾಖೆಗಳ ಪೂರಕ ಮಾಹಿತಿಯನ್ನು ಒದಗಿಸಲಾಯಿತು. ಸಂಘದ ಕಾರ್ಯನಿರ್ವಹಣೆ, ಸಾಲ ವಿತರಣೆ ವ್ಯವಸ್ಥೆ, ಮಾರಟ ಜೋಡನೆ ವ್ಯವಸ್ಥೆಯ ಮಾಹಿತಿಯನ್ನು ಬೇಟಿ ನೀಡಿದ ತಂಡವು ಪಡೆದುಕೊಂಡಿತು.

ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘವು1250 ಕೋಟಿ ವ್ಯವಹಾರವನ್ನು ನಡೆಸಿ, 6402 ಸದಸ್ಯರನ್ನು ಹೊಂದಿ,ರೂ 210 ಕೋಟಿಗೂ ಮಿಕ್ಕಿ ಸಾಲ ನೀಡಲಾಗಿದ್ದು, ಇದರಲ್ಲಿ 44 ಕೋಟಿಗೂ ಮಿಕ್ಕಿ ಬೆಳೆ ಸಾಲಗಳನ್ನು ವಿತರಿಸಲಾಗಿದೆ. ಸಂಘವು 2025-26 ಸಾಲಿನಲ್ಲಿ 5 ಕೋಟಿ ಮಿಕ್ಕಿ ನಿವ್ವಳ ಲಾಭ ಗಳಿಸಿದೆ. ಸಂಘವು ಪೂರ್ಣ ಪ್ರಮಾಣದ ಎಂಟು ಶಾಖೆಗಳನ್ನು ಹೊಂದಿದ್ದು, ಪತ್ತು ಮತ್ತು ಪತ್ತೇತರ ವ್ಯವಹಾರಗಳನ್ನು ನಡೆಸುತ್ತಿದೆ. ಈ ಎಲ್ಲಾ ವ್ಯವಹಾರಗಳ ಯಶಸ್ವಿ ಅನುಷ್ಟಾನದಿಂದ ನಬಾರ್ಡಿನ ಗಮನ ಸೆಳೆದಿದೆ.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಹರೀಶ್ ಸಾಲಿಯಾನ್ ಮತ್ತು ನಬರ್ಡ್ ಸಂಸ್ಥೆಯ ಡಿ.ಜಿ.ಎಂ ಪ್ರತಾಪ್ ಇ ಹಾಗೂ ಉಪಾಧ್ಯಕ್ಷ ಆನಂದ ಗೌಡ. ನಿರ್ದೇಶಕ ವಿನಯಚಂದ್ರ ಗೌಡ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ದಯಾನಂದ ಶೆಟ್ಟಿಗಾರ್ , ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚಂದ್ರಕಾಂತ ಗೌಡ, ಸಂಘದ ಸಿಬ್ಬ೦ದಿಗಳು ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಹಿರಿಯ ವಿದ್ಯಾರ್ಥಿಗಳ ಸಭೆ:ಶಾಲಾ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಬಗ್ಗೆ ಸಮಗ್ರ ಚರ್ಚೆ :ಹಿರಿಯ ವಿದ್ಯಾರ್ಥಿ ಸಂಘದ ಸಮಿತಿ ರಚನೆ:ಅಧ್ಯಕ್ಷರಾಗಿ ವಾಸುದೇವ ಸೋಮಯಾಜಿ, ಕಾರ್ಯದರ್ಶಿಯಾಗಿ ಪೂರ್ಣಿಮಾ

Suddi Udaya

ಜೆ ಇ ಇ ಮೈನ್ಸ್ – 2: ಎಕ್ಸೆಲ್ ಗುರುವಾಯನಕೆರೆ ವಿದ್ಯಾರ್ಥಿಗಳ ಅದ್ವಿತೀಯ ಸಾಧನೆ

Suddi Udaya

ಡಿ:7ರಂದು ಬೆಳ್ತಂಗಡಿಯಲ್ಲಿ 12ನೇ ವರ್ಷದ ಕೋಟಿ- ಚೆನ್ನಯ ಕ್ರೀಡಾಕೂಟ

Suddi Udaya

ಕಲ್ಮಂಜದ ಮತಗಟ್ಟೆಗೆ ಶಾಸಕ ಹರೀಶ್ ಪೂಂಜ ಹಾಗೂ ವಿ.ಪ. ಸದಸ್ಯ ಪ್ರತಾಪ್ ಸಿಂಹ ನಾಯಕ್ ಭೇಟಿ

Suddi Udaya

ನಾಳ ಗೋಪಾಲಕೃಷ್ಣ ಕಾಮತ್ ನಿಧನ

Suddi Udaya

ಮಾಜಿ ಸಚಿವ ಗಂಗಾಧರ ಗೌಡರವರ ಕಚೇರಿಯಲ್ಲಿ ಇಂದಿರಾ ಗಾಂಧಿ ಯವರ ಪುಣ್ಯಸ್ಮರಣೆ ಆಚರಣೆ

Suddi Udaya
error: Content is protected !!