26.1 C
ಪುತ್ತೂರು, ಬೆಳ್ತಂಗಡಿ
September 11, 2026
Uncategorized

ಪ್ರಧಾನಿ ನರೇಂದ್ರ ಮೋದಿ ಸರಕಾರಕ್ಕೆ 12 ವರ್ಷ: ಅರಿಕೆಗುಡ್ಡೆ ಕ್ಷೇತ್ರದಲ್ಲಿ ಅಭಿಮಾನಿಗಳ ವತಿಯಿಂದ ವಿಶೇಷ ಪೂಜೆ

ಬೆಳ್ತಂಗಡಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು 12 ವರ್ಷಯಶಸ್ವಿಯಾಗಿ ಪೂರೈಸಿದ ಹಿನ್ನೆಲೆಯಲ್ಲಿ ಅರಿಕೆಗುಡ್ಡೆ ಕ್ಷೇತ್ರದಲ್ಲಿ ಅಭಿಮಾನಿಗಳ ವತಿಯಿಂದ ವಿಶೇಷ ಪೂಜೆ ಹಾಗೂ ಪ್ರಾರ್ಥನಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ದೇಶದ ಅಭಿವೃದ್ಧಿ, ಜನಪರ ಯೋಜನೆಗಳು ಹಾಗೂ ರಾಷ್ಟ್ರದ ಸಮಗ್ರ ಪ್ರಗತಿಗೆ ಕಾರಣವಾದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಡಳಿತವನ್ನು ಸ್ಮರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.


ಈ ಸಂದರ್ಭದಲ್ಲಿ ಅರಸಿನಮಕ್ಕಿ ಗ್ರಾಮ ಪಂಚಾಯತ್‌ನ ಮಾಜಿ ಉಪಾಧ್ಯಕ್ಷ ಸುಧೀರ್ ಕುಮಾರ್ ಎಂ.ಎಸ್., ಬಿಜೆಪಿ ಧರ್ಮಸ್ಥಳ ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಗಣೇಶ್ ಅರಸಿನಮಕ್ಕಿ, ಶಕ್ತಿ ಕೇಂದ್ರ ಪ್ರಮುಖ ಜಯಪ್ರಸಾದ್, ಅರ್ಚಕರಾದ ವೃಷಾಂಕ್ ಖಾಡಿಲ್ಕರ್ ಹಾಗೂ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮಯ ಬಾರಿಗ ಉಪಸ್ಥಿತರಿದ್ದರು. ಪೂಜೆಯ ಬಳಿಕ ದೇಶದ ಸುಭಿಕ್ಷತೆ, ಅಭಿವೃದ್ಧಿ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಲಾಯಿತು.

Related posts

ಬೆಳ್ತಂಗಡಿ ವಕೀಲರ ಭವನಕ್ಕೆ ಕರ್ನಾಟಕ ಲೋಕಾಯುಕ್ತ ರಿಜಿಸ್ಟರ್ ಶ್ರೀಮತಿ ಉಷಾರಾಣಿ ಭೇಟಿ

Suddi Udaya

ಗುರುವಾಯನಕೆರೆ ಶಕ್ತಿನಗರದ ಅಕ್ರಮ ಕಸಾಯಿಖಾನೆ ಅಡ್ಡೆ ಮೇಲೆ ಪೊಲೀಸ್ ದಾಳಿ: ಇಬ್ಬರ ಬಂಧನ

Suddi Udaya

ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಖಂಡನೆ: ಜಿಲ್ಲಾ ಬಂದ್‌ಗೆ ಹಿಂದೂ ಸಂಘಟನೆಗಳ ಕರೆ : ಬೆಳ್ತಂಗಡಿ ತಾಲೂಕಿನ ಪೇಟೆಗಳಲ್ಲಿ ಭಾಗಶಃ ಅಂಗಡಿ-ಮುಂಗಟ್ಟುಗಳು ಬಂದ್

Suddi Udaya

ಮಾಚಾರಿನಲ್ಲಿ ಮಹಿಳೆಯೋರ್ವರ ಶವ ಬಾವಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಪತ್ತೆ: ಸ್ಥಳಕ್ಕೆ ಪೊಲೀಸರ‌ ಆಗಮನ ಮುಂದುವರಿದ ತನಿಖೆ

Suddi Udaya

ಮಡಂತ್ಯಾರು ಪುಂಜಾಲಕಟ್ಟೆ ಎಲ್ಲಾ ಸಂಘಟನೆಗಳ ಸಹಕಾರದಲ್ಲಿ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ಹೆದ್ದಾರಿಯ ಶ್ರಮದಾನ

Suddi Udaya

ಬೆಳ್ತಂಗಡಿ ಬಿಎಂಎಸ್ ರಿಕ್ಷಾ ಚಾಲಕರ ಸಂಘದ ಆಪತ್ಕಾಲದ 29ನೇ ಕ್ಷೇಮ ನಿಧಿ ಯೋಜನೆಯ ಸಹಾಯಧನ ವಿತರಣೆ

Suddi Udaya
error: Content is protected !!