30.5 C
ಪುತ್ತೂರು, ಬೆಳ್ತಂಗಡಿ
September 21, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೊಲ್ಪಾಡಿ ಸ. ಕಿ. ಪ್ರಾ. ಶಾಲಾ ಮಂತ್ರಿ ಸಂಸತ್ ಚುನಾವಣೆ

ಬೆಳಾಲು: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಲ್ಪಾಡಿ ಯ ಶಾಲಾ ಸಂಸತ್ ಚುನಾವಣೆಯನ್ನು ವಿದ್ಯುನ್ಮಾನ ಮತಯಂತ್ರ ದ ಮಾದರಿಯಲ್ಲಿ ನಡೆಸಲಾಯಿತು.

ಶಾಲಾ ಮಕ್ಕಳಿಗೆ ಚುನಾವಣೆ ವ್ಯವಸ್ಥೆಯನ್ನು ಪರಿಚಯಿಸುವ ದೃಷ್ಟಿಯಿಂದ ಚುನಾವಣೆ ಪ್ರಕ್ರಿಯೆಯಲ್ಲಿ ನಡೆಸುವ ಎಲ್ಲಾ ಹಂತಗಳನ್ನು ಅನುಸರಿಸಲಾಯಿತು. ನಾಮಪತ್ರ ಸಲ್ಲಿಕೆ, ಪರಿಶೀಲನೆ, ಪ್ರಚಾರ, ಮತಗಟ್ಟೆ, ಸರತಿ ಸಾಲು, ಪೊಲೀಸ್ ವ್ಯವಸ್ಥೆ,ಮತಯಂತ್ರ, ಅಳಿಸಲಾಗದ ಶಾಯಿ ಬಳಕೆ, ಫಲಿತಾಂಶ ಘೋಷಣೆ ಇತ್ಯಾದಿ ಅಂಶಗಳ ಪ್ರಾತ್ಯಕ್ಷಿಕ ಮಾಹಿತಿ ನೀಡಲಾಯಿತು.

ಶಾಲಾ ಮುಖ್ಯಮಂತ್ರಿಯಾಗಿ 5ನೇ ತರಗತಿಯ ರಿಷಿಕಾ, ಉಪ ಮುಖ್ಯಮಂತ್ರಿಯಾಗಿ ಜೀವಿತ್ (5ನೇ), ವಿರೋಧ ಪಕ್ಷದ ನಾಯಕಿ ಯಾಗಿ ಅನುಷಾ(5ನೇ) ಆಯ್ಕೆಯಾದರು. ಉಳಿದಂತೆ ಶಾಲಾ ಶಿಕ್ಷಣ ಮತ್ತು ಆರೋಗ್ಯ ಮಂತ್ರಿಯಾಗಿ ಪ್ರೀತಮ್(5ನೇ), ಕ್ರೀಡಾ ಮಂತ್ರಿಯಾಗಿ ಅದ್ವಿತ್(5ನೇ), ನೀರಾವರಿ ಮಂತ್ರಿ ಯಾಗಿ ಅಭೀಷ್(4ನೇ) ಆಯ್ಕೆಯಾದರು. ಗ್ರಂಥಾಲಯ ಮತ್ತು ಸ್ವಚ್ಛತಾ ಮಂತ್ರಿಗಳ ಹೆಚ್ಚುವರಿ ಜವಾಬ್ದಾರಿಯನ್ನು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗೆ ವಹಿಸಲಾಯಿತು. ಚುನಾವಣೆ ಪ್ರಕ್ರಿಯೆಯಲ್ಲಿ ಶಾಲಾ ಶಿಕ್ಷಕರು ನಡೆಸಿಕೊಟ್ಟರು.

Related posts

ಖಾಸಗಿ ವಿದ್ಯುತ್ ಉತ್ಪಾದನಾ ಕಂಪೆನಿಯ ವಯರ್ ನಲ್ಲಿ‌ ರಾತ್ರಿ ಕಾಣಿಸಿಕೊಂಡ ಬೆಂಕಿ: ತಪ್ಪಿದ ಭಾರೀ ಅನಾಹುತ

Suddi Udaya

ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಆಯುರ್ವೇದ ಕೇಂದ್ರ ನಿರ್ಮಾಣ ಕಾಮಗಾರಿಗೆ ಬಿಲ್ಲವ ಸಮಾಜದ ಉದ್ಯಮಿಗಳ ಸಹಕಾರ ಅಗತ್ಯ : ದಯಾನಂದ ಬೊಂಟ್ರ

Suddi Udaya

ಎಸ್.ಡಿ.ಎಂ. ಕಾಲೇಜಿನಲ್ಲಿ ರೋವರ್ಸ್ & ರೇಂಜರ್ಸ್ ಸಂಬಂಧಿತ ‘ವಸ್ತುಪ್ರದರ್ಶನ’, ‘ಅಂತರ್ ತರಗತಿ ಸ್ಪರ್ಧೆ’ ಪ್ರಮುಕ’23 ಸಮಾರೋಪ

Suddi Udaya

ನಾವೂರು: ವಾಲ್ಟರ್ ಪಾಯಸ್ ನಿಧನ

Suddi Udaya

ಬೆಳ್ತಂಗಡಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಜೇಮ್ಸ್ ಪಟ್ಟೇರಿಲ್ ರವರಿಗೆ ಪ್ರೇರಣಾ ಸೌಹಾರ್ದ ಸಹಕಾರಿ ಸಂಘದಿಂದ ಗೌರವಾರ್ಪಣೆ

Suddi Udaya

ಬಳಂಜ: ಛದ್ಮವೇಷ ಸ್ಪರ್ಧೆಯಲ್ಲಿ ಸತತ ಪ್ರಶಸ್ತಿ ಪಡೆದ ಬಳಂಜ ಶಾಲಾ ವಿದ್ಯಾರ್ಥಿ ಸಮ್ಯಕ್ ಜೈನ್

Suddi Udaya
error: Content is protected !!