31.1 C
ಪುತ್ತೂರು, ಬೆಳ್ತಂಗಡಿ
September 28, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ರಘು ಸಿ ರವರನ್ನು ಭೇಟಿ ಮಾಡಿದ ಬೆಳ್ತಂಗಡಿ ಪ.ಪಂ. ಹಾಗೂ ಗ್ರಾ.ಪಂ. ಪೌರ ಕಾರ್ಮಿಕರ ಸಂಘದ ಪದಾಧಿಕಾರಿಗಳು

ಬೆಳ್ತಂಗಡಿ : ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ರಘು ಸಿ ರವರನ್ನು ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ಬೆಳ್ತಂಗಡಿ ತಾಲೂಕು ಪಟ್ಟಣ ಮತ್ತು ಗ್ರಾಮ ಪಂಚಾಯತ್ ಪೌರ ಕಾರ್ಮಿಕರ ಸಂಘದ ಪದಾಧಿಕಾರಿಗಳು ಜೂ. 28 ರಂದು ಭೇಟಿ ಮಾಡಿ ಪೌರ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು.

ನೇರಪಾವತಿ ಪೌರ ಕಾರ್ಮಿಕರನ್ನು ಖಾಯಂ ಮಾಡಬೇಕು , ಲೋಡರ್ಸ್ , ಕ್ಲೀನರ್ಸ ಗಳಿಗೆ ನೇರ ಪಾವತಿ ಮಾಡಬೇಕು , ಪೌರ ಕಾರ್ಮಿಕರಿಗೆ ನಿವೇಶನ , ವಸತಿ ಸೌಕರ್ಯ ಒದಗಿಸಬೇಕು , ಗ್ರಾಮ ಪಂಚಾಯತ್ ಸ್ವಚ್ಚತಾ ಕಾರ್ಯಗಳನ್ನು ಸಂಜೀವಿನಿ ಒಕ್ಕೂಟದಿಂದ ಕೈಬಿಡಬೇಕು , ಗ್ರಾಮ ಪಂಚಾಯತ್ ಸ್ವಚ್ಚತಾ ಕಾರ್ಮಿಕರಿಗೆ ಏಕರೂಪದ ವೇತನ ನೀಡಬೇಕು , ಗ್ರಾಮ ಪಂಚಾಯತ್ ಗಳಲ್ಲಿ ಕೈಬಿಟ್ಟ ಸ್ವಚ್ಚತಾ ಕಾರ್ಮಿಕರನ್ನು ವಾಪಸ್ ಕೆಲಸಕ್ಕೆ ಸೇರ್ಪಡೆ ಮಾಡಬೇಕು , ಪೌರ ಕಾರ್ಮಿಕರು ಸೇರಿದಂತೆ ಗ್ರಾಮ ಪಂಚಾಯತ್ ಸ್ವಚ್ಚತಾ ಕಾರ್ಮಿಕರ ಮೇಲಿನ ಅಧಿಕಾರಿಗಳ ದೌರ್ಜನ್ಯ ನಿಲ್ಲಬೇಕು , ಪೌರ ಕಾರ್ಮಿಕರ ವಿಶ್ರಾಂತಿ ಕೊಠಡಿಯನ್ನು ದುರಸ್ತಿಗೊಳಿಸಬೇಕು ಎಂದು ಆಯೋಗದ ಅಧ್ಯಕ್ಷರ ಗಮನಕ್ಕೆ ತರಲಾಯಿತು.

ಈ ಸಂದರ್ಭದಲ್ಲಿ ಪಟ್ಟಣ ಮತ್ತು ಗ್ರಾಮ ಪಂಚಾಯತ್ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್ ಸುದೆಮುಗೇರು , ಜೊತೆ ಕಾರ್ಯದರ್ಶಿ ಸುರೇಶ್ ಕೆ ಅರಳಿ , ಮುಖಂಡರಾದ ಶಿವಕುಮಾರ್ ಪುಂಜಾಲಕಟ್ಟೆ , ಉಮೇಶ್ ಪುಂಜಾಲಕಟ್ಟೆ , ಸಂದೀಪ್ ಅರಳಿ, ವಸಂತ ಕೊಯ್ಯೂರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪೌರ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ಅನಿಲ್ ಕಂಕನಾಡಿ , ಕಾರ್ಯದರ್ಶಿ ಎಸ್.ಪಿ‌ ಆನಂದ್ ಮತ್ತು ಪದಾಧಿಕಾರಿಗಳು ಜೊತೆಗಿದ್ದರು.

Related posts

ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಟ್ರಸ್ಟ್ ವತಿಯಿಂದ ಟ್ರಸ್ಟ್ ಸದಸ್ಯತ್ವ ನೇಮಕಾತಿ ಸಭೆ

Suddi Udaya

ನಾರಾವಿ: ಶ್ರೀ ಕ್ಷೇತ್ರ ಧ. ಗ್ರಾ. ಯೋ. ಬಿಸಿ ಟ್ರಸ್ಟ್ ನಿಂದ ಚಿತ್ತಾರ ಕೇಂದ್ರಿಕೃತ ಭತ್ತ ನರ್ಸರಿಗೆ ಚಾಲನೆ

Suddi Udaya

ಇಂದಬೆಟ್ಟು-ನಾವೂರು 27 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

Suddi Udaya

ದ.ಕ. ಜಿಲ್ಲಾ ಪಶುವೈದ್ಯಕೀಯ ಪರೀಕ್ಷಕರ ಸಂಘದಿಂದ ನಿವೃತ್ತಿಗೊಂಡ ಡಾ ಕೆ. ಜಯಕೀರ್ತಿ ಜೈನ್ ರಿಗೆ ಸನ್ಮಾನ

Suddi Udaya

ಬಂದಾರು ಗ್ರಾಮದ ಪೆರಲ್ದಪಳಿಕೆಯಲ್ಲಿ 9ಅಡಿ ಉದ್ದದ ಕಾಳಿಂಗ ಸರ್ಪ ಪತ್ತೆ

Suddi Udaya

ಪುಂಜಾಲಕಟ್ಟೆ ಸರಕಾರಿ ಪ.ಪೂ. ಕಾಲೇಜಿಗೆ ಶೇ. 95.7 ಫಲಿತಾಂಶ

Suddi Udaya
error: Content is protected !!