ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನಿಡ್ಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ: ರೂ. 59.78 ಲಕ್ಷ ಲಾಭ , ಸದಸ್ಯರಿಗೆ ಶೇ. 7 ಡಿವಿಡೆಂಟ್ ಘೋಷಣೆ

ನಿಡ್ಲೆ : ಇಲ್ಲಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2024-25 ನೇ ಸಾಲಿನ ವಾರ್ಷಿಕ ಮಹಾಸಭೆಯು ಜು. 26 ರಂದು ಸಂಘದ ವಠಾರದಲ್ಲಿ ಜರುಗಿತು.

ಕಾರ್ಯಕ್ರಮವನ್ನು ಸಂಘದ ಅಧ್ಯಕ್ಷ ಧನಂಜಯ ಗೌಡ ದೀಪ ಬೆಳಗಿಸಿ ಉದ್ಘಾಟಿಸಿ, ನಂತರ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರಸ್ತುತ ಸಾಲಿನಲ್ಲಿ ಸಂಘವು ರೂ. 59,78,595.84 ಲಾಭ ಗಳಿಸಿದೆ. ಸದಸ್ಯರಿಗೆ ಶೇ.7% ಡಿವಿಡೆಂಟ್ ಘೋಷಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಡೀಕಯ್ಯ ಎಮ್.ಕೆ, ನಿರ್ದೇಶಕರಾದ ವಿಜಯ್ ಕುಮಾರ್, ಆನಂದ ಗೌಡ ಎಮ್, ಕೆ. ಹೇಮಂತ್ ಗೌಡ, ಜಯರಾಮ ಪಾಳೆಂದೈ, ಶ್ರೀಮತಿ ವಿಜಯಲಕ್ಷ್ಮೀ, ರಾಜು, ಮೋಹನ್ ಪೂಜಾರಿ, ಧನಂಜಯ ಹಾಗೂ ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಸಂಘದ ನಿರ್ದೇಶಕಿ ಶ್ರೀಮತಿ ಗಾಯತ್ರಿ ಎಚ್ ಗೌಡ ಪ್ರಾರ್ಥಿಸಿ, ಕೆ. ರಮೇಶ್ ರಾವ್ ಸ್ವಾಗತಿಸಿದರು. ಲೆಕ್ಕಿಗ ವೇಣುಗೋಪಾಲ ಬಿ. ಲೆಕ್ಕ ಪರಿಶೋಧನಾ ವರದಿ ಓದಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಪದ್ಮನಾಭ ಪಿ. ಕಾರ್ಯಕ್ರಮ ನಿರೂಪಿಸಿದರು.

Related posts

ಉಜಿರೆ: ಅಭ್ಯಾಸ್ ಪಿ .ಯು ಕಾಲೇಜಿನಲ್ಲಿ ವಾಲ್ಮೀಕಿ ಜಯಂತಿಯ ಆಚರಣೆ

Suddi Udaya

ಯುವವಾಹಿನಿ ಉಪ್ಪಿನಂಗಡಿ ಘಟಕದ ಅಧ್ಯಕ್ಷರಾಗಿ ಮನೋಜ್ ಎನ್ ಸಾಲ್ಯಾನ್ ಆಯ್ಕೆ

Suddi Udaya

ಕುವೆಟ್ಟು ಸ.ಉ.ಪ್ರಾ.ಶಾಲೆಯ ಎಲ್ ಕೆ ಜಿ -ಯು ಕೆ ಜಿ ವಿಭಾಗದ ಹೊರಾಂಗಣ ಆಟದ ಸಲಕರಣೆಗಳ ಉದ್ಘಾಟನೆ

Suddi Udaya

ಧರ್ಮಸ್ಥಳ: ಶ್ರೀ ಧ.ಮಂ. ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ

Suddi Udaya

ಚಾರ್ಮಾಡಿ ಗ್ರಾಮ ಪಂಚಾಯತ್ ಗ್ರಾಮ ಸಭೆ: ಕುಡಿಯುವ ನೀರಿನ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸುವಂತೆ ಗ್ರಾಮಸ್ಥರ ಒತ್ತಾಯ

Suddi Udaya

ಹಿಂದೂ ಸಂಘಟನೆಯ ಮುಖಂಡ ಅರುಣ್ ಕುಮಾರ್ ಪುತ್ತಿಲ್ಲ ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆ ಸಂಸ್ಥೆಗೆ ಭೇಟಿ: ಆತ್ಮೀಯವಾಗಿ ಬರಮಾಡಿಕೊಂಡು ಗೌರವಿಸಿದ ಸಂಸ್ಥೆಯ ಮಾಲಕರಾದ ಕೆ.ಮೋಹನ್ ಕುಮಾರ್

Suddi Udaya
error: Content is protected !!