32.3 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನಡ: ಸ್ಟಾರ್ ಲೈನ್ ಆಂ.ಮಾ. ಶಾಲೆಯಲ್ಲಿ “ ಶಾಲಾ ವಿದ್ಯಾರ್ಥಿ ಸಂಘದ ಪ್ರತಿಜ್ಞಾ ವಿಧಿ ಸ್ವೀಕಾರ” ಸಮಾರಂಭ

ನಡ : ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿ ಸಂಘದ ‘ಪ್ರತಿಜ್ಞಾ ವಿಧಿ ಸ್ವೀಕಾರ ’ ಸಮಾರಂಭವು ಜೂ.19 ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು.

ಸಭಾ ವೇದಿಕೆಯಲ್ಲಿ ಶಾಲಾ ಆಡಳಿತ ಟ್ರಸ್ಟಿನ ಸಂಚಾಲಕ ಜನಾಬ್ ಸೈಯ್ಯದ್ ಹಬೀಬ್‌, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಾಕಿನ್ ಬಿನ್ ಉಪಸ್ಥಿತರಿದ್ದರು.


ಆಯ್ಕೆಯಾದ ವಿದ್ಯಾರ್ಥಿ ನಾಯಕರುಗಳಿಗೆ ಅವರ ಜವಾಬ್ದಾರಿಯ ಕೀಲಿ ಕೈ ನೀಡುವುದರ ಮುಖಾಂತರ ವಿಶಿಷ್ಟವಾಗಿ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಲಾಯಿತು.
ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಾಕಿನ್ ಬಿನ್ ರವರು ಆಯ್ಕೆಯಾದ ವಿದ್ಯಾರ್ಥಿ ನಾಯಕರುಗಳಿಗೆ ಪ್ರತಿಜ್ಞಾ ವಿಧಿಯನ್ನು ಭೋದಿಸಿ ಅವರ ಜವಾಬ್ದಾರಿಯನ್ನು ಮತ್ತು ಶಾಲಾ ಬೆಳವಣಿಗೆಯಲ್ಲಿ ಅವರ ಪಾತ್ರವನ್ನು ಮನವರಿಕೆ ಮಾಡಿಸಿದರು.


2026-27 ನೇ ಸಾಲಿನ ವಿದ್ಯಾರ್ಥಿ ಸಂಘದ ನಾಯಕನಾಗಿ ಮೊಹಮ್ಮದ್ ಝಿಯಾದ್, ಶಿಸ್ತು ಮಂತ್ರಿಯಾಗಿ ಮಹಮ್ಮದ್ ಇನ್ಫಾಝ್, ಕ್ರೀಡಾ ಮಂತ್ರಿಯಾಗಿ ಯಜ್ಙೇಶ್, ಸ್ವಚ್ಛತಾ ಮಂತ್ರಿಯಾಗಿ ನಿಶಾನ್ , ಗ್ರಂಥಾಲಯದ ಮಂತ್ರಿಯಾಗಿ ಮಹಮ್ಮದ್ ತೌಶಿಕ್, ಸಾಂಸ್ಕೃತಿಕ ಮಂತ್ರಿಯಾಗಿ ಮಹಮ್ಮದ್ ಅನಾಸ್, ಶಿಕ್ಷಣ ಮಂತ್ರಿಯಾಗಿ ಅಪ್ಸಾನ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು.

ಸಹಶಿಕ್ಷಕಿಯರಾದ ಶ್ರೀಮತಿ ಯಶಸ್ವಿನಿ ಕಾರ್ಯಕ್ರಮವನ್ನು ನಿರೂಪಿಸಿ, ಮನಶಾಸ್ತ್ರಜ್ಞೆ ಆಶುರಾ ಫಾಯಿಝ ಅಥಿತಿಗಳನ್ನು ಸ್ವಾಗತಿಸಿದರು. ಶಿಕ್ಷಕಿ ಶಿರಿನ್ ಭಾನು ವಂದಿಸಿದರು.

Related posts

ಉಜಿರೆ: ಬೆನಕ ಆಸ್ಪತ್ರೆಯಲ್ಲಿ ಫಿಲಿಪ್ಸ್ ಅಫಿನಿಟಿ-70 ಅಲ್ಟ್ರಾ ಸೌಂಡ್ ಸೇವೆ ಲೋಕಾರ್ಪಣೆ

Suddi Udaya

ದ.ಕ ಜಿಲ್ಲಾ ಖಾಝಿ ಫಝಲ್ ಕೋಯಮ್ಮ ಕೂರ ತಂಙಲ್ ನಿಧನ

Suddi Udaya

ಮದ್ದಡ್ಕ: ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಪದ್ಮುಂಜ ಹಾ.ಉ.ಸ‌. ಸಂಘದ ಮಾಜಿ ನಿರ್ದೇಶಕ ಪೂವನಿ ಗೌಡ ರವರಿಗೆ ಸಹಕಾರಿ ಸಪ್ತಾಹದಲ್ಲಿ ಕ್ಷೀರ ರತ್ನ ಪ್ರಶಸ್ತಿ

Suddi Udaya

ಕರ್ನಾಟಕ ಮುಸ್ಲಿಮ್ ಜಮಾಅತ್ (ಕೆ.ಎಂ.ಜೆ) ಗುರುವಾಯನಕೆರೆ ಸರ್ಕಲ್‌ನ ನೂತನ ಸಮಿತಿ ರಚನೆ

Suddi Udaya

ನವೀಕೃತ ಉಜಿರೆ ಸಂತ ಅಂತೋನಿ ಚರ್ಚ್ ಉದ್ಘಾಟನೆ : ದಾನಿಗಳಿಗೆ ಗೌರವಾರ್ಪಣೆ

Suddi Udaya
error: Content is protected !!