28.1 C
ಪುತ್ತೂರು, ಬೆಳ್ತಂಗಡಿ
September 10, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಕಡಿತಗೊಂಡಿದ್ದ ಅಂಬಡಬೆಟ್ಟು ತಾತ್ಕಾಲಿಕ ರಸ್ತೆಗೆ ಶಾಸಕ ಹರೀಶ್ ಪೂಂಜರ ಸ್ಪಂದನೆ

ಉಜಿರೆ: ಉಜಿರೆ ಮತ್ತು ಇಂದಬೆಟ್ಟು ಗ್ರಾಮಗಳ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಅಂಬಡಬೆಟ್ಟು ಸೇತುವೆಯ ಪಕ್ಕದಲ್ಲಿ ನಿರ್ಮಿಸಲಾಗಿದ್ದ ತಾತ್ಕಾಲಿಕ ರಸ್ತೆಯು ಜೂ. 9ರಂದು ಸುರಿದ ಭಾರಿ ಮಳೆಗೆ ಸಂಪೂರ್ಣವಾಗಿ ಕೊಚ್ಚಿ ಹೋಗಿದ್ದು ಇದಕ್ಕೆ ಶಾಸಕ ಹರೀಶ್ ಪೂಂಜರು ಸ್ಪಂದನೆ ನೀಡಿದ್ದು ಇಂದು ತಾತ್ಕಾಲಿಕ ರಸ್ತೆಗೆ ಮರು ಜೀವ ಬಂದಂತಾಗಿದೆ.

ರಸ್ತೆ ಕೊಚ್ಚಿ ಹೋದ ಪರಿಣಾಮ ಈ ಮಾರ್ಗದಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದ್ದು, ಸಾರ್ವಜನಿಕರ ಕಾಲ್ನಡಿಗೆಗೂ ಅಸಾಧ್ಯವಾಗಿದ್ದು ಇಂದು ಹಿಟಾಚಿ ಮೂಲಕ ಮಣ್ಣು ಹಾಕಿ ಉಜಿರೆ ಮತ್ತು ಇಂದಬೆಟ್ಟು ಗ್ರಾಮಗಳ ಪ್ರಮುಖ ಸಂಪರ್ಕ ಕೊಂಡಿಯಾಗಿದ್ದ ಈ ರಸ್ತೆಯಲ್ಲಿ ಮತ್ತೆ ಸಂಚಾರವನ್ನು ಬೆಳೆಸಬಹುದಾಗಿದೆ .ಸಮಸ್ಯೆಗೆ ತ್ವರಿತ ಸ್ಪಂದನೆ ನೀಡಿ ರಸ್ತೆ ಸಂಪರ್ಕ ಒದಗಿಸಿದ ಶಾಸಕ ಹರೀಶ್ ಪೂಂಜರಿಗೆ ಈ ಭಾಗದ ಗ್ರಾಮಸ್ಥರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Related posts

ನ್ಯೂ ವೈಬ್ರೆಂಟ್ ಪಿಯು ಕಾಲೇಜಿನ 12 ವಿದ್ಯಾರ್ಥಿಗಳಿಗೆ 99 ಪರ್ಸೆಂಟೇಲ್

Suddi Udaya

ಎ.16-21: ಬೆಳ್ತಂಗಡಿ ಮಹಿಳಾ ವೃಂದದ ಆಶ್ರಯದಲ್ಲಿ ಝೇಂಕಾರ ಬೇಸಿಗೆ ಶಿಬಿರ

Suddi Udaya

ಸಂತ ತೆರೇಸಾ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಇನ್ವೆಸ್ಟಿಚರ್ ಸಮಾರಂಭ

Suddi Udaya

ಮುಂಡಾಜೆ ಮಾಲತಿ ಪ್ರಭು ನಿಧನ

Suddi Udaya

ಜೆಸಿಐ ಕೊಕ್ಕಡ ಕಪಿಲಾ ಘಟಕದ ಸಾಮಾನ್ಯ ಸಭೆ

Suddi Udaya

ಅರಸಿನಮಕ್ಕಿ ಸರಕಾರಿ ಪ.ಪೂ. ಕಾಲೇಜಿಗೆ ಶೇ. 93.33 ಫಲಿತಾಂಶ

Suddi Udaya
error: Content is protected !!