23.3 C
ಪುತ್ತೂರು, ಬೆಳ್ತಂಗಡಿ
August 3, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಎಕ್ಸೆಲ್‌ನ ವಿದ್ಯಾರ್ಥಿಗಳು ದೇಶದ ಪ್ರತಿಷ್ಠಿತ ಐಐಟಿಗಳಿಗೆ

ಗುರುವಾಯನಕೆರೆ: ಭಾರತದ ಅತ್ಯುನ್ನತ ಎಂಜಿನಿಯರಿಂಗ್ ಕಾಲೇಜುಗಳಾದ ಐಐಟಿ, ಎನ್ಐಟಿ, ಐಐಐಟಿ ಮತ್ತಿತರ ಜಿಎಫ್‌ಟಿ ಸಂಸ್ಥೆಗಳ ಜಂಟಿ ಸೀಟು ಹಂಚಿಕೆ ಪ್ರಕ್ರಿಯೆಯನ್ನು ನಿರ್ವಹಿಸುವ ಕೇಂದ್ರ ಶಿಕ್ಷಣ ಸಚಿವಾಲಯದ ಅಂಗವಾಗಿರುವ ಜಂಟಿ ಸೀಟು ಹಂಚಿಕೆ ಪ್ರಾಧಿಕಾರದ (JoSAA) ಕೌನ್ಸಿಲಿಂಗ್‌ನಲ್ಲಿ ಎಕ್ಸೆಲ್ ಪದವಿಪೂರ್ವ ಕಾಲೇಜು ಗುರುವಾಯನಕೆರೆಯ ಹಲವು ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದಾರೆ.

ಹರ್ಷಿತ ಎಸ್ ಐಐಟಿ ದೆಹಲಿ, ವಿನಯ ಕೆ ಸಜ್ಜನರ್ ಎನ್‌ಐಟಿ ವಾರಂಗಲ್, ಕೆ. ಕೆ. ಸರ್ವಿಕ ಐಐಟಿ ಧಾರವಾಡ, ರೋಹಿತ್ ಆ‌ರ್. ಎಲ್ ಐಐಟಿ ಧಾರವಾಡ, ಸಮ್ಯಕ್ ವಿನಯ್ ಎನ್‌ಐಟಿಕೆ ಸುರತ್ಕಲ್, ಅಕ್ಷಯ್ ಎ ಎನ್‌ಐಟಿಕೆ ಸುರತ್ಕಲ್, ಶಶಾಂಕ ಗೌಡ ಎನ್‌ಐಟಿಕೆ ಸುರತ್ಕಲ್, ಸ್ವಸ್ತಿಕ್ ಎ ಜೈನ್ ಎನ್‌ಐಟಿಕೆ ಸುರತ್ಕಲ್, ತೇಜಲ್ ವಿ ವಂಟಕರ್ ಎನ್‌ಐಟಿಕೆ ಸುರತ್ಕಲ್, ಅಭಿನವ್ ಕೆ ಮಯ್ಯ ಎನ್‌ಐಟಿಕೆ ಸುರತ್ಕಲ್, ಯಶಸ್ ಗೌಡ ಎನ್ ಎನ್‌ಐಟಿ ರೌರ್ಕೆಲ, ಪೂರ್ವಿಕ ಜೆ ಎನ್‌ಐಟಿ ರಾಯ್‌ಪುರ, ಸಂಸ್ಥೆಗಳಿಗೆ ಆಯ್ಕೆಯಾಗಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ಎಕ್ಸೆಲ್ ಪದವಿಪೂರ್ವ ಕಾಲೇಜಿನಿಂದ ಮೂರು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ದೇಶದ ಪ್ರತಿಷ್ಠಿತ ಐಐಟಿ, ಎನ್‌ಐಟಿ, ಐಐಐಟಿ, ಐಐಎಸ್‌ಸಿ ಸೇರಿ ಭಾರತದ ಉತ್ಕೃಷ್ಟ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವುದು ಸಂಸ್ಥೆಯ ಗುಣಮಟ್ಟಕ್ಕೆ ಹಿಡಿದ ಕೈಗನ್ನಡಿಯೆಂದು ಎಕ್ಸೆಲ್ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್‌ಕುಮಾರ್ ಜೈನ್ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

Related posts

ಎ.16-21: ಬೆಳ್ತಂಗಡಿ ಮಹಿಳಾ ವೃಂದದ ಆಶ್ರಯದಲ್ಲಿ ಝೇಂಕಾರ ಬೇಸಿಗೆ ಶಿಬಿರ

Suddi Udaya

ಅಟಲ್ ಟಿಂಕರ್ ಫೆಸ್ಟ್ 2025: ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆ ವಿದ್ಯಾರ್ಥಿಗಳಿಗೆ ಬಹುಮಾನ

Suddi Udaya

ನಿಡ್ಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ: ರೂ. 59.78 ಲಕ್ಷ ಲಾಭ , ಸದಸ್ಯರಿಗೆ ಶೇ. 7 ಡಿವಿಡೆಂಟ್ ಘೋಷಣೆ

Suddi Udaya

ಪೆರ್ಲ ಬೈಪಾಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಯಕ್ಷಗಾನ ನಾಟ್ಯ ತರಬೇತಿಯ ಉದ್ಘಾಟನೆ

Suddi Udaya

ಬೆಳ್ತಂಗಡಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡ ನಾಟಿ ಕಾರ್ಯಕ್ರಮ

Suddi Udaya

ಎಸ್.ಐ‌.ಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಬೆಳ್ತಂಗಡಿ ಕಚೇರಿಗೆ ಆಗಮನ

Suddi Udaya
error: Content is protected !!