September 25, 2026
ತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿಲೈಫ್‌ಸ್ಟೈಲ್‌ವರದಿ

ಟೀನ್ ಮಿಸ್ ಹಾಗೂ ಮಿಸೆಸ್ ಇಂಡಿಯಾ ಕರ್ನಾಟಕ ಸೌಂದರ್ಯ ಸ್ಪರ್ಧೆ : ಫಸ್ಟ್ ರನ್ನರ್ ಆಫ್ ಕಿರೀಟ ಮುಡಿಗೇರಿಸಿಕೊಂಡ ಅರಸಿನಮಕ್ಕಿಯ ಸನುಷ

ಬೆಳ್ತಂಗಡಿ: ಮಂಗಳೂರಿನ ಬೋಳೂರಿನಲ್ಲಿ ನಡೆದ ಪಾಥ್ ವೇ ಎಂಟ‌ರ್ಪ್ರೈಸಸ್ ಹಾಗೂ ಮರ್ಸಿ ಬ್ಯೂಟಿ ಅಕಾಡೆಮಿ ಸಹಯೋಗದಲ್ಲಿ ಆಯೋಜಿಸಲಾದ ಏಳನೇ ಆವೃತ್ತಿಯ ಟೀನ್ ಮಿಸ್ ಹಾಗೂ ಮಿಸೆಸ್ ಇಂಡಿಯಾ ಕರ್ನಾಟಕ ಸೌಂದರ್ಯ ಸ್ಪರ್ಧೆಯಲ್ಲಿ ಅರಸಿನಮಕ್ಕಿಯ ಸನುಷ ಅವರು ಫಸ್ಟ್ ರನ್ನರ್ ಆಫ್ ಕಿರೀಟ ಮುಡಿಗೇರಿಸಿಕೊಂಡು ಮುಂದಿನ ಹಂತದ ಇಂಟರ್‌ನ್ಯಾಷನಲ್ ಲೆವೆಲ್ ಸೌಂದರ್ಯ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಇವರು ಅರಸಿನಮಕ್ಕಿಯ ಸೌಮ್ಯ ಮತ್ತು ರಾಜನ್ ದಂಪತಿಯ ಪುತ್ರಿ ಯಾಗಿದ್ದು ಪ್ರಸ್ತುತ ಕೊಕ್ಕಡದ ಸೈಂಟ್ ಫ್ರಾನ್ಸಿಸ್ ಪಿ.ಯು. ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ 17 ವರ್ಷದ ಸನುಷ, ನೃತ್ಯ, ಕ್ರೀಡೆ ಹಾಗೂ ಮಾಡಲಿಂಗ್ ಕ್ಷೇತ್ರಗಳಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಮಾಡೆಲಿಂಗ್ ಅವರ ನೆಚ್ಚಿನ ಹವ್ಯಾಸವಾಗಿದ್ದು, ತಮ್ಮ ಪ್ರತಿಭೆ ಮತ್ತು ಪರಿಶ್ರಮದ ಮೂಲಕ ಈ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ.


ರಾಜ್ಯ ಮಟ್ಟದ ಈ ಸ್ಪರ್ಧೆಯಲ್ಲಿ ಮೂರು ವಿಭಾಗಗಳಿಂದ ಒಟ್ಟು 35 ಸ್ಪರ್ಧಿಗಳು ಭಾಗವಹಿಸಿದ್ದು, ಟೀನ್ ವಿಭಾಗದಲ್ಲಿ ಸನುಷ ಅವರು ಟಾಪ್-10 ಫೈನಲಿಸ್ಟ್ ಆಗಿ ಗ್ರಾಂಡ್ ಫಿನಾಲೆಗೆ ಆಯ್ಕೆಯಾಗಿದ್ದರು. ಗ್ರಾಂಡ್ ಫಿನಾಲೆಯಲ್ಲಿ ಟ್ರಡಿಷನಲ್ ರೌಂಡ್, ವೆಸ್ಟರ್ನ್ ರೌಂಡ್, ಟ್ಯಾಲೆಂಟ್ ರೌಂಡ್ ಪರಿಚಯ ಹಾಗೂ ಪ್ರಶೋತ್ತರ ಸುತ್ತುಗಳ ಮೂಲಕ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಯಿತು. ಈ ಎಲ್ಲ ಸುತ್ತುಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ತೀರ್ಪುಗಾರರ ಮೆಚ್ಚುಗೆ ಗಳಿಸಿ ಫಸ್ಟ್ ರನ್ನರ್ ಆಫ್ ಸ್ನಾನವನ್ನು ತಮ್ಮದಾಗಿಸಿಕೊಂಡರು.

ಪ್ರತಿಭಾ ಕಾರಂಜಿ ಪ್ರೌಢಶಾಲಾ ವಿಭಾಗದಲ್ಲಿ ತಾಲೂಕು ಮಟ್ಟದಲ್ಲಿ ಪುಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದರು. ಕಾಲೇಜು ವಿಭಾಗದಲ್ಲಿ ತಾಲೂಕು ಮಟ್ಟದ ಸ್ಪೋರ್ಟ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಶಾಲಾ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ‘ಕಲಾ ತಿಲಕ’ ಪ್ರಶಸ್ತಿಯನ್ನು ಪಡೆದು ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ. ಸೌಂದರ್ಯ ಸ್ಪರ್ಧೆಗೆ ಮಂಗಳೂರಿನ ಪ್ರಸಿದ್ದ ಮಾಡೆಲಿಂಗ್ ತರಬೇತಿ ಸಂಸ್ಥೆ ಪಾತ್ ವೇನಲ್ಲಿ ದೀಪಕ್ ಗಂಗೂಲಿ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿದ್ದರು.

ಮುಂದಿನ ದಿನಗಳಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಉತ್ತಮ ಸಾಧನೆ ಮಾಡಬೇಕೆಂಬ ಕನಸನ್ನು ಹೊಂದಿರುವ ಸನುಷ ಅವರ ಜೀವನದ ಪ್ರಮುಖ ಗುರಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವುದು ಆಗಿದೆ. ದೇಶಸೇವೆಯ ಜೊತೆಗೆ ಮಾಡಲಿಂಗ್ ಕ್ಷೇತ್ರದಲ್ಲಿಯೂ ಸಾಧನೆ ಮಾಡಿ ಯುವಜನತೆಗೆ ಮಾದರಿಯಾಗಬೇಕೆಂಬ ಆಶಯವನ್ನು ಅವರು ವ್ಯಕ್ತಪಡಿಸಿದ್ದಾರೆ. ಇವರ ಸಾಧನೆಗೆ ಪೋಷಕರು, ಶಿಕ್ಷಕರು, ಸ್ನೇಹಿತರು ಹಾಗೂ ಊರಿನ ಗಣ್ಯರು ಸಂತಸ ವ್ಯಕ್ತಪಡಿಸಿದ್ದಾರೆ.

Related posts

ಮಲವಂತಿಗೆ: ತೋಟಕ್ಕೆ ನುಗ್ಗಿದ ಕಾಡಾನೆ; ಅಪಾರ ಕೃಷಿ ಹಾನಿ

Suddi Udaya

ಮಚ್ಚಿನ ಸಪರಿವಾರ ಶ್ರೀ ಶಾಸ್ತಾರ ದೇವಸ್ಥಾನ ಮಾಣೂರು ನೂತನ ದೇವಾಲಯದ ಶಿಲಾನ್ಯಾಸ ಪ್ರಯಕ್ತ ಸಂಘ ಸಂಸ್ಥೆಗಳು ಹಾಗೂ ಊರವರಿಂದ ಶ್ರಮದಾನ

Suddi Udaya

ನಾಳೆ(ಜೂ.11): ವಿದ್ಯುತ್ ನಿಲುಗಡೆ

Suddi Udaya

ತಣ್ಣೀರುಪಂತ ಹಾಲು ಉತ್ಪಾದಕರ ಸಹಕಾರಿ ಸಂಘದ ಸಾಮಾನ್ಯ ಸಭೆ

Suddi Udaya

ಬಿಸಿರೋಡ್ ಬಿಂಎಂಬಿ ಸಮನ್ವಯ ಜೀತೋ ಚಾಲಕ ಮಾಲಕ ಸಂಘದಿಂದ ಎಸ್ಸೆಸ್ಸೆಲ್ಸಿ ಸಾಧಕರಿಗೆ ಸನ್ಮಾನ

Suddi Udaya

ಮಳೆಗಾಲದ ಮೆಗಾ ಆಫರ್ ಸೇಲ್‌ಗೆ ಚಾಲನೆ – ಸುನಿಲ್ ಸಿಲ್ಕ್ ಸಾರೀಸ್‌ನಲ್ಲಿ ಆಕರ್ಷಕ ರಿಯಾಯಿತಿಗಳ ಮಹಾಪರ್ವ

Suddi Udaya
error: Content is protected !!