September 6, 2026
ತಾಲೂಕು ಸುದ್ದಿಬೆಳ್ತಂಗಡಿವರದಿ

ತಾಲ್ಲೂಕು ಮಟ್ಟದ ಕರಾಟೆ ಪಂದ್ಯಾಟ: ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಗೆ ಸಮಗ್ರ ಪ್ರಶಸ್ತಿ

ಮೂಡುಬಿದಿರೆ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮೂಡುಬಿದಿರೆ ತಾಲ್ಲೂಕು ದಕ್ಷಿಣ ಕನ್ನಡ ಹಾಗೂ ಸೈಂಟ್ ಇಗ್ನೇಷಿಯಸ್ ಶಾಲೆ ಪಾಲಡ್ಕ ಇವರ ಸಂಯುಕ್ತ ಆಶ್ರಯದಲ್ಲಿ ಜರಗಿದ ತಾಲ್ಲೂಕು ಮಟ್ಟದ ಕರಾಟೆ ಪಂದ್ಯಾಟದಲ್ಲಿ 17 ವರ್ಷದ ವಯೋಮಿತಿಯ ಬಾಲಕರ ಹಾಗೂ ಬಾಲಕಿಯರ ವಿಭಾಗದಲ್ಲಿ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆ ಮೂಡುಬಿದಿರೆಯು ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.


14 ರ ವಿಭಾಗದ ಹಾಗೂ ೧೭ ರ ವಿಭಾಗದ ಬಾಲಕರ ಹಾಗೂ ಬಾಲಕಿಯರ ಪಂದ್ಯಾಟಗಳಲ್ಲಿ ಒಟ್ಟು ಆರು ಚಿನ್ನ, ಎಂಟು ಬೆಳ್ಳಿ ಹಾಗೂ ಐದು ಕಂಚಿನ ಪದಕಗಳನ್ನು ಗಳಿಸಿ ವಿಷೇಶ ಸಾಧನೆಯನ್ನು ಗೈದ ಮಕ್ಕಳನ್ನು ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್ ಹಾಗೂ ಮುಖ್ಯೋಪಾಧ್ಯಾಯರಾದ ಶಿವಪ್ರಸಾದ್ ಭಟ್ ಇವರು ಅಭಿನಂದಿಸಿದ್ದಾರೆ.

ತಾಲ್ಲೂಕು ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡ ವಿದ್ಯಾರ್ಥಿಗಳಾದ ಭಾಂದವಿ ಸಿ, ಸೌಜನ್ಯ ಪಿ ಶೇಷಪ್ಪನವರ್, ಎಮ್ ಜಿ ದೃತಿ ಪಟೇಲ್ , ದೀಕ್ಷಿತ್ ಬಿ ಎನ್, ಜಯಂತ್ ಗೌಡ, ಶ್ರೆಯಸ್ ಸಿ ಲಿಂಗರಾಜು ಮತ್ತು ವಿ ಅಕುಲ್ ಸಾಯಿ.

Related posts

ಮಚ್ಚಿನ: ಕುದ್ರಡ್ಕ ಭಜನೋತ್ಸವ-2026 ಕಾರ್ಯಕ್ರಮ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಕಾರ್ಗಿಲ್ ವಿಜಯ ದಿವಸ ಆಚರಣೆ

Suddi Udaya

ನಾಪತ್ತೆಯಾಗಿದ್ದ ಯುವಕನ ಶವ ಪಲ್ಗುಣಿ ನದಿಯಲ್ಲಿ ಪತ್ತೆ

Suddi Udaya

ಪಡಂಗಡಿಯಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ

Suddi Udaya

ಅರಣ್ಯ ಇಲಾಖೆ ಬುಡಕಟ್ಟು ಸಮುದಾಯದ ಜೊತೆಗೆ ಸರ್ಕಾರವನ್ನು ಕೂಡ ವಂಚಿಸುತ್ತಿದೆ : ಹರೀಶ್ ಎಳನೀರ್

Suddi Udaya

ಇಂದಬೆಟ್ಟುನಲ್ಲಿ ಮೆಸ್ಕಾಂ 33ಕೆವಿ ಸಬ್‌ಸ್ಟೇಷನ್ ನಿರ್ಮಾಣಕ್ಕೆ 66 ಸೆಂಟ್ಸ್ ಜಾಗ ಮಂಜೂರು

Suddi Udaya
error: Content is protected !!