26.1 C
ಪುತ್ತೂರು, ಬೆಳ್ತಂಗಡಿ
September 10, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ ರುಡ್ ಸೆಟ್ ನಲ್ಲಿ ‘ಮೇಕಪ್ ಮಾಸ್ಟರ್‌ಕ್ಲಾಸ್’ ಕಾರ್ಯಾಗಾರ

ಉಜಿರೆ: ರುಡ್‌ಸೆಟ್ ಸಂಸ್ಥೆ, ಉಜಿರೆಯಲ್ಲಿ ಆಯೋಜಿಸಲಾಗಿದ್ದ ಒಂದು ದಿನದ ವೃತ್ತಿಪರ ಮೇಕಪ್ ಮಾಸ್ಟರ್‌ಕ್ಲಾಸ್’ ಕಾರ್ಯಾಗಾರವು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತಕೋತ್ತರ ಪದವೀಧರ (ಸ್ವಾಯತ್ತ) ಕಾಲೇಜು, ಉಜಿರೆ ಇದರ ಡೀನ್ ಡಾ. ಸೌಮ್ಯ ಅವರು ಕಾರ್ಯಾಗಾರವನ್ನು ಅಧಿಕೃತವಾಗಿ ಉದ್ಘಾಟಿಸಿ ಮಾತನಾಡಿದರು. ಸಮಯ ಪಾಲನೆ, ಶಿಸ್ತು ಮತ್ತು ಹೊಸತನದ ಮನೋಭಾವ ಸದಾ ಇರಲಿ ಎಂದು ಶಿಬಿರಾರ್ಥಿಗಳಿಗೆ ಅವರು ಆಶಯ ನುಡಿಗಳನ್ನು ಹೇಳಿದರು.

ಅಂತರಾಷ್ಟ್ರೀಯ ಪ್ರಮಾಣೀಕೃತ ಮೇಕಪ್ ಆರ್ಟಿಸ್ಟ್, ಸೆಲೆಬ್ರಿಟಿ ಮೇಕಪ್ ಆರ್ಟಿಸ್ಟ್ ಹಾಗೂ ಮೇಕಪ್ ಎಜುಕೇಟರ್ ಆಗಿರುವ ಹಾಸನದ ಸೋಮು ಹಾಸನ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ತಮ್ಮ ದೀರ್ಘ ವೃತ್ತಿ ಅನುಭವದ ಮಾತುಗಳನ್ನು ಶಿಬಿರಾರ್ಥಿಗಳೊಂದಿಗೆ ಹಂಚಿಕೊಂಡರು.

ರುಡ್‌ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ. ವಿಜಯಕುಮಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತರಬೇತಿ ಪಡೆದ ನಂತರ ತಮ್ಮ ವ್ಯವಹಾರವನ್ನು ಮುಂದಕ್ಕೆ ಕೊಂಡೊಯ್ಯಲು ಬ್ಯಾಂಕ್ ಸಾಲದ ಸದುಪಯೋಗ ಪಡಿಸಿಕೊಳ್ಳಿ ಎಂದು ಅವರು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.

ಅತಿಥಿ ಉಪನ್ಯಾಸಕರಾದ ಮಾಧವಿ. ಎಂ. ರೈ ಹಾಗೂ ಆಶಾ ಸೋಮು (ಹಾಸನ) ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ಸೋಮು ಹಾಸನ್, ಅವರನ್ನು ಗೌರವಿಸಲಾಯಿತು.

ಕುಮಾರಿ ಜಲಜಾಕ್ಷಿ ಮತ್ತು ಶ್ರಾವಣಿ ತಂಡ ಪ್ರಾರ್ಥನಾ ಹಾಡಿದರು. ರುಡ್‌ಸೆಟ್ ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಅಬ್ರಹಾಂ ಜೇಮ್ಸ್ ಸ್ವಾಗತಿಸಿದರು. ಹಿರಿಯ ಉಪನ್ಯಾಸಕ ಕೆ. ಕರುಣಾಕರ ಜೈನ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಲ್ಲಿಸಿದರು.

ಸಂಸ್ಥೆಯ ಸಹೋದ್ಯೋಗಿಗಳಾದ ರಶ್ಮಿ, ಪ್ರವೀಣ್ ‌ಕುಮಾರ್, ಕಾಶ್ಮೀರ ಡಿ ಸೋಜಾ, ಸುರೇಶ, ಸಹಕರಿಸಿದ್ದರು.

Related posts

ಯುವವಾಹಿನಿ ವೇಣೂರು ಘಟಕದ ಸೇವಾ ಯೋಜನೆ ವತಿಯಿಂದ ಸಹಾಯಧನ ಹಸ್ತಾಂತರ

Suddi Udaya

ಲೋಕಸಭಾ ಮಹಾಚುನಾವಣೆ ಹಿನ್ನೆಲೆ: ಕಾಜೂರು ಮಖಾಂ ಶರೀಫ್ ಉರೂಸ್ ಮುಂದಕ್ಕೆ; ಮೇ. 3 – 12 ದಿನಾಂಕ ನಿಗದಿ

Suddi Udaya

ಕೆಸಿಎಫ್ ಶಾರ್ಜಾ ಝೋನ್ 2024-2026 ನವ ಸಾರಥ್ಯ ಅಧ್ಯಕ್ಷರಾಗಿ ರಫೀಕ್ ತೆಕ್ಕಾರು

Suddi Udaya

ಪ.ರಾ.ಶಾಸ್ತ್ರಿ ಅಭಿನಂದನೆ: ಆಹ್ವಾನ ಪತ್ರಿಕೆ ಅನಾವರಣ

Suddi Udaya

ನೆರಿಯ: ಮನೆಗೆ ಆಕಸ್ಮಿಕ ಬೆಂಕಿ ತಗುಲಿ ಮನೆ ಸಂಪೂರ್ಣ ಹಾನಿ

Suddi Udaya

ಮಂಗಳೂರಿನ ಎ.ಆರ್.ಎಂ ಕಿಯಾ ಶೋರೂಮ್‌ನಲ್ಲಿ ನೂತನ “ಕಿಯಾ ಸೆಲ್ಟೋಸ್” ಕಾರು ಅನಾವರಣ

Suddi Udaya
error: Content is protected !!