September 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉರುವಾಲು ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೋಷಕರ ಸಭೆ

ಉರುವಾಲು: ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2026-27 ನೇ ಶೈಕ್ಷಣಿಕ ವರ್ಷದ ಪೋಷಕರ ಸಭೆ ಜೂ.12ರಂದು ನಡೆಯಿತು.

ಈ ವೇಳೆ ರಾಧಾಕೃಷ್ಣ ಫೌಂಡೇಷನ್ ಬೆಂಗಳೂರು ಇಲ್ಲಿನ ಮುಖ್ಯಸ್ಥರಾದ ಶ್ರೀಮತಿ ಡಾ .ವಿಧ್ಯಾ ಭಟ್ ಹಾಗೂ ಡಾ.ವಿಶ್ವನಾಥ್ ಭಟ್ ಇವರ ಪ್ರಾಯೋಜಕತ್ವದಲ್ಲಿ ನೀಡಲ್ಪಟ್ಟ ಸನಾತನ ಸಂಸ್ಕೃತಿಯ ಪುಸ್ತಕಗಳನ್ನು ಉದ್ಘಾಟಿಸಲಾಯಿತು.

ಸೇವಾ ಸಮಿತಿಯ ದಿಗ್ಧರ್ಶಕರಾದ ಮಾಯಿಲ್ತೋಡಿ ಈಶ್ವರ ಭಟ್, ಕಾರ್ಯದರ್ಶಿಗಳಾದ ಶ್ಯಾಮ ಪ್ರಸಾದ್ ಹಾಗೂ ಸದಸ್ಯರಾದ ಸುಶೀಲ ಭಟ್ ಇವರುಗಳು ಪುಸ್ತಕಗಳ ಉದ್ಘಾಟನೆಯನ್ನು ಪೋಷಕರ ಸಮ್ಮುಖದಲ್ಲಿ ನೆರವೇರಿಸಿ, ಬಳಿಕ ಅವರು ಈ ಪುಸ್ತಕಗಳ ವಿಶೇಷತೆ ಬಗ್ಗೆ ಇದರ ಉಪಯೋಗದ ಬಗ್ಗೆ ಮಾಹಿತಿ ನೀಡಿದರು.


ಬಳಿಕ 4 ರಿಂದ 9 ನೇ ತರಗತಿ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಲಾಯಿತು. ಹೆತ್ತವರ ಸಭೆಯಲ್ಲಿ ಹೊಸ ಶೈಕ್ಷಣಿಕ ವರ್ಷದ ರಕ್ಷಕ ಶಿಕ್ಷಕ ಸಂಘವು ರಚನೆಗೊಂಡಿತು.
ಕಾರ್ಯಕ್ರಮವನ್ನು ಶಾಲಾ ಮುಖ್ಯಶಿಕ್ಷಕಿ ಶೋಭಿತ ಕೆ ಆರ್ ಸ್ವಾಗತಿಸಿ, ನಿರೂಪಿಸಿ, ಧನ್ಯವಾದವಿತ್ತರು. ಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು

Related posts

ಎಸ್.ಡಿ.ಪಿ.ಐ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಕ್ರೀಡಾಕೂಟ

Suddi Udaya

ತಾಲೂಕಿನ ಪುಟಾಣಿಗಳಿಗೆ ಕೆಜಿ ಲೆಕ್ಕದಲ್ಲಿ ಆಕರ್ಷಕವಾದ ಬಟ್ಟೆ ಖರೀದಿಗೆ ಸುವರ್ಣವಕಾಶ ಬೆಳ್ತಂಗಡಿಯಲ್ಲಿ ಪ್ರಾರಂಭಗೊಳ್ಳಲಿದೆ ಬೇಬಿ ಕ್ಲೌಡ್ ಕೆಜಿ ಮಾರ್ಟ್

Suddi Udaya

ರೆಖ್ಯ: ಅಶ್ವಿತ್ ಕುಮಾರ್ ನಾಪತ್ತೆ ಪ್ರಕರಣ: ಮೂರು ದಿನಗಳ ಬಳಿಕ ಶಿರಾಡಿ ಗ್ರಾಮದ ಕುಕ್ಕುಂಜ ಸಮೀಪ ಹೊಳೆ ಬದಿಯಲ್ಲಿ ಪತ್ತೆ ಹಚ್ಚಿದ “ಶೌರ್ಯ” ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡ

Suddi Udaya

ವಲಯ ಮಟ್ಟದ ಕಬಡ್ಡಿ ಪಂದ್ಯಾಟ: ಮನ್ ಶರ್ ಪ್ರಾಥಮಿಕ ಶಾಲಾ ತಂಡ ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ಬೆಳ್ತಂಗಡಿ : ನೆರಿಯದಲ್ಲಿ ಚಿರತೆ ದಾಳಿಯಿಂದ ಕಡವೆ ಸಾವು: ಬೆಳ್ತಂಗಡಿ ಅರಣ್ಯ ಇಲಾಖೆಯಿಂದ ದಫನ

Suddi Udaya

ಕನ್ಯಾಡಿ ಸೇವಾಭಾರತಿ ನೇತೃತ್ವದಲ್ಲಿ 33ನೇ ಉಚಿತ ಟೈಲರಿಂಗ್ ತರಬೇತಿ ಶಿಬಿರ ಸಂಪನ್ನ

Suddi Udaya
error: Content is protected !!