24.2 C
ಪುತ್ತೂರು, ಬೆಳ್ತಂಗಡಿ
September 25, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ರೋಟರಿ ಕುಟುಂಬ ಸಮ್ಮಿಲನದಲ್ಲಿ ರೋಟರಿ ಕ್ಲಬ್ ಸಾಧನೆಗೆ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರಿಂದ ಶ್ಲಾಘನೆ

ಉಜಿರೆ : ಎಸ್ ಡಿ ಎಂ ಐಟಿ ಯಲ್ಲಿ 11ನೇ ಹಾಗೂ ಕೊನೆಯ ರೋಟರಿ ಕುಟುಂಬ ಸಮ್ಮಿಲನದಲ್ಲಿ ಭಾಗವಹಿಸಿದ ಧರ್ಮಸ್ಥಳದ ಧರ್ಮಾಧಿಕಾರಿಗಳು, ಬೆಳ್ತಂಗಡಿ ರೋಟರಿ ಕ್ಲಬ್ ನ ಗೌರವ ಸದಸ್ಯರು ವೀರೇಂದ್ರ ಹೆಗ್ಗಡೆಯವರು, ಇತ್ತೀಚೆಗೆ R I DISTRICT 3181 ರವರು ಬೆಳ್ತಂಗಡಿ ರೋಟರಿ ಕ್ಲಬ್ ಗೆ ನೀಡಿದ ಪರಮೋಚ್ಛ ಪ್ರಶಸ್ತಿ “ಡೈಮಂಡ್ ಪ್ಲಸ್” ಹಾಗೂ ಇನ್ನಿತರ ಪ್ರಶಸ್ತಿಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತ ಪಡಿಸಿದರು.

2025-26ನೇ ಸಾಲಿನಲ್ಲಿ ಅಧ್ಯಕ್ಷ ರೊ. ಡಾ ಪ್ರಕಾಶ ಪ್ರಭು, ಕಾರ್ಯದರ್ಶಿ ಡಾ ಎಂ ಎಂ ದಯಾಕರ ತಂಡ 3 ಕೋಟಿ 10 ಲಕ್ಷ ಮೌಲ್ಯದ 500ಕ್ಕೂ ಮಿಕ್ಕಿ ಹಲವು ಸಾಮಾಜಿಕ ಸೇವೆ ನಡೆಸಿದ್ದು, ಅತೀ ಹೆಚ್ಚು ಸೇವಾ ಕಾರ್ಯಗಳನ್ನು ಮಾಡಿದ ರೋಟರಿ ಕ್ಲಬ್ ಎಂದೂ ಗುರುತಿಸಲ್ಪಟ್ಟಿದೆ. ಅಲ್ಲದೆ IMPACT EXCELLENCE ಪ್ರಶಸ್ತಿ ಮತ್ತು ENGAGEMENT EXCELLENCE ಪ್ರಶಸ್ತಿ ಕೂಡ ಪಡೆದಿರುತ್ತದೆ. ಇದೇ ಸಂದರ್ಭದಲ್ಲಿ ರೋಟರಿ ಕ್ಲಬ್ ನ ಸದಸ್ಯ ಹಾಗೂ ಎಕ್ಲೆಲ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ರೊ. ಪಿ ಎಚ್ ಎಫ್ ಸುಮಂತ ಕುಮಾರ್ ಜೈನ್ ರವರಿಗೆ UNSUNG HERO ಪ್ರಶಸ್ತಿ, ರೊ. ಮನೋರಮ ಭಟ್ ಅವರಿಗೆ CITATION FOR WOMEN EMPOWERMENT LEADERSHIP ಪ್ರಶಸ್ತಿ ಸಿಕ್ಕಿರುವ ಬಗ್ಗೆಯೂ ಖಾವಂದರರು ಪ್ರಶಂಸಿದರು.

ಕಳೆದ ವರ್ಷದ ರೋಟರಿ ಅಧ್ಯಕ್ಷ ರೋ ಪೂರಣ್ ವರ್ಮರು, ಎಸ್ ಡಿ ಎಂ ಐ ಟಿ ಯ ನಾಲ್ಕನೆಯ ಅಂತಸ್ತಿನಲ್ಲಿ ಏರ್ಪಡಿಸಿದ, ವಸ್ತು ಪ್ರದರ್ಶನವನ್ನು ವೀರೇಂದ್ರ ಹೆಗ್ಗಡೆ, ಶ್ರೀಮತಿ ಹೇಮಾವತಿ ಹೆಗ್ಗಡೆ ಹಾಗೂ ಕುಟುಂಬದವರು ವೀಕ್ಷಿಸಿದರು. ಕಲ್ಲಡ್ಕ ಮ್ಯೂಸಿಯಂ ಮಾಲಕ ಹಾಗೂ ಬಂಟ್ವಾಳ ರೋಟರಿ ಕ್ಲಬ್ ಕಾರ್ಯದರ್ಶಿ, ರೊ. ಮಹಮ್ಮದ್ ಯಾಸಿರರು ತಮ್ಮ ಅಭೂತಪೂರ್ವ ಸಂಗ್ರಹವನ್ನು ಖಾವಂದರರಿಗೆ ವಿವರವಾಗಿ ತೋರಿಸಿ, ವಿಶೇಷ ಮೆಚ್ಚುಗೆ ಪಡೆದರು.

Related posts

ಇಳಂತಿಲ: ಬೃಹತ್ ಗಾತ್ರದಲ್ಲಿ ಗುಡ್ಡ ಕುಸಿತ : ಗ್ರಾ.ಪಂ. ಸದಸ್ಯ ತಿಮ್ಮಪ್ಪ ಗೌಡರ ನೇತೃತ್ವದಲ್ಲಿ ತೆರವು ಕಾರ್ಯ

Suddi Udaya

ಮುಂಡಾಜೆ: ಚಿತ್ಪಾವನ ಸಂಘಟನೆಯ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ಸುಶ್ಮಾ ಶಶಾಂಕ ಭಿಡೆ

Suddi Udaya

ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ದ.ಕ ಜಿಲ್ಲಾ ಮಟ್ಟದ ಅಖಿಲ ಭಾರತ ಸಹಕಾರ ಸಪ್ತಾಹ ಅಂಗವಾಗಿ ಸ್ವಚ್ಚತಾ ಆಂದೋಲನ

Suddi Udaya

ಸುಪ್ರೀಂ ಕೋರ್ಟ್ ಹಿರಿಯ ವಕೀಲರಾಗಿ ಶೇಖರ್ ಗೌಡ ದೇವಸ ಸವಣಾಲು ನೇಮಕ

Suddi Udaya

ಮಚ್ಚಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಯೋಗ ದಿನಾಚರಣೆ

Suddi Udaya

ಚಾರ್ಮಾಡಿ: ಚಲಿಸುತ್ತಿದ್ದ ಕೆಎಸ್​ಆರ್​ಟಿಸಿ ಬಸ್ಸಿನ ಸ್ಟೇರಿಂಗ್ ಜಾಯಿಂಟ್ ಕಟ್

Suddi Udaya
error: Content is protected !!