September 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಬದನಾಜೆ ಶಾಲೆಯಲ್ಲಿ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್‌ ಉಜಿರೆ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ “ಯಶೋ-ವಿಜಯ” ಬದುಕು-ನೆನಪು-ಸ್ಮರಣೆ: ಶಶಿಧರ ಶೆಟ್ಟಿ ಬರೋಡ ಇವರ ಮಾತೃಶ್ರೀ ದಿ. ಕಾಶಿ ಶೆಟ್ಟಿಯವರ ಸ್ಮರಣಾರ್ಥ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಬ್ಯಾಗ್ ಮತ್ತು ಕೊಡೆ ವಿತರಣೆ

ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಮತ್ತು ಮಾತೃಶ್ರೀ ಹೇಮಾವತಿ ವೀ ಹೆಗ್ಗಡೆಯವರ ಶುಭಾರ್ಶಿವಾದಗಳೊಂದಿಗೆ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್‌ ಉಜಿರೆ, ರೋಟರಿ ಕ್ಲಬ್ ಬೆಳ್ತಂಗಡಿ, ಪಟ್ಲ ಫೌಂಡೇಶನ್ ಬೆಳ್ತಂಗಡಿ ಘಟಕ, ಬೆಳ್ತಂಗಡಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಬಿರ್ವೆರ್ ಕುಡ್ಲ ಮಂಗಳೂರು ಇದರ ನೇತೃತ್ವದಲ್ಲಿ ಯಶೋ ವಿಜಯ ಬದುಕು-ನೆನಪು-ಸ್ಮರಣೆ ಹಾಗೂ ಉದ್ಯಮಿ ಶಶಿಧರ ಶೆಟ್ಟಿ ಬರೋಡ ಇವರ ಮಾತೃಶ್ರೀ ದಿ.ಕಾಶಿ ಶೆಟ್ಟಿಯವರ ಸ್ಮರಣಾರ್ಥ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಬ್ಯಾಗ್ ಮತ್ತು ಕೊಡೆ ವಿತರಣಾ ಕಾರ್ಯಕ್ರಮವು ಜೂ.13 ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬದನಾಜೆಯಲ್ಲಿ ಜರುಗಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಅವರು ನೆರವೇರಿಸಿ ಮಾತನಾಡಿ ಬದುಕು ಕಟ್ಟೋಣ ಬನ್ನಿ ತಂಡದಿಂದ ಸರಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ನೀಡುತ್ತಿರುವುದು ಶ್ಲಾಘನೆಯ ವಿಚಾರ.ಇದರ ಸಂಚಾಲಕ ಮೋಹನ್ ಕುಮಾರ್ ಶಾಲೆಯ ಏಳಿಗೆ ಮತ್ತು ವಿದ್ಯಾರ್ಥಿಗಳ ಬೆಳವಣಿಗೆಗೆ ಶಕ್ತಿ ನೀಡಿದ್ದಾರೆ. ಮೂವರು ಮಹನೀಯರಾದ ಮಹಾನ್ ವ್ಯಕ್ತಿ ವಿಜಯ ರಾಘವ ಪಡ್ವೆಟ್ನಾಯ, ಶಿಕ್ಷಣ ತಜ್ಞ ಡಾ.ಬಿ ಯಶೋವರ್ಮ,ಸಮಾಜಕ್ಕೆ ಆಸ್ತಿಯಾಗಿ ಮಕ್ಕಳನ್ನು ಸಮರ್ಪಿಸಿದ ಕಾಶಿಶೆಟ್ಟಿ ಅವರು ಸಮಾಜಕ್ಕೆ ದಾರಿದೀಪವಾಗಿದ್ದಾರೆ ಎಂದರು.

ಎಸ್.ಡಿ.ಎಂ ಐ.ಟಿ ಮತ್ತು ವಸತಿ ನಿಲಯಗಳ ಆಡಳಿತ ವಿಭಾಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರಣ್ ವರ್ಮ ಮಾತನಾಡಿ ಪ್ರತಿಯೊಬ್ಬರು ಸೇವೆ ಮಾಡುವುದು ಅವರು ದುಡಿದು ಮಾಡುವಂತದ್ದು, ಹಾಗಾಗಿ ಅವರನ್ನು ಗೌರವಿಸಬೇಕು ಎಂದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಉದ್ಯಮಿ ರಾಜೇಶ್ ಶೆಟ್ಟಿ ನವಶಕ್ತಿ,ಬೆಳ್ತಂಗಡಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ತುಕರಾಮ್ ಬಿ,ಫ್ರೆಂಡ್ಸ್ ಬಳ್ಳಾಲ್‌ ಬಾಗ್ ಬಿರುವೆರ್ ಕುಡ್ಲ ಇದರ ತಾಲೂಕು ಅಧ್ಯಕ್ಷ ರಾಜೇಶ್ ಕೋಟ್ಯಾನ್, ಉಜಿರೆ ಸುರಕ್ಷಾ ಮೆಡಿಕಲ್ ಮುಖ್ಯಸ್ಥರಾದ ರೊ। ಶ್ರೀಧರ್ ಕೆ.ವಿ,ಅಧ್ಯಕ್ಷರು ಪಟ್ಲ ಫೌಂಡೇಶನ್ ಬೆಳ್ತಂಗಡಿ ಘಟಕದ ಅಧ್ಯಕ್ಷ ಸುರೇಶ್ ಶೆಟ್ಟಿ, ಸಮೂಹ ಶಿಕ್ಷಣ ಸಂಸ್ಥೆಗಳ‌ ಅಧಿಕಾರಿ ಪ್ರತಿಮಾ ವೆಂಕಟೇಶ್,ಪ್ರೌಢಶಾಲಾ ಮುಖ್ಯ ಶಿಕ್ಷಕಿ ಜಮುನಾ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಅನಿಲ್ ಡಿಸೋಜಾ, ಶಾಲಾ ಮುಖ್ಯೋಪಾಧ್ಯಾಯರಾದ ಗೋಪಾಲ್ ಉಪಸ್ಥಿತರಿದ್ದರು.

ಪ್ರಗತಿ ಯುವಕ ಮಂಡಲದ ವತಿಯಿಂದ ಪ್ರಗತಿ ವಿದ್ಯಾ ಯೋಜನೆಗೆ ಚಾಲನೆ ನೀಡಲಾಯಿತು. ಈ ಯೋಜನೆಯ ಬಗ್ಗೆ ಸುರೇಶ್ ಮಾಚಾರು ತಿಳಿಸಿದರು.

ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಉಜಿರೆ ಇದರ ಸಂಚಾಲಕ,ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆ ಮಾಲಕ ಕೆ. ಮೋಹನ್ ಕುಮಾರ್ ಅವರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು.ತಿಮ್ಮಯ್ಯ ನಾಯ್ಕ ಅವರು ನಿರೂಪಿಸಿದರು‌.ಶಾಲಾ ಪ್ರಾಧ್ಯಾಪಕ ನಿರಂಜನ್ ವಂದಿಸಿದರು.

ನಿನ್ನೆ ನಿಧನರಾದ ರಾಷ್ಟ್ರೀಯ ಕಬಡ್ಡಿ ತೀರ್ಪುಗಾರ ಅಖಿಲ್ ಕುಮಾರ್ ಅವರಿಗೆ ಮೌನ ಪ್ರಾರ್ಥನೆ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.

Related posts

ಬೆಳ್ತಂಗಡಿ : ಎಸ್.ಐ.ಟಿ ಕಚೇರಿಗೆ ಆಗಮಿಸಿ ದೂರು ನೀಡಿದ ಹೋರಾಟಗಾರರ ತಂಡ

Suddi Udaya

ಆಲ್ ಇಂಡಿಯಾ ಕರಾಟೆ ಚಾಂಪಿಯನ್ ಶಿಪ್ 2025: ಸಾನ್ವಿ ಎಸ್ ಕೋಟ್ಯಾನ್ ಬಳಂಜರವರಿಗೆ ಪ್ರಶಸ್ತಿ

Suddi Udaya

ಅಶ್ರಫ್ ಆಲಿಕುಂಞಿ (ಅಚ್ಚು) ಮುಂಡಾಜೆ ಅವರಿಗೆ ಲಯನ್ಸ್ ಜಿಲ್ಲಾ “ಗೋಲ್ಡನ್ ಅಸಿಸ್ಟೆಂಟ್ ಡಿಸ್ಟ್ರಿಕ್ಟ್ ಕಾರ್ಡಿನೇಟರ್” ಪುರಸ್ಕಾರ

Suddi Udaya

ಪ್ರತಿಷ್ಠಿತ ಮುಗ್ಗಗುತ್ತಿನಲ್ಲಿ ನಾಗರ ಪಂಚಮಿ ಪ್ರಯುಕ್ತ ವಿಶೇಷ ಪೂಜೆ: ಮೆಸ್ಕಾಂ ಅಧ್ಯಕ್ಷ ಕೆ. ಹರೀಶ್ ಕುಮಾರ್ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭಾಗಿ

Suddi Udaya

ಮಾ.30-ಎ.2: ಪಿಲ್ಯ ಬರಯ-ಸೂಳಬೆಟ್ಟು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ

Suddi Udaya

ಶುಚಿ-ರುಚಿಯಾದ ಊಟೋಪಚಾರಗಳಿಗೆ ಹೆಸರುವಾಸಿಯಾದ ಶ್ರೀದೇವಿ ಹೋಟೆಲ್ ಬೆಳ್ತಂಗಡಿಯಲ್ಲಿ ಶುಭಾರಂಭ

Suddi Udaya
error: Content is protected !!