28.6 C
ಪುತ್ತೂರು, ಬೆಳ್ತಂಗಡಿ
September 19, 2026
ಧಾರ್ಮಿಕಪ್ರಮುಖ ಸುದ್ದಿಬೆಳ್ತಂಗಡಿವರದಿ

ಯಕ್ಷ ಭಾರತಿಯಿಂದ ಯಕ್ಷಗಾನ ತಾಳಮದ್ದಳೆ

ಧರ್ಮಸ್ಥಳ: ಜೂ.18ರಂದು ಕನ್ಯಾಡಿಯ “ಆಧೀಶ್ ವಸತಿ ಗ್ರಹ”ದ ಸಭಾಮಂಟಪದಲ್ಲಿ ಪ್ರೇಮಲತಾ ಜೈನ್ ಅವರ 70ನೇ ಜನ್ಮದಿನೋತ್ಸವದ ಅಂಗವಾಗಿ ಯಕ್ಷ ಭಾರತಿ ತಂಡದಿಂದ ಯಕ್ಷಗಾನ ತಾಳಮದ್ದಳೆ “ಹೊಂಬುಜ ಕ್ಷೇತ್ರ ಮಹಾತ್ಮೆ” ನಡೆಯಿತು.

ಹಿಮ್ಮೇಳದಲ್ಲಿ ಭಾಗವತರಾಗಿ ಮಹೇಶ್ ಕನ್ಯಾಡಿ , ಚೆಂಡೆ ಮದ್ದಳೆಯಲ್ಲಿ ಶಿತಿಕಂಠ ಭಟ್ ಉಜಿರೆ, ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ, ಪುರಂದರ ಬಜಿಲ, ಕೌಸ್ತುಭ ಕನ್ಯಾಡಿ ಸಹಕರಿಸಿದರು.

ಮುಮ್ಮೇಳದಲ್ಲಿ ಸಾಕಾರ ರಾಜನಾಗಿ ಸುರೇಶ ಕುದ್ರೆಂತ್ತಾಯ ಉಜಿರೆ, ಮಾರಿದತ್ತನಾಗಿ ಚಂದ್ರಶೇಖರ ಧರ್ಮಸ್ಥಳ, ಪದ್ಮಿನಿಯಾಗಿ ಈಶ್ವರ ಪ್ರಸಾದ ಪಿವಿ, ಜಿನದತ್ತನಾಗಿ ಹರಿದಾಸ ಗಾಂಭೀರ ಧರ್ಮಸ್ಥಳ, ಪಾಚಕನಾಗಿ ಶಶಿಧರ ಕನ್ಯಾಡಿ, ಶ್ರೀಯಲೆಯಾಗಿ ದಿವಾಕರ ಆಚಾರ್ಯ ಗೇರುಕಟ್ಟೆ, ಸಿದ್ದಾಂತ ಕೀರ್ತಿ ಮುನಿಗಳಾಗಿ ಮಹಾವೀರ ಪಾಂಡಿ ಕಾಂತಾವರ ಪಾತ್ರ ನಿರ್ವಹಿಸಿದರು.
ತಾಳಮದ್ದಲೆಯನ್ನು ಪ್ರಾಯೋಜಿಸಿದ ಪದ್ಮಪ್ರಸಾದ್ ಜೈನ್ ಮತ್ತು ಅವರ ಶ್ರೀಮತಿ ಅವರನ್ನು ಯಕ್ಷಭಾರತಿ ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ಯಕ್ಷಭಾರತಿಯ ಪದಾಧಿಕಾರಿಗಳು ಮತ್ತು ಟ್ರಸ್ಟಿಗಳು ಉಪಸ್ಥಿತರಿದ್ದರು.

Related posts

ಪಡಂಗಡಿ ಗ್ರಾ.ಪಂ ನಲ್ಲಿ ಮಕ್ಕಳ ಗ್ರಾಮ ಸಭೆ

Suddi Udaya

ನಾವೂರು ಗ್ರಾ.ಪಂ. ಕಾಯಿದೆ ಮತ್ತು ಮಕ್ಕಳ ಹಕ್ಕುಗಳ ಭಿತ್ತಿಪತ್ರ ಬಿಡುಗಡೆ

Suddi Udaya

ಅರಸಿನಮಕ್ಕಿ: ವೀಸಾ ಕೊಡಿಸುವುದಾಗಿ ನಂಬಿಸಿ ರೂ. 2.50 ಲಕ್ಷ ವಂಚನೆ-ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಬಳ್ಳಮಂಜ – ಮಾಯಿಲೋಡಿ ಸಂಪರ್ಕಿಸುವ ರಸ್ತೆಯಲ್ಲಿ ಗುಡ್ಡ ಕುಸಿತ: ರಸ್ತೆಗೆ ಬೀಳುವ ಸ್ಥಿತಿಯಲ್ಲಿದೆ ಮರ

Suddi Udaya

ಬೈಲಂಗಡಿ ಶ್ರೀ ಸೋಮನಾಥೇಶ್ವರ ಭಜನಾ ತಂಡದಿಂದ ಧಾರ್ಮಿಕ ಕ್ಷೇತ್ರಗಳ ಪ್ರವಾಸ

Suddi Udaya

ಕಲ್ಮಂಜ: ಸೀತಾ ಪಟವರ್ಧನ್ ನಿಧನ

Suddi Udaya
error: Content is protected !!