September 25, 2026
ಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಬಳಂಜ: ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯಿಂದ ಪುಸ್ತಕ- ವಿದ್ಯಾರ್ಥಿ ವೇತನ ವಿತರಣೆ, ಸಾಧಕರಿಗೆ ಸನ್ಮಾನ, ತರಬೇತಿ ಕಾರ್ಯಾಗಾರ – ಶೈಕ್ಷಣಿಕ ಸಾಧ‌ನೆಗೆ ಇಚ್ಚಾಶಕ್ತಿ ಮತ್ತು ಬದ್ದತೆ ಮುಖ್ಯ: ದಾಸಪ್ಪ ಪೂಜಾರಿ

ಬೆಳ್ತಂಗಡಿ: ವಿದ್ಯಾರ್ಥಿಗಳು ಇಚ್ಚಾಶಕ್ತಿ ಮತ್ತು ಬದ್ದತೆಯಿಂದ ಶಿಕ್ಷಣ ಪಡೆದಾಗ ಮಾತ್ರ ಶೈಕ್ಷಣಿಕ ಸಾಧನೆ ಮಾಡಲು ಸಾಧ್ಯವಿದೆ. ಶ್ರದ್ಧೆ, ಪರಿಶ್ರಮ ಹಾಗೂ ಆತ್ಮವಿಶ್ವಾಸದಿಂದ ಮುನ್ನಡೆದರೆ ವಿದ್ಯಾರ್ಥಿಗಳಿಗೆ ಯಶಸ್ಸು ಖಚಿತ’ ಎಂದು ನಿವೃತ ಸೈನಿಕ ದಾಸಪ್ಪ ಪೂಜಾರಿ ಎನ್. ಹೇಳಿದರು.

ಅವರು ಜೂ.21ರಂದು ಬಳಂಜ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿ, ಯುವ ಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆಯಿಂದ ಆಯೋಜಿಸಲಾದ ಧತ್ತಿನಿಧಿಯ ಪ್ರಯುಕ್ತ ಪುಸ್ತಕ ವಿತರಣೆ, ವಿದ್ಯಾರ್ಥಿ ವೇತನ, ಶೈಕ್ಷಣಿಕ ಸಾಧಕರಿಗೆ ಸನ್ಮಾನ ಹಾಗೂ ತರಬೇತಿ ಕಾರ್ಯಾಗಾರದ ಸಮಾರಂಭದಲ್ಲಿ ಉಪಯುಕ್ತ ಮಾಹಿತಿ ನೀಡಿದರು.

ಉತ್ತಮವಾದ ಶಿಕ್ಷಣದ ಮೂಲಕ ಸಮಾಜವನ್ನು ಬದಲಾಯಿಸಬಹುದು. ಹಾಗಾಗಿ ಎಲ್ಲರೂ ಶಿಕ್ಷಿತರಾಗಬೇಕು. ಸರಕಾರಿ ಉದ್ಯೋಗ, ಸೇನೆಗೆ ಸೇರಲಿಚ್ಚಿಸುವ ವಿದ್ಯಾರ್ಥಿಗಳಿಗೆ ನಾನು ಪೂರ್ಣ ಪ್ರಮಾಣದ ಸಹಕಾರ ನೀಡಲು ಬದ್ದನಾಗಿದ್ದೇನೆ ಎಂದರು.

ಮಂಗಳೂರು ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್ ಕೆ. ಪಾಂಡವರಕಲ್ಲು ಮಾತನಾಡಿ ಸಾಮಾಜಿಕ ವ್ಯವಸ್ಥೆಯಲ್ಲಿ ಆರೋಗ್ಯಪೂರ್ಣ ಜೀವನ ರೂಪಿಸಲು ಸರಳ ಉಪಕ್ರಮಗಳನ್ನು ತನ್ನ ಜೀವನಮುಖಿ ಸಂದೇಶದ ಮೂಲಕ ತೋರಿಸಿಕೊಟ್ಟವರು ಬ್ರಹ್ಮಶ್ರೀ ನಾರಾಯಣಗುರುಗಳು. ಉದ್ಯೋಗ, ಶಿಕ್ಷಣ ಮೂಲಕ ಸಮುದಾಯ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಬಹುದು ಎಂದರು.

ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಸಂತೋಷ್ ಪಿ.ಕೋಟ್ಯಾನ್ ಅಧ್ಯಕ್ಷತೆ ವಹಿಸಿ ಮಾತನಾಡಿ ಶಿಕ್ಷಣ ಜೊತೆ ಜೊತೆಗೆ ಜೀವನ ಮೌಲ್ಯವನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಪ್ರಯತ್ನವನ್ನು ಸಂಘದಿಂದ ಕೈಗೊಳ್ಳಲಾಗಿದೆ. ಇಲ್ಲಿ ಪುಸ್ತಕ ಪಡೆದ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಸಮಾಜಕ್ಕೆ ಆಸ್ತಿಯಾಗಬೇಕೆಂದರು.

ವೇದಿಕೆಯಲ್ಲಿ ಶಿಕ್ಷಕಿ ಆರತಿ ಕಲ್ಲಡ್ಕ, ಸಂಘದ ಗೌರವಾಧ್ಯಕ್ಷ ಹೆಚ್.ಧರ್ಣಪ್ಪ ಪೂಜಾರಿ, ಕಾರ್ಯದರ್ಶಿ ರಂಜಿತ್ ಪೂಜಾರಿ, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಶರತ್ ಅಂಚನ್, ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ಭಾರತಿ ಸಂತೋಷ್ ಉಪಸ್ಥಿತರಿದ್ದರು.

ಸಂಘದ ಉಪಾಧ್ಯಕ್ಷ ಕೃಷ್ಣಪ್ಪ ಪೂಜಾರಿ ಬೊಂಟ್ರೋಟ್ಟು, ನಿರ್ದೇಶಕರಾದ ದಿನೇಶ್ ನಿಟ್ಟಡ್ಕ, ದೀಪಕ್ ಹೆಚ್.ಡಿ ನಾಲ್ಕೂರು, ದಿನೇಶ್ ಪೂಜಾರಿ ಅಂತರ, ಸಂತೋಷ್ ಕುಮಾರ್ ಹಿಮರಡ್ಡ, ಮನೋಹರ್ ಬಳಂಜ, ವಿಜಯ್ ಯೈಕುರಿ, ಪ್ರವೀಣ್ ಕೋಟ್ಯಾನ್ ದರ್ಖಾಸು, ರತ್ನಾಕರ ಪೂಜಾರಿ ಕೆಂಪುಂರ್ಜ, ಜಗದೀಶ್ ಬಳ್ಳಿದಡ್ಡ, ಮಾಜಿ ಅಧ್ಯಕ್ಷರಾದ ಶಾಂತಪ್ಪ ಸುವರ್ಣ, ಬಾಲಕೃಷ್ಣ ಪೂಜಾರಿ, ತಿಮ್ಮಪ್ಪ ಪೂಜಾರಿ, ಯ.ಬಿ.ವೇ ಕಾರ್ಯದರ್ಶಿ ಸತೀಶ್ ಕೋಟ್ಯಾನ್ ಹುಂಬೆಜೆ, ಮ.ಬಿ.ವೇ ಕಾರ್ಯದರ್ಶಿ ಸಂಧ್ಯಾ ಹೆಚ್.ಡಿ ಹಾಗೂ ಸಂಘದ ಸದಸ್ಯರು ಸಹಕರಿಸಿದರು.

ಮಹಿಳಾ ಬಿಲ್ಲವ ವೇದಿಕೆ ಮಾಜಿ‌ ಅಧ್ಯಕ್ಷೆ ವಿಶಾಲ ಜಗದೀಶ್ ನಿರೂಪಿಸಿ, ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ಸ್ವಾಗತಿಸಿ, ಕೋಶಾಧಿಕಾರಿ ಪ್ರವೀಣ್ ಕುಮಾರ್ ಹೆಚ್.ಎಸ್ ವಂದಿಸಿದರು. ವಿದ್ಯಾರ್ಥಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.


ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ: ಸಂಘದ ವತಿಯಿಂದ ಈ ಬಾರಿಯ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ಬಿಂದ್ಯಾಶ್ರೀ, ಹರ್ಷಿತಾ, ಪೃಥ್ವಿ, ಪ್ರಣಾಮ್ ಜಗದೀಶ್ ಇವರನ್ನು ಸನ್ಮಾನಿಸಲಾಯಿತು. ಶೇ 90ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು. ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಧತ್ತಿನಿಧಿಯಿಂದ ಪುಸ್ತಕ ವಿತರಣೆ ಮಾಡಲಾಯಿತು.

Related posts

ಶಿಶಿಲ ಗ್ರಾ.ಪಂ ನಲ್ಲಿ ಕಸ್ತೂರಿರಂಗನ್ ವಿರೋಧಿಸುವ ಬಗ್ಗೆ ಪೂರ್ವಭಾವಿ ಸಭೆ

Suddi Udaya

ಧರ್ಮಸ್ಥಳ: ಟಾಟಾ ಸುಮೋ ಹಾಗೂ ಸ್ಕೂಟಿ ನಡುವೆ ರಸ್ತೆ ಅಪಘಾತ: ಸ್ಕೂಟಿ ಸವಾರ ಗಂಭೀರ ಗಾಯ

Suddi Udaya

ಉಜಿರೆಯಲ್ಲಿ ಸಂವಿಧಾನ ರಕ್ಷಣೆ ಹಾಗೂ ಅಂಬೇಡ್ಕ‌ರ್ ಭವನ ನಿರ್ಮಾಣಕ್ಕಾಗಿ ಸಂಘಟಿತ ಹೋರಾಟಕ್ಕೆ ಕರೆ: ನೂತನ ಸಮಿತಿ ರಚನೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯ ವಿದ್ಯಾರ್ಥಿಗಳಿಗೆ ಪ್ರತಿಭಾ ಕಲೋತ್ಸವ ಸ್ಪರ್ಧೆಯಲ್ಲಿ ಬಹುಮಾನ

Suddi Udaya

ಬರೆಂಗಾಯ ನಿವಾಸಿ ನಾರಾಯಣ ಎಂ.ಕೆ ಅಸೌಖ್ಯದಿಂದ ನಿಧನ

Suddi Udaya

ದ. ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 4ನೇ ಜಿಲ್ಲಾ ಸಮ್ಮೇಳನ: ಡಾ.ಹೆಗ್ಗಡೆಯವರಿಂದ ಸಮ್ಮೇಳನದ ಲಾಂಛನ ಬಿಡುಗಡೆ

Suddi Udaya
error: Content is protected !!