27.6 C
ಪುತ್ತೂರು, ಬೆಳ್ತಂಗಡಿ
September 24, 2026
ತಾಲೂಕು ಸುದ್ದಿವರದಿಶಿಕ್ಷಣ ಸಂಸ್ಥೆ

ಸವಣಾಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಸಂಸತ್ತು ಚುನಾವಣೆ

ಸವಣಾಲು: ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಸವಣಾಲು ಇಲ್ಲಿನ 2026 – 27 ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಸಂಸತ್ತಿನ ಪದಾಧಿಕಾರಿಗಳ ಆಯ್ಕೆ ಮಾಡಲು ಜೂನ್ 23ರಂದು ಚುನಾವಣೆಯನ್ನು ನಡೆಸಲಾಯಿತು.

ಎಲ್ಲಾ ವಿದ್ಯಾರ್ಥಿಗಳ ಮತದಾನ ಪ್ರಕ್ರಿಯೆಯು ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ ಮಾದರಿಯಲ್ಲಿ ಮೊಬೈಲ್ ನಲ್ಲಿ EVM ಇದರ ಮೂಲಕ ನೆರವೇರಿತು. ವಿದ್ಯಾರ್ಥಿಗಳಿಗೆ ಮತದಾನದ ಬಗ್ಗೆ ಅರಿವು ಮೂಡಿಸುವ ಉದ್ದೇಶದೊಂದಿಗೆ ಮತದಾನದ ಕಾರ್ಯ ಚಟುವಟಿಕೆಗಳನ್ನು ಆಧುನಿಕ ಮೊಬೈಲ್ ತಂತ್ರಜ್ಞಾನದ ಮೂಲಕ ಮಾಡಲಾಯಿತು. ಮತದಾನದ ಎಣಿಕೆಯನ್ನು ಮಾಡಿ ಫಲಿತಾಂಶ ಘೋಷಣೆಯನ್ನು ಮಾಡಲಾಯಿತು.

ಶಾಲಾ ವಿದ್ಯಾರ್ಥಿ ಸಂಘದ ನಾಯಕನಾಗಿ ಬಿ. ತೇಜಸ್ ಭಟ್, ಉಪನಾಯಕಿಯಾಗಿ ಫಾತಿಮಾ ಅಸ್ನ ಆಯ್ಕೆಯಾದರು. ಗೃಹ ಮಂತ್ರಿಯಾಗಿ ಹೃತಿಕ್. ಆರ್ ಮತ್ತು ಮಹಮ್ಮದ್ ಶೈಫ್, ಆರೋಗ್ಯ ಮತ್ತು ಸ್ವಚ್ಛತಾ ಮಂತ್ರಿಯಾಗಿ ಸುಹ ಮತ್ತು ಚಿಂತನ್, ಗ್ರಂಥಾಲಯ ಮತ್ತು ಶಿಕ್ಷಣ ಮಂತ್ರಿಯಾಗಿ ಗೌತಮಿ ಮತ್ತು ಶಿಫಾ, ನೀರಾವರಿ ಮತ್ತು ತೋಟಗಾರಿಕಾ ಕೃಷಿಮಂತ್ರಿಯಾಗಿ ವಂಶಿಕ್ ಮತ್ತು ಚೇತನ್, ಕ್ರೀಡಾ ಮತ್ತು ಸಾಂಸ್ಕೃತಿಕ ಮಂತ್ರಿಯಾಗಿ ಆಯಿಷಾ ಮತ್ತು ನಿಹಾಲ್ ರವರನ್ನು ಆಯ್ಕೆ ಮಾಡಲಾಯಿತು.
ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣವನ್ನು ಬೆಳೆಸಲು ಮತ್ತು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವವನ್ನು ಬೆಳೆಸಬೇಕು ಎಂಬುದಾಗಿ ಶಿಕ್ಷಕರು ಮನವರಿಕೆ ಮಾಡಿ ವಿಜೇತರನ್ನು ಅಭಿನಂದಿಸಿದರು.

Related posts

ಕರಾವಳಿ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಕರಾವಳಿ ಅಭಿವೃದ್ಧಿ ಮಂಡಳಿ ರಚಿಸಿ ಬಜೆಟ್‌ನಲ್ಲಿ ರೂ.500 ಕೋಟಿ ಅನುದಾನ ಮೀಸಲಿಡಿ: ಬೆಳ್ತಂಗಡಿ ಪ್ರತಿಕಾಗೋಷ್ಠಿಯಲ್ಲಿ ಎಂಎಲ್ಸಿ ಐವನ್ ಡಿ’ಸೋಜ

Suddi Udaya

ಓಡಿಲ್ನಾಳ : ಕಿರಾತ ಮೂರ್ತಿ ಶ್ರೀ ಮಹಾಲಿಂಗೇಶ್ವರ ಧ್ವಜಾರೋಹಣ, ಪ್ರಥಮ ಜಾತ್ರೆ

Suddi Udaya

ಉಜಿರೆ ಶ್ರೀ ಧ.ಮಂ. ಪ.ಪೂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದಲ್ಲಿ ಜೀವ ಜಗತ್ತಿನ ವಿಸ್ಮಯಗಳು ‘ ಎನ್ನುವ ವಿಶೇಷ ಕಾರ್ಯಕ್ರಮ

Suddi Udaya

ಶೇಕ್ ಮಹಮ್ಮದ್ ಆರಿಫ್ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣ

Suddi Udaya

ಪೆರ್ಲ-ಬೈಪಾಡಿ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮ ಕಲಶೋತ್ಸವ ಸಮಿತಿಯ ಸಮಾಲೋಚನಾ ಸಭೆ

Suddi Udaya

ಸುರತ್ಕಲ್ ಮಣಿ ಕೃಷ್ಣಸ್ವಾಮಿ ಅಕಾಡೆಮಿ ವತಿಯಿಂದ ಸಭಾಂಗಣದ ಲೋಕಾರ್ಪಣೆ

Suddi Udaya
error: Content is protected !!