32.1 C
ಪುತ್ತೂರು, ಬೆಳ್ತಂಗಡಿ
September 15, 2026
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಕೆಪಿಎಸ್ ಪುಂಜಾಲಕಟ್ಟೆ (ಪ್ರೌಢಶಾಲಾ ವಿಭಾಗ) ಶಾಲಾ ಮಂತ್ರಿಮಂಡಲದ ಚುನಾವಣೆ

ಪುಂಜಾಲಕಟ್ಟೆ: ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆಯ ಪ್ರೌಢಶಾಲಾ ವಿಭಾಗದಲ್ಲಿ ಶಾಲಾ ವಿದ್ಯಾರ್ಥಿ ಸರಕಾರಕ್ಕೆ ತಂತ್ರಜ್ಞಾನವನ್ನು ಬಳಸಿ ಚುನಾವಣೆಯನ್ನು ನಡೆಸಲಾಯಿತು.

ಚುನಾವಣೆಯಲ್ಲಿ ಸರಳತೆಯೊಂದಿಗೆ ಚುನಾವಣಾ ಪದ್ಧತಿಯಂತೆ ನಾಮಪತ್ರ ಸಲ್ಲಿಕೆ, ನಾಮಪತ್ರ ಪರಿಶೀಲನೆ, ನಾಮಪತ್ರ ಹಿಂದೆ ಪಡೆಯಲು ಅವಕಾಶ, ಅಂತಿಮ ಕಣದಲ್ಲಿರುವವರ ಸ್ಪರ್ದಾಳುಗಳ ಪಟ್ಟಿ, ಈ ರೀತಿ ಎಲ್ಲಾ ಹಂತಗಳನ್ನು ಕ್ರಮವತ್ತಾಗಿ ನಡೆಸಲಾಯಿತು.

ತಂತ್ರಜ್ಞಾನವನ್ನು ಬಳಸಿ ಪ್ರಜಾಪ್ರಭುತ್ವದ ಮಾದರಿಯಲ್ಲಿ ಚುನಾವಣೆಯನ್ನು ನಡೆಸಲಾಯಿತು. ಚುನಾವಣೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಉಪ ಪ್ರಾಂಶುಪಾಲಗಣೇಶ್ ಬಿ ಯವರು ಪ್ರಮಾಣವಚನವನ್ನು ಶಾಲಾ ವಿದ್ಯಾರ್ಥಿ ನಾಯಕನಿಗೆ ಬೋಧಿಸಿದ ಬಳಿಕ ಉಳಿದ ಮಂತ್ರಿಗಳಿಗೆ ಬೋಧಿಸಿದರು. ವಿದ್ಯಾರ್ಥಿ ಸರಕಾರ ಮಾಡಬೇಕಾದ ಕರ್ತವ್ಯಗಳ ಬಗ್ಗೆ ವಿವರವಾಗಿ ವಿಚಾರಗಳನ್ನು ಹೇಳಿದರು.

ಚುನಾವಣಾ ವ್ಯವಸ್ಥೆಯಲ್ಲಿ ಮುಖ್ಯ ಚುನಾವಣಾ ಅಧಿಕಾರಿಯಾಗಿ ಸಂಸ್ಥೆಯ ಮುಖ್ಯಸ್ಥ ಗಣೇಶ್ ಬಿ, ಚುನಾವಣಾಧಿಕಾರಿಯಾಗಿ ಭವಾನಿ ಕೆ, ಸಹಾಯಕ ಚುನಾವಣೆ ಅಧಿಕಾರಿಯಾಗಿ ಧರಣೇಂದ್ರ ಕೆ ಹಾಗೂ ಶಾಲಾ ಶಿಕ್ಷಕರ ಮತ್ತು ಸರ್ವ ಸಿಬ್ಬಂದಿಗಳು ಸಹಕಾರ ನೀಡಿದರು.

ಶಾಲಾ ನಾಯಕನಾಗಿ ಕಿರಣ್ ಕುಮಾರ್, ,ಶಾಲಾ ಉಪನಾಯಕನಾಗಿ ಮಹಮ್ಮದ್ ಅಯಾನ್, ಕ್ರೀಡಾ ಮಂತ್ರಿಯಾಗಿ ದ್ರುವಿತ್, ಉಪ ಕ್ರೀಡಾ ಮಂತ್ರಿಯಾಗಿ ಚರಣ್,ವಾರ್ತಾ ಮಂತ್ರಿಯಾಗಿ ದೀಪಾ ಜಗದೀಶ ಹಡಪದ, ಉಪ ವಾರ್ತಾ ಮಂತ್ರಿಯಾಗಿ ನವ್ಯ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಮಂತ್ರಿಯಾಗಿ ಶಿವುಕುಮಾರ್ ರಾಜಶೇಖರ್, ಉಪ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಮಂತ್ರಿಯಾಗಿ ಶಮಿತಾ, ಆರೋಗ್ಯ ಮತ್ತು ಆಹಾರ ಮಂತ್ರಿಯಾಗಿ ಸ್ವರ್ತಿಕ್, ಉಪ ಆಹಾರ ಮಂತ್ರಿಯಾಗಿ ಶ್ರಾವಣ ನಾಯಕ್, ಸ್ವಚ್ಛತಾ ಮಂತ್ರಿಯಾಗಿ ಅನುಶ್ರೀ, ಉಪ ಸ್ವಚ್ಛತಾ ಮಂತ್ರಿಯಾಗಿ ಲಾವಣ್ಯ, ಪ್ರತಿಪಕ್ಷದ ನಾಯಕರಾಗಿ ಶಶಾಂಕ್ ಭಟ್ ಮತ್ತು ಸಾನ್ವಿ ಎಸ್ ಪೂಜಾರಿ ಆಯ್ಕೆಯಾದರು.

Related posts

ಬೆಳ್ತಂಗಡಿ ವಾಣಿ ಆಂ.ಮಾ. ಶಾಲೆಯಲ್ಲಿ ಮಕ್ಕಳ ಆಟದ ಮನೆ ಉದ್ಘಾಟನೆ

Suddi Udaya

ಸಿಯೋನ್ ಆಶ್ರಮದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

Suddi Udaya

ಸೇನೆಗೆ ಆಯ್ಕೆಯಾದ ರಂಜಿತ್ ಪೂಜಾರಿಯವರಿಗೆ ಬಳಂಜ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿಯಿಂದ ಸನ್ಮಾನ

Suddi Udaya

ಸುದ್ದಿ ಉದಯ ವರದಿ ಫಲಶ್ರುತಿ: ಗುರುವಾಯನಕೆರೆ ಮೋರಿ ಸಂಪೂರ್ಣ ಮುಚ್ಚಿದ ಪರಿಣಾಮ ಇದೀಗ ನಗರ ಪಂಚಾಯತ್ ವತಿಯಿಂದ ಮೋರಿ ಅಳವಡಿಕೆ

Suddi Udaya

ಅಭಿವೃದ್ದಿ ಹೊಂದುತ್ತಿರುವ ಉಜಿರೆ ಹಳೆಪೇಟೆ ಸರಕಾರಿ ಶಾಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಮಾತೃಶ್ರೀ ಹೇಮಾವತಿ ಹೆಗ್ಗಡೆಯವರು ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್ ನೇತೃತ್ವದಲ್ಲಿ ಶ್ರಮದಾನ

Suddi Udaya

ಪುದುವೆಟ್ಟು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೇಸಿಗೆ ಶಿಬಿರದ ಉದ್ಘಾಟನೆ

Suddi Udaya
error: Content is protected !!