26.5 C
ಪುತ್ತೂರು, ಬೆಳ್ತಂಗಡಿ
September 20, 2026
ವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಗುರುವಾಯನಕರೆ ಎಕ್ಸೆಲ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓರಿಯಂಟೇಶನ್ ಕಾರ್ಯಕ್ರಮಶ್ರದ್ಧೆಯಿಂದ ಕಲಿತರೆ ಅದ್ಭುತ ಅವಕಾಶ: ಖ್ಯಾತ ನಿರ್ದೇಶಕ ಸ್ಮಿತೇಶ್ ಬಾರ್ಯ ವಿದ್ಯಾರ್ಥಿಗಳ ಕನಸು ನನಸು ಮಾಡುವುದೇ ನಮ್ಮ ಗುರಿ: ಸುಮಂತ್ ಕುಮಾರ್ ಜೈನ್

ಗುರುವಾಯನಕೆರೆ: ಹತ್ತನೇ ತರಗತಿಯ ಬಳಿಕ ಒಳ್ಳೆಯ ಕಾಲೇಜನ್ನು ಆಯ್ಕೆ ಮಾಡಿಕೊಳ್ಳುವುದರಲ್ಲಿ ಬುದ್ಧಿವಂತಿಕೆ ಇದೆ. ಎಕ್ಸೆಲ್ ನ್ನು ಆಯ್ಕೆ ಮಾಡಿಕೊಂಡ ನೀವು ಬುದ್ಧಿವಂತರು. ಯಾಕೆಂದರೆ ಕಡಿಮೆ ಅವಧಿಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಏಮ್ಸ್, ಜಿಪ್ಮಾರ್,ಐಐಟಿ , ಎನ್ ಐ ಐ ಟಿ ಸೇರಿ ಭಾರತದ ಪ್ರತಿಷ್ಠಿತ ಸಂಸ್ಥೆಗಳಿಗೆ ಹಲವು ವಿದ್ಯಾರ್ಥಿಗಳನ್ನು ಕಳುಹಿಸಿ ಕೊಟ್ಟ ಹಿರಿಮೆ ಎಕ್ಸೆಲ್ ನದು. ಇಂಥ ಸಂಸ್ಥೆಯಲ್ಲಿ ಗುರುಗಳು ಹೇಳಿಕೊಟ್ಟದ್ದನ್ನು ಶ್ರದ್ಧೆಯಿಂದ ಕಲಿತರೆ ಸಾಕು. ಉಜ್ವಲ ಭವಿಷ್ಯ ನಿಮ್ಮದಾಗುತ್ತದೆ ಎಂದು ಖ್ಯಾತ ಚಿತ್ರ ನಿರ್ದೇಶಕ, ಮನೋ ವಿಶ್ಲೇಷಕ ಸ್ಮಿತೇಶ್ ಬಾರ್ಯ ಅವರು ಹೇಳಿದರು.

ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾಸಾಗರ ಕ್ಯಾಂಪಸ್ ನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಓರಿಯಂಟೇಶನ್- ಸ್ವಾಗತಂನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು.

ಎಕ್ಸೆಲ್ ಕಾಲೇಜಿನ ಹಿರಿಯ ವಿದ್ಯಾರ್ಥಿ ಪ್ರಸ್ತುತ ಐಐಟಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಚಿಂತ್ಯದಾಸ್ ಅಳದಂಗಡಿ ಅವರು ಮಾತನಾಡಿ, ಪಿಯುಸಿಯ ಎರಡು ವರ್ಷ ಕಠಿಣ ಶ್ರಮದ ಮೂಲಕ ನಮ್ಮ ಗುರಿ ಸಾಧನೆಗೆ ತಳಪಾಯ ಹಾಕಿ ಕೊಳ್ಳ ಬೇಕೆಂದು ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಮಾತನಾಡಿ ವಿದ್ಯಾರ್ಥಿಗಳ ಗುರಿ ಈಡೇರಿಸಲು ನಾವು ಸಂಪೂರ್ಣ ಬದ್ಧರಾಗಿರುತ್ತೇವೆ. ನಿಮ್ಮ ಕನಸು ನನಸು ಮಾಡುವುದೇ ನಮ್ಮ ಗುರಿ ಎಂದು ಹೇಳಿದರು.

ನೀಟ್ ಪರೀಕ್ಷೆಯ ಬಗ್ಗೆ ಭೌತ ವಿಜ್ಞಾನ ವಿಭಾಗಫ ಮುಖ್ಯಸ್ಥ ಡಾ ಸತ್ಯನಾರಾಯಣ ಭಟ್, ಜೆ ಇ ಇ, ಸಿ ಇ ಟಿ ಪರೀಕ್ಷೆಗಳ ಬಗ್ಗೆ ಭೌತ ವಿಜ್ಞಾನ ವಿಭಾಗದ ಶ್ರೀನಿಧಿ ರಾಜ್ ಶೆಟ್ಟಿ ಮಾಹಿತಿ ನೀಡಿದರು. ಪಿಯುಸಿ ಹಾಗೂ ಸಿ ಇ ಟಿ ಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಹತ್ತನೆಯ ತರಗತಿಯಲ್ಲಿ ಪೂರ್ಣಾಂಕ ಪಡೆದು, ಪ್ರಥಮ ಪಿಯುಸಿಗೆ ಎಕ್ಸೆಲ್ ನಲ್ಲಿ ದಾಖಲಾತಿ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಎಕ್ಸೆಲ್ ಕಾಲೇಜು ವಿದ್ಯಾಸಾಗರ ಕ್ಯಾಂಪಸ್ ನ ಪ್ರಾಂಶುಪಾಲರಾದ ಡಾ. ನವೀನ್ ಕುಮಾರ್ ಎಂ ಸ್ವಾಗತಿಸಿದರು. ಅರಮಲೆಬೆಟ್ಟ ಕ್ಯಾಂಪಸ್ ನ ಪ್ರಾಚಾರ್ಯ ಡಾ. ಪ್ರಜ್ವಲ್ ಕಜೆ ವಂದಿಸಿದರು. ಉಪನ್ಯಾಸಕ ಮೊಹಮ್ಮದ್ ಮುನೀರ್ ನಿರೂಪಿಸಿದರು.

Related posts

ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಸಂವಾದ ಕಾರ್ಯಕ್ರಮ

Suddi Udaya

ಸುಮಾರು 700 ವರ್ಷಗಳ ಇತಿಹಾಸ ಹೊಂದಿದ್ದ ತೆಕ್ಕಾರಿನ ಶ್ರೀಗೋಪಾಲಕೃಷ್ಣ ದೇವರಿಗೆ ನೂರೈವತ್ತು ವರ್ಷಗಳ ನಂತರ ಬಾಲಾಲಯದಲ್ಲಿ ಪ್ರಥಮ ಪೂಜೆ

Suddi Udaya

ಗೇರುಕಟ್ಟೆ: ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ವಸಂತ ಮಜಲು, ಉಪಾಧ್ಯಕ್ಷರಾಗಿ ರಾಜ್ ಪ್ರಕಾಶ್ ಶೆಟ್ಟಿ

Suddi Udaya

ಮಲವಂತಿಗೆ ಗ್ರಾಮ ಪಂಚಾಯತ್ ಗ್ರಾಮ ಸಭೆ

Suddi Udaya

ಕನಾ೯ಟಕ ದಲಿತ ಚಳುವಳಿಗೆ 50ರ ಸಂಭ್ರಮ: ಬೆಳ್ತಂಗಡಿಯಲ್ಲಿ ವಿವಿಧ ದಲಿತ ಸಂಘಟನೆಗಳ ಸಹಭಾಗಿತ್ವದಲ್ಲಿ ‘ಕನಾ೯ಟಕ ದಲಿತ ಚಳುವಳಿ 50ರ ಸಂಭ್ರಮ ಸಮಾವೇಶಕ್ಕೆ ಚಾಲನೆ; ದಲಿತ ಸಾಂಸ್ಕೃತಿಕ ವೈವಿಧ್ಯ ಕಾಯ೯ಕ್ರಮ

Suddi Udaya

ಕುತ್ಲೂರು: ಈಶ್ವರಪ್ಪ ಆಚಾರ್ಯ ನಿಧನ

Suddi Udaya
error: Content is protected !!