22.7 C
ಪುತ್ತೂರು, ಬೆಳ್ತಂಗಡಿ
September 28, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ದೇಶದಲ್ಲಿ ನೋಂದಾವಣೆಯಾಗದಿರುವ ದೊಡ್ಡ ಸಂಸ್ಥೆ ಆರ್.ಎಸ್.ಎಸ್. ಮಾತ್ರ,: ಕೆಪಿಸಿಸಿ ವಕ್ತಾರ ಅಮಲ ರಾಮಚಂದ್ರ

ಬೆಳ್ತಂಗಡಿ: ದೇಶದಲ್ಲಿ ನೊಂದಾವಣೆಯಾಗದಿರುವ ದೊಡ್ಡ ಸಂಸ್ಥೆ ಆರ್.ಎಸ್.ಎಸ್.ಮಾತ್ರ, ರಶೀದಿ ನೀಡದೆ ದೇಣಿಗೆಯನ್ನು ಸಂಗ್ರಹಿಸುತ್ತಿದ್ದು ದೇಣಿಗೆ ಹಣಕ್ಕೆ ಲೆಕ್ಕಾಚಾರವನ್ನು ನೀಡಿಲ್ಲ ಎಂದು ಕೆಪಿಸಿಸಿ ವಕ್ತಾರ ಅಮಲ ರಾಮಚಂದ್ರ ಹೇಳಿದರು.

ಅವರು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಸಭಾಂಗಣದಲ್ಲಿ ಜೂ.29 ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಪ್ರತಿ ವರ್ಷ ಗುರುಕಾಣಿಕೆಯ ಹೆಸರಿನಲ್ಲಿ ಜನರಿಂದ ಸಂಗ್ರಹಿಸುತ್ತಿರುವ ಕೋಟಿ ಕೋಟಿ ರೂಪಾಯಿ ದೇಣಿಗೆಗಳಿಗೆ ಯಾವುದೇ ರೀತಿಯ ಲೆಕ್ಕಪತ್ರವನ್ನಾಗಲಿ ಪಾರದರ್ಶಕತೆಯನ್ನಾಗಲೀ ಪ್ರದರ್ಶಿಸದೆ, ಪ್ರಶ್ನಿಸಿದವನನ್ನೇ “ನನ್ನನ್ನು ಪ್ರಶ್ನಿಸುವುದಕ್ಕೆ ನೀನು ಯಾರು” ಎಂದು ಕೇಳುತ್ತಿದೆ. ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆಯವರು ಆರ್.ಎಸ್.ಎಸ್ ಮುಖ್ಯಸ್ಥ ಮೋಹನ್ ಭಾಗವತರಿಗೆ ಆರ್.ಎಸ್.ಎಸ್.ನ ನೋಂದಾವಣೆಯ ಕುರಿತು ಬರೆದ ಪತ್ರ ರವಾನಿಸಿದರು. “ನೀವು ಯಾಕೆ ರಿಜಿಸ್ಟ್ರೇಷನ್ ಮಾಡಿಸಿಲ್ಲ ಎಂಬುದಕ್ಕೆ ಇಂದಿನವರೆಗೆ ನಮಗೆ ಯಾರೂ ರಿಜಿಸ್ಟ್ರೇಷನ್ ಮಾಡುವಂತೆ ಹೇಳಿಲ್ಲ , ಹಿಂದೂ ಧರ್ಮವನ್ನೂ ರಿಜಿಸ್ಟ್ರೇಷನ್ ಮಾಡಲಾಗಿಲ್ಲ ಎಂಬ ಮೋಹನ್ ಭಾಗವತರ ಮಾತು ತೂಕವಿಲ್ಲದ ಮತ್ತು ಜನರನ್ನು ದಾರಿ ತಪ್ಪಿಸುವಂತ ಮಾತಾಗಿದೆ. ದೇಶದಲ್ಲಿ ದೊಡ್ಡ ಸಂಸ್ಥೆಯಾಗಿ ಬೆಳೆದು ನಿಂತ ಆರ್.ಎಸ್.ಎಸ್.ನ ಸರಸಂಘಚಾಲಕರಿಗೆ ತಮ್ಮ ಸಂಸ್ಥೆಯನ್ನು ರಿಜಿಸ್ಟ್ರೇಷನ್ ಮಾಡಬೇಕೆಂದಿದ್ದರೆ ಬೇರೆ ಯಾರಾದರೂ ಹೇಳಬೇಕಾಗಿದೆ ಎಂದರೆ ಅವರೆಂತಹಾ ನೈತಿಕ ಅಧಃಪತನದಲ್ಲಿ ಇದ್ದಾರೆ ಎಂಬುದು ಅರ್ಥವಾಗುತ್ತದೆ ಎಂದು ತಿಳಿಸಿದರು.

ಆರ್.ಎಸ್.ಎಸ್‌ಗೆ ನೂರು ವರ್ಷವಾದರೂ ಇಂದಿನವರೆಗೆ ಸಂಸ್ಥೆಗೆ ಸರಿಯಾದ ವಿಳಾಸವೇ ಇಲ್ಲ. ಆರ್.ಎಸ್.ಎಸ್. ಎಂತಹ ದೇಶಭಕ್ತರನ್ನು ನಿರ್ಮಾಣ ಮಾಡಿದೆ ಎಂಬುದಕ್ಕೆ ಇತ್ತೀಚೆಗೆ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ನಡೆದ, ಭಕ್ತರ ಕಾಣಿಕೆಯ ಕೋಟ್ಯಂತರ ರೂಪಾಯಿಗಳ ಹಗರಣ ಪ್ರಕರಣ ಸ್ಪಷ್ಟ ನಿದರ್ಶನವಾಗಿದೆ ಎಂದು ಅಭಿಪ್ರಾಯಿಸಿದರು.

ರಾಮ ಮಂದಿರದ ಪ್ರಾಣ ಪ್ರತಿಷ್ಠೆಯ ಪೂರ್ವದಲ್ಲಿ ದೇಶದ ಪ್ರತಿ ಮನೆಗೆ ಮಂತ್ರಾಕ್ಷತೆಯನ್ನು ಹಂಚಿ ರಾಮಮಂದಿರವನ್ನು ಚುನಾವಣೆಯಲ್ಲಿ ಮತ ಧೃವೀಕರಣಕ್ಕೆ ಬಳಸಿದ ಕಾರ್ಯಕರ್ತರಿಗಾಗಲಿ ಯಾವ ದೇಶ ಪ್ರೇಮವೂ ಇಲ್ಲ, ಯಾವ ರಾಮ ಭಕ್ತಿಯು ಇಲ್ಲ, ಯಾವ ಜವಾಬ್ದಾರಿಯು ಇಲ್ಲ ಎನ್ನುವುದು ಸಾಬೀತಾಗುತ್ತದೆ. ಮಂತ್ರಾಕ್ಷತೆಯನ್ನು ಮನೆಮನೆಗೆ ಹಂಚಿದ್ದರು ಅದೇ ರೀತಿಯಲ್ಲಿ ತಾವು ಲೂಟಿ ಹೊಡೆದ ಹಣವನ್ನು ಮನೆ ಮನೆಗಳಿಗೆ ಹಂಚಿ ತಾವು ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು.

ತಮ್ಮನ್ನು ತಾವು ಕಾನೂನಿನ ವ್ಯಾಪ್ತಿಯೊಳಗೆ ಒಳಪಡಿಸುವುದೇ ದೇಶ ಪ್ರೇಮ, ಸೌಹರ್ದತೆಯ ಪ್ರೀತಿಯ ಪಸರಿಸುವ ದೇಶವಾಗಲಿ ಎಂದು ಹೇಳಿದ ಅವರು ನಮ್ಮ ಪಕ್ಷದವರು ಆರ್‌ಎಸ್‌ಎಸ್‌ನೊಂದಿಗೆ ಒಳ ಒಪ್ಪಂದ ಮಾಡಿಲ್ಲ, ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾವಿದ್ದ ವೇಳೆ ಕಾಲ ಕಾಲಕ್ಕೆ ಆರ್‌ಎಸ್‌ಎಸ್‌ನ್ನು ಬ್ಯಾನ್ ಮಾಡಿದೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಯೋಗೀಶ್ ಆಚಾರ್ಯ, ಬೆಳ್ತಂಗಡಿ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನವೀನ್ ಗೌಡ ಸವಣಾಲು ಹಾಗೂ ಅಳದಂಗಡಿ ಪ್ಯಾಕ್ಸ್ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

Related posts

ಸಿಬಿಎಸ್ಸಿ ಎಸ್.ಎಸ್.ಎಲ್.ಸಿ ಫಲಿತಾಂಶ: ಶ್ರೀ ವಿದ್ಯಾಸಾಗರ ಆಂಗ್ಲ ಮಾಧ್ಯಮ ಶಾಲೆಗೆ ಶೇ.100 ಫಲಿತಾಂಶ

Suddi Udaya

ರಹ್ಮಾನಿಯಾ ಜುಮ್ಮಾ ಮಸ್ಜಿದ್ ಹಾಗೂ ದರ್ಗಾ ಶರೀಫ್ ಕಾಜೂರ್: ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ತರಬೇತಿ ಕಾರ್ಯಾಗಾರ, ಸಾಧಕರಿಗೆ ಸನ್ಮಾನ

Suddi Udaya

ವಾಣಿ ಕಾಲೇಜಿನಲ್ಲಿ ಓಣಂ ಆಚರಣೆ

Suddi Udaya

ಕಲ್ಮಂಜ : ಬೆರ್ಕೆಯಲ್ಲಿ ಒಂಟಿ ಸಲಗ ದಾಳಿ: ಅಪಾರ ಕೃಷಿ ಹಾನಿ

Suddi Udaya

ಉಜಿರೆ ಎಸ್ ಡಿ ಎಂ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಆರೋಗ್ಯದ ಮಾಹಿತಿ ಕಾರ್ಯಕ್ರಮ

Suddi Udaya

ಚಾರ್ಮಾಡಿ ಚೆಕ್‌ಪೋಸ್ಟ್‌ನಲ್ಲಿ ಅಕ್ರಮ ಮರಳು ಸಾಗಾಟದ ಪಿಕಪ್ ಪತ್ತೆ

Suddi Udaya
error: Content is protected !!