September 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಸೋಣಂದೂರು: ಪೊಮ್ಮಾಜೆ ಜನರಿಗೆ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾದ ಏರ್‌ಟೆಲ್ ಹಾಗೂ ಬಿಎಸ್‌ಎನ್‌ಎಲ್ ಟವರ್

ಬೆಳ್ತಂಗಡಿ : ಸೋಣಂದೂರು ಗ್ರಾಮದ ಪೂಮ್ಮಾಜೆ ಇಲ್ಲಿನ ನಾಗರಿಕರ ಹೆಚ್ಚಿನ ಸಮಸ್ಯೆ ಎಂದರೆ ಮೊಬೈಲ್ ನೆಟ್ವರ್ಕ್.
ಪೂಮ್ಮಾಜೆ- ಪಣಕಜೆ ಭಾಗದಲ್ಲಿ ಏರ್‌ಟೆಲ್ ಹಾಗೂ ಬಿಎಸ್‌ಎನ್‌ಎಲ್ ಮೂರು ಟವರ್ ಗಳಿದ್ದರೂ ಜನತೆಗೆ ಯಾವ ಪ್ರಯೋಜನಕ್ಕೂ ಇಲ್ಲದಂತಾಗಿದೆ. ಗ್ರಾಹಕರು ಈ ಟವರ್ಗಳ ಅಡಿಯಲ್ಲಿ ನಿಂತರೂ ನೆಟ್ವರ್ಕ್ ಸಿಗದಿರುವುದು ವಿಶ್ವದ ವಿಚಿತ್ರ ಸಂಗತಿಗಳಲ್ಲಿ ಒಂದು.

ಉದ್ಯೋಗಿಗಳಿಗೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ಅಧ್ಯಾಪಕರಿಗೆ ಈ ನೆಟ್ವರ್ಕ್ ಸಮಸ್ಯೆಯಿಂದ ಆಗುವ ತೊಂದರೆ ಅಷ್ಟಿಷ್ಟಲ್ಲ. ಆನ್ಲೈನ್ ನಲ್ಲಿ ಆರ್ಡರ್ ಮಾಡಿದ ವಸ್ತುಗಳನ್ನು ಡೆಲಿವೆರಿ ಬಾಯ್ ಗಳು ತಗೊಂಡು ಬಂದು ಆರ್ಡರ್ ಮಾಡಿದವರಿಗೆ ತಲುಪಿಸೋಣ ಅಂದ್ರೆ ಮನೆಯ ಮುಂಭಾಗಕ್ಕೆ ಬಂದರೂ ನೆಟ್ವರ್ಕ್ ಇಲ್ಲಾ. ಇನ್ನು ಸಂಬಂಧಪಟ್ಟ ಕಂಪನಿಯ ಅಧಿಕಾರಿಗಳಿಗೆ ದೂರು ಕೊಟ್ಟರೂ ಪ್ರಯೋಜನವಾಗಿಲ್ಲ. ಆದ್ದರಿಂದ ಸಂಬಂಧಪಟ್ಟವರು ಪೋಮ್ಮಾಜೆಯ ಆಸುಪಾಸಿನ ನಾಗರಿಕರಿಗೆ ಆಗುವ ಈ ತೊಂದರೆಯನ್ನು ಆದಷ್ಟು ಬೇಗ ನಿವಾರಿಸುವಂತೆ ಒತ್ತಾಯಿಸಲಾಗಿದೆ.
-ಯಸ್. ರಿಯಾಝ್

Related posts

ಉಜಿರೆ: ಅತ್ತಾಜೆ ನಿವಾಸಿ ಜಂಶೀರ್ ಸೌದಿ ಅರೇಬಿಯಾದಲ್ಲಿ ಹೃದಯಾಘಾತದಿಂದ ನಿಧನ

Suddi Udaya

ಕೂಟ ಮಹಾ ಜಗತ್ತು ಬೆಳ್ತಂಗಡಿ ಅಂಗಸಂಸ್ಥೆಯ ಮಹಿಳಾ ವೇದಿಕೆಯಿಂದ ಆಟಿಕೂಟ ಆಚರಣೆ

Suddi Udaya

ಜಿಲ್ಲಾ ಉಸ್ತುವಾರಿ ಸಚಿವರಿಂದ138 ಫಲಾನುಭವಿಗಳಿಗೆ 94ಸಿ ಮತ್ತು ‌94 ಸಿಸಿ ಹಕ್ಕು ಪತ್ರ ವಿತರಣೆ

Suddi Udaya

ಬೆಳ್ತಂಗಡಿ : ವಾಣಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗೆ ಶೇ.97.14 ಫಲಿತಾಂಶ

Suddi Udaya

ಉಜಿರೆ: ಹಳೆಪೇಟೆ ಸೋಶಿಯಲ್ ಡೆಮೋಕ್ರಟಿಕ್ ಟ್ರೇಡ್ ಯೂನಿಯನ್ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಬೆಳ್ತಂಗಡಿ ಸೈಂಟ್ ಲಾರೆನ್ಸ್ ಕ್ಯಾಥೆಡ್ರಲ್ ಚರ್ಚ್ ನಲ್ಲಿ ಶುಭ ಶುಕ್ರವಾರ ಆಚರಣೆ

Suddi Udaya
error: Content is protected !!