27.1 C
ಪುತ್ತೂರು, ಬೆಳ್ತಂಗಡಿ
September 27, 2026
ಅಭಿನಂದನೆಗ್ರಾಮಾಂತರ ಸುದ್ದಿಬೆಳ್ತಂಗಡಿಸಂಘ-ಸಂಸ್ಥೆಗಳು

ಧೀಮತಿ ಜೈನ ಮಹಿಳಾ ಸಮಾಜದ ನೂತನ ಪದಾಧಿಕಾರಿಗಳ ಪದಗ್ರಹಣ

ಉಜಿರೆ: ಧೀಮತಿ ಜೈನ ಮಹಿಳಾ ಸಮಾಜ, ಉಜಿರೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜೂನ್ 27ರಂದು ನಡೆಯಿತು.ಕು. ನಿಷ್ಠಾ ಜೈನ್ ಹಾಗೂ ಕು. ದೀಪ್ತಾ ಜೈನ್ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ನಿಕಟ ಪೂರ್ವ ಅಧ್ಯಕ್ಷೆ ಡಾ. ರಜತಾ ಪಿ. ಶೆಟ್ಟಿ ಅಧ್ಯಕ್ಷೀಯ ವರದಿ ಮಂಡಿಸಿದರು.

ನಿಕಟ ಪೂರ್ವ ಕಾರ್ಯದರ್ಶಿ ದಿವ್ಯಾ ಪ್ರಧಾನ್ ಹಾಗೂ ಖಜಾಂಚಿ ಸ್ಮಿತಾ ಪ್ರಶಾಂತ್ ಅವರು ಕಾರ್ಯ ಹಾಗೂ ಆರ್ಥಿಕ ವರದಿ ಸಲ್ಲಿಸಿದರು.ಮುಖ್ಯ ಅತಿಥಿ ಹಾಗೂ ಗೌರವ ಅಧ್ಯಕ್ಷೆ ಸೋನಿಯಾ ವರ್ಮಾ ಮಾತನಾಡಿ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.

ನಿಕಟ ಪೂರ್ವ ಪದಾಧಿಕಾರಿಗಳು ನೂತನ ಅಧ್ಯಕ್ಷೆ ಅಶ್ವಿನಿ ಪ್ರವೀಣ್ ಕುಮಾರ್, ಕಾರ್ಯದರ್ಶಿ ಸ್ಮೃತಿ ವಿನಯಚಂದ್ರ ಹಾಗೂ ಖಜಾಂಚಿ ಉಲ್ಲಾಸಿನಿ ಉದಯ ಕುಮಾರ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.ರಾಷ್ಟ್ರೀಯ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಕು. ಲಾಸ್ಯ ಅವರನ್ನು ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ 18 ನೂತನ ಸದಸ್ಯೆಯರು ಸಮಾಜಕ್ಕೆ ಸೇರ್ಪಡೆಗೊಂಡರು. ಮಹಿಳಾ ಸಮಾಜದ ಸದಸ್ಯೆ ಶಶಿಪ್ರಭಾ ಇವರು ಕಾರ್ಯಕ್ರಮ ನಿರೂಪಿಸಿದರು. ನೂತನ ಕಾರ್ಯದರ್ಶಿ ಸ್ಮೃತಿ ವಿನಯಚಂದ್ರ ವಂದನಾರ್ಪಣೆ ಸಲ್ಲಿಸಿದರು.

Related posts

ಎಸ್ಸೆಸ್ಸೆಫ್ ಬೆಳ್ತಂಗಡಿ ಡಿವಿಷನ್ “ತನ್’ಶೀತ್ವ್” ದ‌ಅ್‌ವಾ ಕ್ಯಾಂಪ್

Suddi Udaya

ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜ್ಞಾಪನಾ ಶಕ್ತಿ ಪರೀಕ್ಷೆ ಸ್ಪರ್ಧೆ

Suddi Udaya

ಎಸ್.ಡಿ.ಎಂ. ಐಟಿಐ ವೇಣೂರಿನಲ್ಲಿ ಬೃಹತ್ ಕ್ಯಾಂಪಸ್ ಸಂದರ್ಶನ

Suddi Udaya

ಬೆಳ್ತಂಗಡಿ ಲೋಬೊ ಮೋಟಾರ್ಸ್ನಲ್ಲಿ ಮಳೆಗಾಲದ ವಿಶೇಷ ಮಾನ್ಸೂನ್ ಆಫರ್

Suddi Udaya

ಬಾರ್ಯ, ತೆಕ್ಕಾರು ಪುತ್ತಿಲ ಗ್ರಾಮದಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ಜಾತ್ರೋತ್ಸವ ಸಮಾಲೋಚನಾ ಸಭೆ

Suddi Udaya

ಬೆಳ್ತಂಗಡಿ ಪೊಲೀಸ್ ಠಾಣೆಯಿಂದ ಎಸ್.ಐ.ಟಿ ವಿಚಾರಣೆಗೆ ಹಾಜರಾದ ಮಹೇಶ್ ಶೆಟ್ಟಿ ತಿಮರೋಡಿ

Suddi Udaya
error: Content is protected !!