30.8 C
ಪುತ್ತೂರು, ಬೆಳ್ತಂಗಡಿ
September 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಸುಲ್ಕೇರಿ ಶ್ರೀರಾಮ ಶಾಲೆಯಲ್ಲಿ ಯಕ್ಷಗಾನ ನಾಟ್ಯ ತರಗತಿಯ ಉದ್ಘಾಟನೆ

ಸುಲ್ಕೇರಿ : ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಸುಲ್ಕೇರಿ, ಶ್ರೀರಾಮ ಶಾಲೆ, ಸುಲ್ಕೇರಿಯಲ್ಲಿ ಜೂ.16ರಂದು ಯಕ್ಷಗಾನ ನಾಟ್ಯ ತರಗತಿಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಕರ್ನಾಟಕದ ಜನಪದ ಕಲೆಯಲ್ಲೊಂದಾದ ಯಕ್ಷಗಾನದ ಕಂಪನ್ನು ವಿದ್ಯಾರ್ಥಿಗಳಲ್ಲಿ ತುಂಬಿ ಕಲಾಭಿರುಚಿಯನ್ನು ಮೂಡಿಸುವ ಧ್ಯೇಯದೊಂದಿಗೆ 4 ವರ್ಷಗಳ ಹಿಂದೆ ಶಾಲೆಯಲ್ಲಿ ಯಕ್ಷಗಾನ ತರಬೇತಿಯನ್ನು ಆರಂಭಿಸಲಾಗಿದ್ದು ಕಳೆದ ವರ್ಷದಿಂದ ಯಕ್ಷಧ್ರುವ ಪಟ್ಲ ಪೌಂಡೇಶನ್ ಟ್ರಸ್ಟ್(ರಿ) ಮಂಗಳೂರು ಯಕ್ಷಧ್ರುವ–ಯಕ್ಷ ಶಿಕ್ಷಣ ಕಾರ್ಯಕ್ರಮಕ್ಕೆ ಹಸ್ತಾಂತರಗೊಂಡಿದ್ದು ಈ ವರ್ಷ 2ನೇ ವರ್ಷದ ಉದ್ಘಾಟನಾ ಕಾರ್ಯಕ್ರಮವು ಶಾಲೆಯಲ್ಲಿ ನಡೆಯಿತು .

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ರಾಜು ಪೂಜಾರಿ ವಹಿಸಿಕೊಂಡಿದ್ದರು . ಶಾಲಾ ಆಡಳಿತ ಮಂಡಳಿಯ ಗೌರವಾಧ್ಯಕ್ಷ ಗಣೇಶ್ ಹೆಗ್ಡೆ, ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅಧ್ಯಕ್ಷ ರಾಕೇಶ್ ಹೆಗ್ಡೆ ಬಳೆಂಜ ಹಾಗೂ ಮಂಗಳೂರು ಯಕ್ಷಧ್ರುವ ಪಟ್ಲ ಪೌಂಡೇಶನ್ ಟ್ರಸ್ಟ್ ಯಕ್ಷಧ್ರುವ ಯಕ್ಷ ಶಿಕ್ಷಣ ಬೆಳ್ತಂಗಡಿ ಘಟಕ ಅಧ್ಯಕ್ಷ ಸುರೇಶ್ ಶೆಟ್ಟಿ , ಲಯನ್ಸ್ ಅಧ್ಯಕ್ಷ ಲಯನ್ ದೇವದಾಸ್ ಶೆಟ್ಟಿ ಬದ್ಯಾರು, ಮಂಗಳೂರು ಯಕ್ಷಧ್ರುವ ಯಕ್ಷಶಿಕ್ಷಣ ಪಟ್ಲ ಪೌಂಡೇಶನ್ ಟ್ರಸ್ಟ್ ಪ್ರಧಾನ ಸಂಚಾಲಕ ವಾಸುದೇವ ಐತಾಳ , ಶಿತಿಕಂಠ ಭಟ್ ಉಜಿರೆ ಗಣೇಶ್ ಕ್ಲಿನಿಕಲ್ ಲ್ಯಾಬೋರೆಟರಿ ಬೆಳ್ತಂಗಡಿ , ಶ್ರೀಮತಿ ಧನುಷಾ ಇಕೋ ಫ್ರೆಶ್ ಎಂಟರ್ ಪ್ರೈಸಸ್ ಹಾಗೂ ವೀರ ಮಾರುತಿ ಇಂಡಸ್ಟ್ರೀಸ್ ಇದರ ಪ್ರೊಪ್ರೇಟರ್ , ಶ್ರೀ ಸುಲ್ಕೇರಿ ಮಹಮ್ಮಾಯಿ ದೇವಸ್ಥಾನ ಅಧ್ಯಕ್ಷ ಪಾರ್ಶ್ವನಾಥ ಜೈನ್, ದೇವಿಪ್ರಸಾದ್ ಗುರುವಾಯನಕೆರೆ ಯಕ್ಷಗಾನ ತರಬೇತಿ ಗುರುಗಳು , ಶ್ರೀರಾಮ ಪ್ರೌಢ ಶಾಲೆ ಮುಖ್ಯೋಪಾಧ್ಯಾಯರು ಪ್ರಮೋದ ಕುಮಾರ್ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಮುಖ್ಯೋಪಾದ್ಯಾಯರು ಶಶಿಕಲಾ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿ , ಪೂರ್ವ ಗುರುಕುಲ ಮುಖ್ಯಸ್ಥೆ ಸ್ವಾತಿ ಧನ್ಯವಾದವಿತ್ತರು. ಶಿಕ್ಷಕಿ ಹೇಮಲತಾ ಕಾರ್ಯಕ್ರಮ ನಿರೂಪಿಸಿದರು.

Related posts

ಕುವೆಟ್ಟು: ಪಯ್ಯೋಟ್ಟು ನಿವಾಸಿ ನಾಣ್ಯಪ್ಪ ಪೂಜಾರಿ ನಿಧನ

Suddi Udaya

ಮಹಾಮಂಡಲೇಶ್ವರ ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಂದ ಯುವಶಕ್ತಿ ಫ್ರೆಂಡ್ಸ್ ನಾಲ್ಕೂರು ಇದರ ಮೊಸರು ಕುಡಿಕೆ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಆ. 2: ಬಳಂಜ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿಯಿಂದ ‘ಆಟಿಡೊಂಜಿ ದಿನ’ ವಿಶೇಷ ಆಚರಣೆ

Suddi Udaya

ಬೆಳ್ತಂಗಡಿ ಎ.ಪಿ.ಎಂ.ಸಿ ನಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ

Suddi Udaya

ಎಸ್‌ಕೆಎಸ್‌ಎಸ್‌ಎಫ್ ಕಕ್ಕಿಂಜೆ ಕ್ಲಸ್ಟರ್: ಅಧ್ಯಕ್ಷ ಹಫೀಝ್ ಚಿಬಿದ್ರೆ, ಪ್ರ. ಕಾರ್ಯದರ್ಶಿ ಸದಖತುಲ್ಲಾ ದಾರಿಮಿ, ಕೋಶಾಧಿಕಾರಿ ರಫೀಕ್ ಹಾಜಿ

Suddi Udaya

ಆ.15: ಉಜಿರೆಯಲ್ಲಿ ಅಗ್ರಿಲೀಫ್ ಉದ್ಯೋಗ ಮೇಳ-2026

Suddi Udaya
error: Content is protected !!