September 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಧರ್ಮಸ್ಥಳ ಶ್ರೀ ಧ . ಮಂ.ಆಂಗ್ಲ ಮಾಧ್ಯಮ ಶಾಲೆಯಲ್ಲಿ ನೃತ್ಯ ಹಾಗೂ ಸಂಗೀತ ಉದ್ಘಾಟನೆ ಸಮಾರಂಭ

ಧರ್ಮಸ್ಥಳ: ಶ್ರೀ .ಧ .ಮ .ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಪ್ರಸಕ್ತ ವರ್ಷದ ಭರತನಾಟ್ಯ ಹಾಗೂ ಸಂಗೀತ ತರಗತಿಗಳ ಉದ್ಘಾಟನಾ ಸಮಾರಂಭ ನೆರವೇರಿತು.

ಮುಖ್ಯ ಅತಿಥಿಗಳಾಗಿ ಸಂಗೀತ ಹಾಗೂ ಯಕ್ಷಗಾನ ಪ್ರೇಮಿಯಾಗಿರುವ ಕೆ ಕೃಷ್ಣ ಆಚಾರ್ಯ ಆಗಮಿಸಿದ್ದರು. ಇವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಮಕ್ಕಳಿಗೆ ಯಾವತ್ತೂ ಶಿಸ್ತು ಎಲ್ಲಾ ಕ್ಷೇತ್ರಗಳಲ್ಲೂ ಬಹಳ ಮುಖ್ಯ ವಾಗಿದೆ. ವಿದ್ಯೆಯ ಜೊತೆಗೆ ಸಹಪಠ್ಯ ಚಟುವಟಿಕೆ ಯಲ್ಲಿ ಹೆಚ್ಚು ಭಾಗವಹಿಸಿ ತೃಪ್ತಿ ಯನ್ನು ಪಡೆದುಕೊಳ್ಳಬೇಕು ಎಂದು ಹಿತವಚನವನ್ನು ನೀಡಿದರು.

ಶಾಲಾ ನೃತ್ಯ ತರಬೇತಿ ಗುರುಗಳಾದ ಕುಮಾರಿ ಕೃತಿಕಾ ಕೆ ಎಸ್ ಮಕ್ಕಳಿಗೆ ಶುಭಾಶಯ ಕೋರಿದರು. ಸಂಗೀತ ತರಬೇತಿ ನೀಡುವ ಗುರುಗಳಾದ ಶ್ರೀಮತಿ ಸುಗುಣ ವಿ. ಕೆ. ಆಚಾರ್ಯ ರವರು ಮಕ್ಕಳಿಗೆ ಶುಭಾಶಯ ಕೋರಿ ಪೋಷಕರ ಪಾತ್ರವನ್ನು ವಿವರಿಸಿದರು. ಶಾಲಾ ಮುಖ್ಯಶಿಕ್ಷಕಿ ಶ್ರೀಮತಿ ಪರಿಮಳ ಎಂ ವಿ ರವರು ಮಾರ್ಗದರ್ಶನ ನೀಡಿದರು. ಅದಿತಿ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಅಧ್ವಿಕಾ ಸ್ವಾಗತಿಸಿ ,ಕುಮಾರಿ ಸಾನಿಧ್ಯ ಎಸ್ ಪಿ ಕಾರ್ಯಕ್ರಮದ ವಂದನಾರ್ಪಣೆಗೈದರು. ಸೌಹಾರ್ದ ಗೌಡ ಅತಿಥಿಗಳ ಪರಿಚಯ ಮಾಡಿಕೊಟ್ಟರು. ಪೋಷಕರು ಹಾಗೂ ಶಿಕ್ಷಕರ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಉತ್ತಮ ರೀತಿಯಲ್ಲಿ ನೆರವೇರಿತು.

Related posts

ಬೆಳಾಲು ಶ್ರೀ ಮಹಮ್ಮಾಯಿ ಗುಳಿಗ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ರಚನೆ

Suddi Udaya

ಕಳ್ಳತನ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿದ ವಾರಂಟ್ ಆರೋಪಿಯನ್ನು ಬಂಧಿಸಿದ ಧರ್ಮಸ್ಥಳ ಪೊಲೀಸರು

Suddi Udaya

ದೈವದೇವರ ಅವಹೇಳನ ಆರೋಪ: ಕಲಾವಿದರ ವಿರುದ್ಧ ದೂರು

Suddi Udaya

ಗುರುವಾಯನಕೆರೆ ಕುಂಬಾರರ ಗುಡಿ ಕೈಗಾರಿಕ ಸಹಕಾರ ಸಂಘದ ಮುಂಗಾರು ಹಂಗಾಮ ಠೇವಣಿ ಯೋಜನೆಗಳ ಕರಪತ್ರ ಬಿಡುಗಡೆ

Suddi Udaya

ಧರ್ಮಸ್ಥಳ: ಶ್ರೀ ಧ.ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಒಂದು ದಿನದ ಕರಡಿಪಾತ್ ಕಾರ್ಯಾಗಾರ

Suddi Udaya

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ವರ್ಷವೊಂದರಲ್ಲೇ 193 ಕೆರೆಗಳ ಪುನಶ್ಚೇತನ : ಬರಗೆಲ್ಲುವುದಕ್ಕೆ ಕೆರೆ ಮಾದರಿ

Suddi Udaya
error: Content is protected !!