September 25, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅರುಣ್ ಕಿಲ್ಲೂರು ಅವರ ವಿವಿಧ ಹೂಡಿಕೆ ಕುರಿತ ‘Zero to Crore’ ಕೃತಿ ಬಿಡುಗಡೆ

ಬೆಳ್ತಂಗಡಿ: ಮಿತ್ತಬಾಗಿಲು ಗ್ರಾಮದ ಪತ್ರಕರ್ತ, ಲೇಖಕ, ವೃತ್ತಿಪರ ಛಾಯಾಗ್ರಾಹಕ, ಕೃಷಿಕ ಹಾಗೂ ಷೇರು ಮಾರುಕಟ್ಟೆ ಹೂಡಿಕೆದಾರರಾದ ಅರುಣ್ ಕಿಲ್ಲೂರು ಅವರ ಮೂರನೇ ಕೃತಿ ‘Zero to Crore’ ಇದೇ ಜೂನ್ 28ರಂದು ವೀರಲೋಕ ಪಬ್ಲಿಕೇಷನ್ಸ್ ವತಿಯಿಂದ ತುಮಕೂರಿನಲ್ಲಿ ಆಯೋಜಿಸಿರುವ ‘ಪುಸ್ತಕ ಸಂತೆ’ ಕಾರ್ಯಕ್ರಮದಲ್ಲಿ ಬಿಡುಗಡೆಯಾಗಲಿದೆ.

ದಶಕಕ್ಕೂ ಹೆಚ್ಚು ಕಾಲ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಅರುಣ್ ಕಿಲ್ಲೂರು ಅವರು ಸಮಾಜದ ನಾಡಿಮಿಡಿತವನ್ನು ಅರಿತು ತಮ್ಮ ಬರಹಗಳ ಮೂಲಕ ಓದುಗರ ಮನಸ್ಸು ತಲುಪುವಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದಾರೆ. ಬರವಣಿಗೆಯ ಜೊತೆಗೆ ಛಾಯಾಗ್ರಾಹಕರಾಗಿ ಪ್ರಕೃತಿಯ ಸೊಬಗು, ಗ್ರಾಮೀಣ ಬದುಕಿನ ಸರಳತೆ ಹಾಗೂ ಬದುಕಿನ ಅಪರೂಪದ ಕ್ಷಣಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿಯುವ ಅಭಿರುಚಿ ಹೊಂದಿದ್ದಾರೆ. ಕೃಷಿಕರಾಗಿಯೂ ಗುರುತಿಸಿಕೊಂಡಿರುವ ಅವರು ಮಣ್ಣಿನೊಂದಿಗೆ ನಂಟು ಬೆಳೆಸಿಕೊಂಡು ಬದುಕಿನ ವಾಸ್ತವತೆಗಳನ್ನು ಹತ್ತಿರದಿಂದ ಅರಿತಿದ್ದಾರೆ.

ಹೂಡಿಕೆ ಮತ್ತು ಆರ್ಥಿಕ ಜ್ಞಾನದ ಕುರಿತಾಗಿ ರಚಿತವಾಗಿರುವ ‘Zero to Crore’ ಕೃತಿಯು ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್, ದೀರ್ಘಕಾಲೀನ ಹೂಡಿಕೆ, ಸಂಪತ್ತಿನ ಸೃಷ್ಟಿ, ಹಣಕಾಸಿನ ಶಿಸ್ತು ಹಾಗೂ ಆರ್ಥಿಕ ಸ್ವಾತಂತ್ರ್ಯದ ಮಹತ್ವವನ್ನು ಸರಳ ಮತ್ತು ಪ್ರಾಯೋಗಿಕ ರೀತಿಯಲ್ಲಿ ಪರಿಚಯಿಸುತ್ತದೆ. ಹೂಡಿಕೆ ಆರಂಭಿಸಲು ಬಯಸುವವರು, ಹೊಸ ಹೂಡಿಕೆದಾರರು ಹಾಗೂ ಹಣಕಾಸಿನ ಜ್ಞಾನವನ್ನು ವೃದ್ಧಿಸಿಕೊಳ್ಳಲು ಬಯಸುವ ಎಲ್ಲರಿಗೂ ಈ ಕೃತಿ ಮಾರ್ಗದರ್ಶಕವಾಗಲಿದೆ.

ಅರುಣ್ ಕಿಲ್ಲೂರು ಅವರ ಮೊದಲ ಕೃತಿ ‘ಫೀನಿಕ್ಸ್’ ಫೀನಿಕ್ಸ್ ಮಂದಾರ ಪಬ್ಲಿಕೇಷನ್ಸ್ ಮೂಲಕ ಪ್ರಕಟವಾಗಿದ್ದು, ಎರಡನೇ ಕೃತಿ ‘ಶ್ರೀಮಂತರಗೋಣ ಬನ್ನಿ’ ವೀರಲೋಕ ಪಬ್ಲಿಕೇಷನ್ಸ್ ಮೂಲಕ ಓದುಗರಿಗೆ ತಲುಪಿದೆ. ಇದೀಗ ಅವರ ಮೂರನೇ ಕೃತಿ ‘Zero to Crore’ ಕೂಡ ವೀರಲೋಕ ಪಬ್ಲಿಕೇಷನ್ಸ್ ವತಿಯಿಂದ ಬಿಡುಗಡೆಯಾಗುತ್ತಿರುವುದು ವಿಶೇಷ.

ಷೇರು ಮಾರುಕಟ್ಟೆಯ ಕಾರ್ಯವೈಖರಿ, ಯಶಸ್ವಿ ಹೂಡಿಕೆಯ ತತ್ವಗಳು, ವಿವಿಧ ಹೂಡಿಕೆ ವಿಧಾನಗಳು ಹಾಗೂ ಸಂಪತ್ತಿನ ನಿರ್ಮಾಣದ ಸೂತ್ರಗಳನ್ನು ಸರಳವಾಗಿ ವಿವರಿಸುವ ಈ ಕೃತಿ, ಓದುಗರಲ್ಲಿ ಹೂಡಿಕೆ ಜಾಗೃತಿ ಮೂಡಿಸಿ ಆರ್ಥಿಕ ಬೆಳವಣಿಗೆಯತ್ತ ಹೆಜ್ಜೆ ಇಡಲು ಪ್ರೇರೇಪಿಸುತ್ತದೆ.

ಪುಸ್ತಕವನ್ನು ಮುಂಗಡವಾಗಿ (Pre-Order) ಬುಕ್ ಮಾಡಬಹುದಾಗಿದ್ದು, ಆಸಕ್ತರು ವೀರಲೋಕ ಪಬ್ಲಿಕೇಷನ್ಸ್ ಅನ್ನು ಸಂಪರ್ಕಿಸಬಹುದು.

Related posts

ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಯಾತ್ರಿ ನಿವಾಸ ಸಮುದಾಯ ಭವನದ ಆಯುರ್ವೇದಿಕ್ ಕೇಂದ್ರದ ಕಾಮಗಾರಿ

Suddi Udaya

ಉರುವಾಲು ಶ್ರೀ ಭಾರತೀ ವಿದ್ಯಾಸಂಸ್ಥೆಗೆ ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಭೇಟಿ

Suddi Udaya

ಬೆಳ್ತಂಗಡಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವತಿಯಿಂದ ಡಾ. ಎಸ್.ಎಲ್.ಬೈರಪ್ಪರವರಿಗೆ ನುಡಿನಮನ

Suddi Udaya

ಕಳಿಯ ಗ್ರಾ.ಪಂ.ನಲ್ಲಿ ಕಾವಲು ಸಮಿತಿ ಸಭೆ

Suddi Udaya

ಮದ್ದಡ್ಕ ಸಮೀಪದ ನೇರಳಕಟ್ಟೆಯಲ್ಲಿ ಬೈಕ್ ಮತ್ತು ಅಕ್ಟೀವಾ ಡಿಕ್ಕಿ: ಸವಾರರು ಪ್ರಾಣಾಪಾಯದಿಂದ ಪಾರು

Suddi Udaya

ಬೆಳ್ತಂಗಡಿ ತಾಲೂಕಿನ ಗ್ರಾಮ ಪಂಚಾಯಿತಿಗಳ ಎರಡನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ನಿಗದಿ ಕಾರ್ಯಕ್ರಮ

Suddi Udaya
error: Content is protected !!