30.7 C
ಪುತ್ತೂರು, ಬೆಳ್ತಂಗಡಿ
September 27, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮಂಗಳೂರಿನಲ್ಲಿ ಆನೆದಂತ ಮಾರಟಕ್ಕೆ ಯತ್ನ; ಪುದುವೆಟ್ಟು ಗ್ರಾಮದ ಶಶಾಂಕ ವಶಕ್ಕೆ

ಮಂಗಳೂರು : ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಮಂಗಳೂರು ವಿಭಾಗದ ಪೊಲೀಸರಿಗೆ ದೊರೆತ ಖಚಿತ ಮಾಹಿತಿಯಂತೆ ಮಂಗಳೂರು ನಗರದ ಪದವು ಗ್ರಾಮದ ಜೋಡುಕಟ್ಟೆ-ಮರೋಳಿ ಹತ್ತಿರ ಅಕ್ರಮವಾಗಿ ಆನೆದಂತಗಳನ್ನು ಮಾರಾಟಕ್ಕೆ ಯತ್ನಿಸುತ್ತಿದ್ದಾರೆ ಎಂಬುದಾಗಿ ದೊರೆತ ಮಾಹಿತಿಯಂತೆ ಜೂ.11 ರಂದು ಸಂಜೆ 3.30 ಗಂಟೆಗೆ ಮಂಗಳೂರು ಮರೋಳಿ ಬಳಿಯಲ್ಲಿ ಹೋಗಿ ದೃಡಪಡಿಸಿಕೊಂಡು ಆರೋಪಿಗಳು 2 ಆನೆದಂತಗಳನ್ನು ಮಾರಾಟಕ್ಕೆ ಯತ್ನಿಸುತಿದ್ದವರನ್ನು ಖಚಿತಪಡಿಸಿಕೊಂಡು ತಕ್ಷಣ ದಾಳಿ ಮಾಡಿ 3 ಜನ ಆರೋಪಿಗಳನ್ನು, ಎರಡು ಕಾರು ಮತ್ತು ಆನೆ ದಂತಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಆರೋಪಿಗಳನ್ನು ವಶಕ್ಕೆ ಪಡೆಯಲಾಯಿತು.

ಆರೋಪಿಗಳಿಂದ 42.700 ಕಿ.ಗ್ರಾಂ ತೂಕದ 2 ಆನೆದಂತಗಳನ್ನು ಮುಂದಿನ ಕ್ರಮದ ಬಗ್ಗೆ ವಶಪಡಿಸಿಕೊಳ್ಳಲಾಗಿದೆ ಆರೋಪಿಗಳಾದ ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದ ನಿವಾಸಿ ಶಶಾಂಕ , ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ನಿವಾಸಿ ಖಾದರ್ ಯಾನೆ ಅಬ್ದುಲ್ ಖಾದರ್, ಮಂಗಳೂರು ಜಿಲ್ಲೆಯ ಅತ್ತಾವರ ,ಜೆಪ್ಪು ನಿವಾಸಿ ಪ್ರಭಾಚಂದ್ರ ರವರನ್ನು ವಶಕ್ಕೆ ಪಡೆದು ಪ್ರಕರಣ ತನಿಖೆಯಲ್ಲಿರುತ್ತದೆ.

ಮಾನ್ಯ ಪೊಲೀಸ್ ಉಪಮಹಾನಿರೀಕ್ಷಕರು, ಸಿ.ಐ.ಡಿ ಅರಣ್ಯ ಘಟಕ, ಬೆಂಗಳೂರು, ಮತ್ತು ಮಡಿಕೇರಿ ಸಿಐಡಿ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕರಾದ ಶ್ರೀ ಪವನ್‌ನೆಟ್ಟೂರು ಐಪಿಎಸ್ ರವರ ಮಾರ್ಗದರ್ಶನದಲ್ಲಿ ಮಂಗಳೂರು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸು ಉಪನಿರೀಕ್ಷಕರಾದ ಶ್ರೀ ದಿಲೀಪ್ ಜಿ ಆರ್ ಹಾಗೂ ಸಿಬ್ಬಂದಿಗಳಾದ ಜಯರಾಮ ಕೆಟಿ, ಬಾಲಕೃಷ್ಣ ಕೆಎಂ, ತಾರನಾಥ ಎಸ್ ಮತ್ತು ಅಬ್ದುಲ್‌ ರವೂಫ್‌ರವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುತ್ತಾರೆ.

Related posts

ಕಳಿಯ ನ್ಯಾಯತರ್ಪು ಗ್ರಾಮದಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ಜಾತ್ರೋತ್ಸವ ಸಮಾಲೋಚನಾ ಸಭೆ

Suddi Udaya

ಉಜಿರೆ: ಚಲಿಸುತ್ತಿದ್ದಾಗಲೇ ಕಳಚಿ ಬಿದ್ದ ಕೆ.ಎಸ್ ಆರ್ ಟಿಸಿ ಬಸ್ ಟಯರ್

Suddi Udaya

ಗರ್ಡಾಡಿಯಲ್ಲಿ ಮದಿರಾ ಗ್ರ್ಯಾಂಡ್ ಬಾರ್ ಆಂಡ್ ರೆಸ್ಟೋರೆಂಟ್ ಉದ್ಘಾಟನೆ

Suddi Udaya

ಎಕ್ಸಲೆಂಟ್ ಸಂಸ್ಕೃತಿ ಸಂಭ್ರಮ-2026: ಪ್ರತಿಭೆಗೆ ವೇದಿಕೆ, ಸಂಸ್ಕಾರಕ್ಕೆ ಬೆಳಕು

Suddi Udaya

ಬೆಳ್ತಂಗಡಿ ಡಿ.ಕೆ.ಆರ್.ಡಿ.ಎಸ್- ಮಾಸಿಕ ಬೆಂಬಲ ಸಭೆ ಹಾಗೂ ಮಾಹಿತಿ ಕಾರ್ಯಕ್ರಮ

Suddi Udaya

ಧರ್ಮಸ್ಥಳ ಉಚಿತ ಟೈಲರಿಂಗ್ ತರಬೇತಿ ಶಿಬಿರದ ಸಮಾರೋಪ ಸಮಾರಂಭ

Suddi Udaya
error: Content is protected !!