September 25, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆಯಲ್ಲಿ ಹಲಸು ಮತ್ತು ಹಣ್ಣಿನ ಮೇಳದ ಉದ್ಘಾಟನೆ

ಉಜಿರೆ: ರೋಟರಿ ಕ್ಲಬ್ ಬೆಳ್ತಂಗಡಿ, ಪ್ರೇರಣ ಸಂಜೀವಿನಿ ಮಹಿಳಾ ಒಕ್ಕೂಟ, ಬೆನಕ ಇವೆಂಟ್ಸ, ಉಜಿರೆ ಗ್ರಾಮ ಪಂಚಾಯತ್ ಜಂಟಿ ಆಶ್ರಯದಲ್ಲಿ ಉಜಿರೆಯಲ್ಲಿ ನಡೆಯುತ್ತಿರುವ ಹಲಸು ಮತ್ತು ಹಣ್ಣಿನ ಮೇಳವನ್ನು ರಿಬ್ಬನ್ ಕಟ್ ಮಾಡುವುದರ ಮೂಲಕ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ರೊ. ಡಾ ಪ್ರಕಾಶ ಪ್ರಭು ಇವರು ಉದ್ಘಾಟನೆ ಮಾಡಿದರು.

ಕೃಷಿಕರ ಹಾಗೂ ಕುಲ ಕಸುಬುಗಳ ಉತ್ಪನ್ನ ಹಾಗೂ ಸಣ್ಣ ವ್ಯಾಪಾರಿಗಳನ್ನು ಬೆಂಬಲಿಸಲು ಉಜಿರೆ ಗ್ರಾಮ ಹಾಗೂ ಸುತ್ತಮುತ್ತಲಿನ ಜನರು ಬರಬೇಕು ಎಂದು ಕರೆ ಕೊಟ್ಟರು. ಪ್ರೇರಣ ಸಂಜೀವಿನಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ವಿನುತ ರಂಜನ ಗೌಡ ಅವರು ದೀಪ ಬೆಳಗಿಸಿ ಶುಭ ಕೋರಿ, ತಮ್ಮ ಒಕ್ಕೂಟದ ಸದಸ್ಯರೂ ಇದರಲ್ಲಿ ಬಹಳ ಆಸಕ್ತಿಯಿಂದ ಸಹಕರಿಸುವುದಾಗಿ ಹೇಳಿದರು.

ಶ್ರೀ ಕೃಷ್ಣಾನುಗ್ರಹದಲ್ಲಿ ಜೂ. 26,27,28 ಬೆಳಗ್ಗೆ 10 ರಿಂದ ರಾತ್ರಿ 9:30 ವರೇಗೆ ನಡೆಯಲಿರುವ ಈ ಮೇಳದ ಸಂಕ್ಷಿಪ್ತ ಮಾಹಿತಿಯನ್ನು ಬೆನಕಾ ಇವೆಂಟ್ಸನ ಮಾಲಕ ಗಣೇಶ ಶೆಟ್ಟಿ ನೀಡಿದರು. ಅತಿಥಿ ರೊ. ಡಾ ಎಂ ಎಂ ದಯಾಕರರು ಹಲಸಿನ ಮತ್ತು ಹಣ್ಣಿನ ಕೃಷಿಕನಾಗಿ, ತಮ್ಮ ಅನುಭವವನ್ನು ಹಂಚಿಕೊಂಡರು.

ವೇದಿಕೆಯಲ್ಲಿ ಬೆನಕ ಇವೆಂಟ್ಸನ ಪದಾಧಿಕಾರಿಗಳಾದ ಭಾಸ್ಕರ ಪೂಜಾರಿ, ಶ್ರೀಧರ ಮರವಂತೆ, ಸಂದೇಶ ಮೊಗೇರರು ಉಪಸ್ಥಿತರಿದ್ದರು. ಆ್ಯನ್ ಡಾ ಅನಿತಾ ದಯಾಕರರು ಭಾಗವಹಿಸಿದರು. ಕಾರ್ಯಕ್ರಮವನ್ನು ರೋಟರಿ ಸದಸ್ಯ , ರಾಜ್ಯ ಪ್ರಶಸ್ತಿ ವಿಜೇತ ಬಿ. ಸೋಮಶೇಖರ ಶೆಟ್ಟಿ ನಿರೂಪಿಸಿದರು.

Related posts

ಕಲ್ಮಂಜ : ಬೆರ್ಕೆಯಲ್ಲಿ ಒಂಟಿ ಸಲಗ ದಾಳಿ: ಅಪಾರ ಕೃಷಿ ಹಾನಿ

Suddi Udaya

ಎಲ್‌.ಪಿ.ಜಿ ಸಿಲಿಂಡರ್‌ ದರ 100ರೂ ಕಡಿತ

Suddi Udaya

ಬೆಳ್ತಂಗಡಿ: ವಿಶ್ವಕರ್ಮಾಭ್ಯುದಯ ಸಭಾ ಸಂಘದ ಪದಾಧಿಕಾರಿಗಳ ಆಯ್ಕೆ

Suddi Udaya

ಪುದುವೆಟ್ಟುಶ್ರೀ.ಧ.ಮಂ.ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

Suddi Udaya

ಉಜಿರೆ ಲಲಿತನಗರ ನಿವಾಸಿ ಲೀಲಾವತಿ ನಿಧನ

Suddi Udaya

ಉಜಿರೆಯ ಎಸ್‌ಡಿಎಂ ಕಲಾ ಕೇಂದ್ರಕ್ಕೆ ಅಮೇರಿಕಾದ ಹೃದ್ರೋಗ ತಜ್ಞ ಡಾ. ರಾಮಯ್ಯ ಗೌಡ ದಂಪತಿ ಭೇಟಿ- ಸಂಸ್ಥೆಗೆ ಒಂದು ಲಕ್ಷ ಧನ ಸಹಾಯ ಹಸ್ತಾಂತರ- ವಿದ್ಯಾರ್ಥಿಗಳ ಪ್ರತಿಭೆ ಮತ್ತು ಪರಿಶ್ರಮಕ್ಕೆ ಮೆಚ್ಚುಗೆ

Suddi Udaya
error: Content is protected !!