September 25, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನಡ ಸ.ಪ.ಪೂ. ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನೆ

ನಡ : “ವಿದ್ಯಾರ್ಥಿಗಳು ಭವಿಷ್ಯದ ಮತದಾರರು. ಅವರು ಆಸಕ್ತಿಯಿಂದ ಮತ್ತು ಜವಾಬ್ದಾರಿಯಿಂದ ಚುನಾವಣೆಯಲ್ಲಿ ಭಾಗವಹಿಸಬೇಕು. ನಾಯಕತ್ವದ ಗುಣವನ್ನು ಬೆಳೆಸಿಕೊಳ್ಳಬೇಕು. ಕೀಳರಿಮೆಗಿಂತ ದೊಡ್ಡ ಶತ್ರು ಯಾರೂ ಇಲ್ಲ. ಎಲ್ಲರ ಜೊತೆಗೆ ಸೌಹಾರ್ದ ಸಂಬಂಧ ಇದ್ದಾಗ ಬದುಕಿನಲ್ಲಿ ಸಾಧನೆ ಸಾಧ್ಯವಾಗುತ್ತದೆ.”ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕಿ ದಿವ್ಯ ಕೆ ಇವರು ಸರ್ಕಾರಿ ಪದವಿ ಪೂರ್ವ ಕಾಲೇಜು ನಡ ಇಲ್ಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ಸಂಸ್ಥೆಯ ಪ್ರಾಂಶುಪಾಲರಾದ ಲಿಲ್ಲಿ ಪಿವಿ ಇವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು.

ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಮಾಜಿ ಪ್ರಾಂಶುಪಾಲರಾದ ಚಂದ್ರಶೇಖರ್ ಹಾಗೂ ಕೊಯ್ಯೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮೋಹನಗೌಡ ಉಪಸ್ಥಿತರಿದ್ದರು. ಉಪನ್ಯಾಸಕರುಗಳಾದ ಸುಕನ್ಯ ನಿರೂಪಿಸಿದ ಕಾರ್ಯಕ್ರಮದಲ್ಲಿ ವಸಂತಿ ಪಿ ಸ್ವಾಗತಿಸಿ, ಶಿಲ್ಪಾ ಡಿ ಪ್ರಸ್ತಾವನೆಗೈದು, ಪವಿತ್ರ ವಂದಿಸಿದರು. ಕಾಲೇಜು ವಿದ್ಯಾರ್ಥಿ ನಾಯಕನಾಗಿ ಚರಣ್ ಹಾಗೂ ಕಾಲೇಜು ಕಾರ್ಯದರ್ಶಿಯಾಗಿ ಸ್ಪೂರ್ತಿ ಆರ್ ಆಯ್ಕೆಯಾದರು.

Related posts

ಸುಲ್ಕೇರಿ ಬ್ರಹ್ಮಶ್ರೀ ಗುರುನಾರಾಯಣ ಸೇವಾ ಸಮಿತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ

Suddi Udaya

ಉಜಿರೆ: ಸೌಜನ್ಯ ಪ್ರಕರಣ: ಆರೋಪಿ ಸಂತೋಷ್ ರಾವ್ ನಿರಪರಾಧಿ ಸಿಬಿಐ ನ್ಯಾಯಾಲಯ ಆದೇಶ

Suddi Udaya

ಡಿ.30 : ರೆಖ್ಯ ವಿಶ್ವ ಹಿಂದೂ ಪರಿಷತ್, ಬಜರಂಗದಳ ಘಟಕದ ನೇತೃತ್ವದಲ್ಲಿ 3ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ

Suddi Udaya

ಶಿಶಿಲ: ಗುಂಡಿಗಾಡು ನಿವಾಸಿ ದೇಜಮ್ಮ ನಿಧನ

Suddi Udaya

ಎ.12: ಕೊಕ್ಕಡ ಮಾಸ್ತಿಕಲ್ಲುಮಜಲುನಲ್ಲಿ ಶ್ರೀ ಪಿಲಿಚಾಮುಂಡಿ ಮತ್ತು ಸಹ ಪರಿವಾರ ದೈವಗಳ ನೇಮೋತ್ಸವ

Suddi Udaya

ಗುರುವಾಯನಕೆರೆ ಎಕ್ಸೆಲ್ ವಿಜ್ಞಾನ ಪ.ಪೂ. ಕಾಲೇಜಿಗೆ ಶೇ. 99.76 ಫಲಿತಾಂಶ: 254 ವಿದ್ಯಾರ್ಥಿಗಳಿಗೆ ಡಿಸ್ಟಿಂಕ್ಷನ್

Suddi Udaya
error: Content is protected !!