30.8 C
ಪುತ್ತೂರು, ಬೆಳ್ತಂಗಡಿ
September 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಶಿಕ್ಷಣ ಸಂಸ್ಥೆ

ಉಜಿರೆ ಎಸ್.ಡಿ.ಎಂ. ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ “ದೀಕ್ಷಾವಿಧಿ” ತರಗತಿ ಪ್ರಾರಂಭೋತ್ಸವ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಕರ ತರಬೇತಿ (ಡಿ.ಇಎಲ್.ಇಡಿ) ಸಂಸ್ಥೆಯಲ್ಲಿ ಜೂ.15ರಂದು ಪ್ರಥಮ ವರ್ಷದ ಡಿ.ಎಡ್. ವಿದ್ಯಾರ್ಥಿಗಳ ತರಗತಿ ಪ್ರಾರಂಭೋತ್ಸವ “ದೀಕ್ಷಾವಿಧಿ” ಕಾರ್ಯಕ್ರಮ ನಡೆಯಿತು.

ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಸೋಮಶೇಖರ ಶೆಟ್ಟಿ ಬಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ“ ಶಿಕ್ಷಕ ವೃತ್ತಿಯು ಪವಿತ್ರ ವೃತ್ತಿಗಳಲ್ಲಿ ಒಂದಾಗಿದೆ. ಶಿಕ್ಷಕರು ಕೇವಲ ಪಾಠ ಮಾಡುವುದಲ್ಲದೇ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಬೆಳಕು ಚೆಲ್ಲುವವರಾಗಿದ್ದಾರೆ ಮತ್ತು ವೃತ್ತಿಯ ಗೌರವವನ್ನು ಉಳಿಸಿಕೊಳ್ಳಲು ಶಿಕ್ಷಕರು ಪ್ರಾಮಾಣಿಕತೆ, ಸಮಯಪಾಲನೆ, ಶಿಸ್ತು ಮತ್ತು ಕರ್ತವ್ಯವನ್ನು ಕಾಪಾಡಿಕೊಳ್ಳಬೇಕು. ಶಿಕ್ಷಕರು ತಮ್ಮ ಕರ್ತವ್ಯದಲ್ಲಿ ನೈತಿಕ ಮೌಲ್ಯಗಳನ್ನು ಪಾಲಿಸಬೇಕು. ಶಿಕ್ಷಕರ ನುಡಿ, ವರ್ತನೆ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು. ನಿರಂತರ ಅಧ್ಯಯನ, ನೂತನ ಜ್ಞಾನಾರ್ಜನೆ ಮತ್ತು ವೃತ್ತಿಪರ ಕೌಶಲ್ಯಗಳ ಅಭಿವೃದ್ಧಿಯ ಮೂಲಕ ಶಿಕ್ಷಕರು ತಮ್ಮ ವೃತ್ತಿಯ ಗೌರವವನ್ನು ಕಾಪಾಡಿ ಪಾವಿತ್ರ‍್ಯತೆ ಉಳಿಸಿಕೊಳ್ಳಿ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಸಂತೋಷ್ ಆಲ್ಬರ್ಟ್ ಸಲ್ಡಾನ ವಹಿಸಿ ಮಾತನಾಡಿ ವಿದ್ಯಾರ್ಥಿಗಳು ತರಬೇತಿ ಅವಧಿಯಲ್ಲಿ ವಿಷಯ ಜ್ಞಾನದ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ನಮ್ಮ ಸಂಸ್ಥೆಯು ನಿಮಗೆ ಉತ್ತಮ ತರಬೇತಿ ಹಾಗೂ ಮಾರ್ಗದರ್ಶನವನ್ನು ನೀಡುತ್ತದೆ ಎಂಬ ವಿಶ್ವಾಸವಿದೆ. “ ನೀವು ಆದರ್ಶ ಶಿಕ್ಷಕರಾಗಿ ದೇಶವನ್ನು ಕಟ್ಟುವ ಮತ್ತು ಸಮಾಜಸೇವೆಯನ್ನು ಮಾಡುವ ಅವಕಾಶ ನಿಮ್ಮದಾಗಲಿ ನಿಮ್ಮ ಕನಸುಗಳು ನನಸಾಗಲಿ” ಎಂದು ಶುಭ ಹಾರೈಸಿದರು.

ಕಾಲೇಜಿನ ಉಪನ್ಯಾಸಕ ಮಂಜು ಆರ್ ಮಾತನಾಡಿ ಡಿ.ಎಡ್. ಬೆಳೆದು ಬಂದ ಹಾದಿ, ಕೋರ್ಸ್‌ ನ ಮಹತ್ವ ಅದರ ಸದುಪಯೋಗದ ಬಗ್ಗೆ ತಿಳಿಸಿ ಶಿಕ್ಷಣದ ವ್ಯವಸ್ಥೆಯಲ್ಲಿ ನಾವೆಲ್ಲರೂ ಕಾಲಕ್ಕೆ ತಕ್ಕಂತೆ ಬದಲಾಗಬೇಕು ಇಲ್ಲವಾದಲ್ಲಿ ಕಾಲವೇ ನಮ್ಮನ್ನು ಬದಲಾಯಿಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗ, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಹುಲಿಗೆವ್ವ ಮತ್ತು ತಂಡದವರು ಪ್ರಾರ್ಥಿಸಿ, ಅನ್ವಿತಾ ಸ್ವಾಗತಿಸಿ, ಯಜ್ಞಶ್ರೀ ಅತಿಥಿ ಪರಿಚಯಿಸಿ, ತ್ರಿವೇಣಿ ವಂದಿಸಿ, ಚಿಂಚನ ಕಾರ್ಯಕ್ರಮ ನಿರೂಪಿಸಿದರು.

Related posts

ಬೆಳಾಲು ಶ್ರೀ ಧ.ಮಂ.ಪ್ರೌಢಶಾಲೆಯಲ್ಲಿ ಪರಿಸರ ಜಾಗೃತಿ ಮಾಹಿತಿ ಕಾರ್ಯಕ್ರಮ

Suddi Udaya

ಪದ್ಮುಂಜದಲ್ಲಿ 12 ಗಂಟೆಗಳ ಮ್ಯಾರಥಾನ್ ಯೋಗ ತರಬೇತಿ ಶಿಬಿರದ ಸಮಾರೋಪ: ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸಾಧಕಿ ಕುಮಾರಿ ಅದಿತಿ ಮುಗೆರೋಡಿ ರವರಿಗೆ ಸನ್ಮಾನ

Suddi Udaya

ಉಜಿರೆ: ಶ್ರೀ ಧ.ಮಂ. ಕಾಲೇಜಿನ ಸಮಾಜಕಾರ್ಯ ವಿಭಾಗ ಹಾಗೂ ಸ್ತ್ರೀ ಶಕ್ತಿ ಪಡಂಗಡಿ ಇದರ ಸಹಯೋಗದಿಂದ ಮುಟ್ಟಿನ ಕಪ್ ಬಳಕೆ ಮತ್ತು ಸುರಕ್ಷತೆಯ ಅರಿವು ಕಾರ್ಯಕ್ರಮ

Suddi Udaya

ಶಿಲ್ಪಾ ಆಚಾರ್ಯ ಮನೆಗೆ ಭೇಟಿ ನೀಡಿದ ಡಿವೈಎಫ್ಐ ನಿಯೋಗ

Suddi Udaya

ಚಾರ್ಮಾಡಿ ಘಾಟ್‌ನಲ್ಲಿ ಲಾರಿ ಪಲ್ಟಿ — ಪ್ರಾಣಾಪಾಯದಿಂದ ಪಾರಾದ ಚಾಲಕ

Suddi Udaya

ರಹ್ಮಾನಿಯಾ ಜುಮ್ಮಾ ಮಸ್ಜಿದ್ ಹಾಗೂ ದರ್ಗಾ ಶರೀಫ್ ಕಾಜೂರ್: ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ತರಬೇತಿ ಕಾರ್ಯಾಗಾರ, ಸಾಧಕರಿಗೆ ಸನ್ಮಾನ

Suddi Udaya
error: Content is protected !!