25 C
ಪುತ್ತೂರು, ಬೆಳ್ತಂಗಡಿ
September 28, 2026
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಹಳೇಪೇಟೆ ಅಲ್ ಅಮೀನ್ ಯಂಗ್ ಮೆನ್ಸ್ ಅಸೋಸಿಯೇಷನ್ ಮಹಾಸಭೆ: ನೂತನ ಪದಾಧಿಕಾರಿಗಳ ಆಯ್ಕೆ

ಉಜಿರೆ : ಮೊಹಿಯುದ್ದೀನ್ ಜುಮಾ ಮಸೀದಿ ಹಳೇಪೇಟೆ, ಉಜಿರೆ ಇದರ ಅಂಗ ಸಂಸ್ಥೆಯಾದ ಅಲ್ ಅಮೀನ್ ಯಂಗ್ ಮೆನ್ಸ್ ಅಸೋಸಿಯೇಷನ್, ಹಳೇಪೇಟೆ ಇದರ ಮಹಾಸಭೆಯು ಶುಕ್ರವಾರ ಜುಮಾ ನಮಾಝಿನ ಬಳಿಕ ಮದರಸದ ಹಾಲ್‌ನಲ್ಲಿ ನಡೆಯಿತು.

ಶಾಕಿರ್ ಉಜಿರೆ ದುಆ ನೆರವೇರಿಸುವ ಮೂಲಕ ಸಭೆಗೆ ಚಾಲನೆ ನೀಡಿದರು. ಬಳಿಕ ಅಲ್ ಅಮೀನ್ ಯಂಗ್ ಮೆನ್ಸ್ ಅಸೋಸಿಯೇಷನ್ ಇದರ ಕಾರ್ಯದರ್ಶಿ ಫಝಲ್ ಅವರು ವಾರ್ಷಿಕ ವರದಿಯನ್ನು ಮಂಡಿಸಿದರು. ಬಳಿಕ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ನೂತನ ಅಧ್ಯಕ್ಷರಾಗಿ ಶಾಕಿರ್ ಉಜಿರೆ, ಕಾರ್ಯದರ್ಶಿಯಾಗಿ ಸಹಲ್ ನೀರ್ಸಾಲ್, ಉಪಾಧ್ಯಕ್ಷರಾಗಿ ಅಶ್ರಫ್ ಕುಂಟಿನಿ ಹಾಗೂ ಶಕೀಬ್ ಕುಂಟಿನಿ, ಜೊತೆ ಕಾರ್ಯದರ್ಶಿಯಾಗಿ ಅಲ್ಫಾಝ್ ಕುಂಟಿನಿ ಮತ್ತು ಕೋಶಾಧಿಕಾರಿಯಾಗಿ ಮುಬೀನ್ ಅತ್ತಾಜೆ ಆಯ್ಕೆಯಾದರು.

ಸಲಹೆಗರರಾಗಿ ಮೊಹಿಯುದ್ದೀನ್ ಜುಮಾ ಮಸೀದಿ ಹಳೇಪೇಟೆ, ಉಜಿರೆ ಆಡಳಿತ ಸಮಿತಿಯ ಅಧ್ಯಕ್ಷರು ಅಬೂಬಕ್ಕರ್ ಸುಪ್ರೀಂ, ಕಾರ್ಯದರ್ಶಿ ಹಾರಿಸ್ , ಬಿ.ಎಂ. ಹನೀಫ್ ಮತ್ತು ಹನೀಫ್ ಯು.ಕೆ. ಹಾಗೂ ದಾವೂದ್ ಆಯ್ಕೆಯಾದರು.

ಮಹಾಸಭೆಯಲ್ಲಿ ಕೇಂದ್ರ ಕರಿಯದ ಹಾಗೂ ಉಜಿರೆ, ಕಕ್ಕೇಜಲ್, ಕುಂಟಿನಿ, ಅತ್ತಾಜೆ ಮತ್ತು ಕಕ್ಕಿಯಾನ ಕರಿಯದ ಯಂಗ್ ಮೆನ್ಸ್‌ನ ಸರ್ವ ಸದಸ್ಯರು ಹಾಗೂ ಜಮಾಅತ್‌ನ ಯುವಕರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಮೊಹಿಯುದ್ದೀನ್ ಜುಮಾ ಮಸೀದಿ ಹಳೇಪೇಟೆ, ಉಜಿರೆ ಆಡಳಿತ ಸಮಿತಿಯ ಅಧ್ಯಕ್ಷರು ಅಬೂಬಕ್ಕರ್ ಸುಪ್ರೀಂ, ಕಾರ್ಯದರ್ಶಿ ಹಾರಿಸ್ , ಜೊತೆ ಕಾರ್ಯದರ್ಶಿ ಹಂಝ, ಸದಸ್ಯ ಕಾದರ್ ಎಸ್.ಎ, ಕೋಶಾಧಿಕಾರಿ ಮೊಹಮ್ಮದ್ ಸಅದಿ ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ ಮಂಡಲ ಮಹಿಳಾ ಮೋರ್ಚಾದ ವತಿಯಿಂದ ಬೆಳ್ತಂಗಡಿ, ಧರ್ಮಸ್ಥಳ, ಗುರುವಾಯನಕೆರೆಯ ಅಂಗಡಿ ಮುಂಗಟ್ಟುಗಳಿಗೆ ಭೇಟಿ ನೀಡಿ ಮತಯಾಚನೆ

Suddi Udaya

ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಅನುಗ್ರಹ ಶಾಲಾ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ

Suddi Udaya

ಇಂದಬೆಟ್ಟು: ಬಲ್ಲಾಳ್ ಬಸ್ಸಿನ ಚಾಲಕ ಸಂತೋಷ್ ಗೌಡ ಹೃದಯಾಘಾತದಿಂದ ನಿಧನ

Suddi Udaya

ಕೊಕ್ರಾಡಿ : ಕೈತ್ರೋಡಿ ನಿವಾಸಿ ವಜ್ರ ಕುಮಾರ್ ಜೈನ್ ನಿಧನ

Suddi Udaya

ಗುರುವಾಯನಕೆರೆ ಸ.ಪ್ರೌ. ಶಾಲೆಯ ಚಿತ್ರಕಲಾ ಶಿಕ್ಷಕ ವಿ.ಕೆ ವಿಟ್ಲ ರವರಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

Suddi Udaya

ಫೆ.27: ವೇಣೂರು ಬಜಿರೆಯಲ್ಲಿ ‘ಹಿಂದೂ ರಾಷ್ಟ್ರ’ ಸ್ಥಾಪನೆಗಾಗಿ ಜಾಗೃತಿ ಸಭೆ

Suddi Udaya
error: Content is protected !!