September 18, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅರಣ್ಯ ಇಲಾಖೆಯ ಸಹಯೋಗದಲ್ಲಿ ರಸ್ತೆ ನಿರ್ಮಾಣ ಆಗಲಿ :ಮೋಹನ್ ಗೌಡ ಕಲ್ಮoಜ

ಬೆಳ್ತಂಗಡಿ: ಪಶ್ಚಿಮ ಘಟ್ಟ ತಪ್ಪಲಿನ ಕುದುರೆಮುಖ ಅಭಯ ಅರಣ್ಯ ಪ್ರದೇಶ ಒಳಪಟ್ಟ ಬೆಳ್ತಂಗಡಿ ತಾಲೂಕು ವ್ಯಾಪ್ತಿಯ ದಿಡುಪೆ ಎಳನೀರು ಸಂಸೆ ಕಳಸ ರಸ್ತೆ ಅರಣ್ಯ ಇಲಾಖೆಯ ಸಹಯೋಗದಲ್ಲಿ ನಿರ್ಮಾಣ ಆಗಲಿ ಎಂದು ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷರು, ಬೆಳ್ತಂಗಡಿ ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ನ ಅಧ್ಯಕ್ಷ ಮೋಹನ್ ಗೌಡ ಕಲ್ಮoಜ ಸರಕಾರಕ್ಕೆ ಅಗ್ರಹಿಸಿದ್ದಾರೆ.

ನಮ್ಮ ಸಮಾಜ ಬಾಂಧವರೇ ಹೆಚ್ಚಾಗಿ ಇರುವ ಪ್ರದೇಶ ಇದು. ವಿದ್ಯಾರ್ಥಿಗಳಿಗೆ ಕೃಷಿಕರಿಗೆ ಉದ್ಯೋಗಿಗಳಿಗೆ ಬೆಳ್ತಂಗಡಿ ತಾಲೂಕು ಸಂಪರ್ಕ ಒಂದು ದೊಡ್ಡ ದುರಂತ ಸವಾಲಿನ ಸಂಗತಿ. ರಾಷ್ಟ್ರದ ಅನೇಕ ಅರಣ್ಯ ಪ್ರದೇಶಗಳ ಪ್ರಕೃತಿ ರಮಣೀಯ ಸ್ಥಳ ವೀಕ್ಷಣೆ ವಿಹಾರ ರಸ್ತೆ ವ್ಯಾಪ್ತಿಯ ಪ್ರದೇಶಗಳಲ್ಲಿ ಅರಣ್ಯ ಇಲಾಖೆ ಸುಂಕ ವಸೂಲಿ ಟಿಕೆಟ್ ಇತ್ಯಾದಿಗಳು ಮೂಲಕ ಆದಾಯ ಮಾಡುತ್ತಿರುವ ಸಂದರ್ಭದಲ್ಲಿ ಈ ರಸ್ತೆಯ ನಿರ್ಮಾಣಕ್ಕೂ ಇದೇ ಮಾದರಿಯಲ್ಲಾದರೂ ನಮಗೆ ರಸ್ತೆ ನಿರ್ಮಾಣ ಮೂಲಕ ಚಿಕ್ಕಮಗಳೂರು ದಕ್ಷಿಣ ಕನ್ನಡ ಜನತೆಯ ಸಂಪರ್ಕ ಕೊಂಡಿಯಾಗಬೇಕು. ಈ ಮೂಲಕ ಹೊರನಾಡು,ಕಳಸ ,ಶೃಂಗೇರಿ , ಧರ್ಮಸ್ಥಳ ದೇವಸ್ಥಾನ ಗಳಿಗೆ ಆಗಮಿಸುವ ಭಕ್ತರ. ಪ್ರಯಾಣಕ್ಕೂ ಅತೀ ಸಮೀಪ ರಸ್ತೆ ಜೊತೆ ಈ ಭಾಗದ ಜನತೆಯ ಆದಾಯ ಕೂಡ ಹೆಚ್ಚಾಗಲಿದೆ. ಅದ್ಭುತ ಪ್ರಕೃತಿ ರಮಣೀಯ ನೇತ್ರಾವತಿ ಉಗಮ ಸ್ಥಾನ ಜೊತೆ ಅನೇಕ ಸೌಂದರ್ಯ ಜಲಪಾತಗಳು ಇಲ್ಲಿವೆ. ಸರಕಾರ ಮನಸ್ಸು ಮಾಡಿ ಪ್ರವಾಸಿಗರ ಮನ ಸೆಳೆದು ಆದಾಯ ಹೆಚ್ಚಿಸಲು ತಾಲೂಕಿನ ಗೌರವ ಪ್ರಸಿದ್ದಿ ಹೆಚ್ಚಿಸಲು.. ವಿದ್ಯಾರ್ಥಿಗಳ. ಭವಿಷ್ಯ ದೃಷ್ಟಿ ಯಿಂದ ಆದರೂ ಈ ರಸ್ತೆ ನಿರ್ಮಾಣಕ್ಕೆ ಅರಣ್ಯ ಇಲಾಖೆ ದೊಡ್ಡ ಮನಸ್ಸು ಮಾಡಬೇಕು ಎಂದು ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷರು ಬೆಳ್ತಂಗಡಿ ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ನ ಅಧ್ಯಕ್ಷ ಮೋಹನ್ ಗೌಡ ಕಲ್ಮoಜ ಸರಕಾರಕ್ಕೆ ವಿನಂತಿ ಮಾಡಿದ್ದಾರೆ.

ನೂತನ ಜಿಲ್ಲಾ ಸಂಸದ ಬ್ರಿಜೇಶ್ ಚೌಟರು ತಾಲೂಕಿನಲ್ಲಿ ನೂತನ ರಸ್ತೆಗಳಿಗೆ ಸಿಆರ್ ಎಫ್ ನಿಧಿಯಿಂದ ಅನುದಾನ ತಂದಿದ್ದಾರೆ ತಕ್ಷಣವೇ ಈ ಪ್ರದೇಶಕ್ಕೆ ಭೇಟಿ ನೀಡಿ ಬೆಳ್ತಂಗಡಿ ತಾಲೂಕು ದಕ್ಷಿಣ ಕನ್ನಡ ವ್ಯಾಪ್ತಿಯವರೆಗಾದರೂ ರಸ್ತೆ ನಿರ್ಮಾಣ ಮಾಡಬೇಕು ಎಂದು ಅಗ್ರಹಿಸಿದ್ದಾರೆ.

Related posts

ಎಸ್‌ಡಿಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಎಸ್‌ಡಿಎಂ ಕಾಲೇಜು ಆಫ್ ನ್ಯಾಚುರೋಪತಿ ಸಂಯುಕ್ತ ಆಶ್ರಯದಲ್ಲಿ ವಿಶ್ವ ಏಡ್ಸ್ ದಿನದ ಅಂಗವಾಗಿ ಜಾಗೃತಿ ಕಾರ್ಯಕ್ರಮ

Suddi Udaya

ಎಲ್.ಸಿ.ಆರ್ ಇಂಡಿಯನ್ ವಿದ್ಯಾಸಂಸ್ಥೆಯಲ್ಲಿ ಆಟಿಡೊಂಜಿ ದಿನಾಚರಣೆ

Suddi Udaya

ಹಿರಿಯ ಧರ್ಮಗುರು ಅಹ್ಮದ್ ಕುಂಞಿ ಮುಸ್ಲಿಯಾರ್ ಬೀಟಿಗೆ ನಿಧನ

Suddi Udaya

ಪಿಡಬ್ಲ್ಯೂ ಪ್ರಥಮ ದರ್ಜೆ ಸಹಾಯಕ ಹರೀಶ್ ಶೆಟ್ಟಿ- ಶ್ರೀಮತಿ ಚಂಪಾ ದಂಪತಿಯ 25ನೇ ವರ್ಷದ ವೈವಾಹಿಕ ಜೀವನದ ಬೆಳ್ಳಿ ಹಬ್ಬದ ಸಂಭ್ರಮಾಚರಣೆ

Suddi Udaya

ಬೆಳ್ತಂಗಡಿ ವಕೀಲರ ಸಂಘದಿಂದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ರವರಿಗೆ ಸನ್ಮಾನ: ನೂತನ ನ್ಯಾಯಾಲಯ ಸಂಕೀರ್ಣ ಕಟ್ಟಡ ನಿರ್ಮಾಣಕ್ಕೆ ಮನವಿ

Suddi Udaya

ವಾಣಿ ಶಿಕ್ಷಣ ಸಂಸ್ಥೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಬೇಸಿಗೆ ಶಿಬಿರ

Suddi Udaya
error: Content is protected !!